ಬೆಂಗಳೂರು ರಾಮೇಶ್ವರಂ ಕೆಫೆ ಸ್ಫೋಟ: ಇಬ್ಬರು ಆರೋಪಿಗಳ ಮಾಹಿತಿ ನೀಡಿದವರಿಗೆ ತಲಾ ₹10 ಲಕ್ಷ ಬಹುಮಾನ ಘೋಚಿಸಿದ ಎನ್‌ ಐ ಎ

ಬೆಂಗಳೂರು: ಬೆಂಗಳೂರು ರಾಮೇಶ್ವರಂ ಕೆಫೆ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಸುಧಾರಿತ ಸ್ಫೋಟಕ (ಐಇಡಿ) ಅಳವಡಿಸಿದ ಶಂಕಿತ ಮುಸಾವಿರ್ ಹುಸೇನ್ ಶಾಜಿಬ್ ಮತ್ತು ಪ್ರಕರಣದಲ್ಲಿ ಸಂಚು ರೂಪಿಸಿದ ಅಬ್ದುಲ್ ಮಥೀನ್ ಅಹ್ಮದ್ ತಾಹಾ ಎಂಬ ಶಂಕಿತ ಆರೋಪಿಗಳ ಮಾಹಿತಿಗಾಗಿ ಎನ್‌ಐಎ ಬಹುಮಾನ ಘೋಷಿಸಿದೆ.
ಬೆಂಗಳೂರು ಕೆಫೆ ಸ್ಫೋಟ ಪ್ರಕರಣದ ಇಬ್ಬರು ಶಂಕಿತರ ಬಗ್ಗೆ ಮಾಹಿತಿ ನೀಡಿದವರಿಗೆ ತಲಾ ₹10 ಲಕ್ಷ ಬಹುಮಾನ ನೀಡುವುದಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಪ್ರಕಟಿಸಿದೆ. ಇವರಿಬ್ಬರೂ ಈಗಾಗಲೇ 2020ರ ಭಯೋತ್ಪಾದನೆ ಪ್ರಕರಣದಲ್ಲಿ ಎನ್‌ಐಎಗೆ ಬೇಕಾಗಿದ್ದಾರೆ. ಈವರೆಗಿನ ತನಿಖೆಯಿಂದ ಶಾಜಿಬ್ ಮತ್ತು ಆತನ ಸಹ-ಆರೋಪಿ ತಾಹಾ ಸ್ಫೋಟಕ್ಕೆ ಕನಿಷ್ಠ ಎರಡು ತಿಂಗಳ ಮೊದಲು ಟ್ರಿಪ್ಲಿಕೇನ್‌ನಲ್ಲಿರುವ ಚೆನ್ನೈ ಲಾಡ್ಜ್‌ನಲ್ಲಿ ವಾಸಿಸುತ್ತಿದ್ದರು ಎಂದು ತಿಳಿದುಬಂದಿದೆ.

ಶಾಜಿಬ್‌ನ ಚಿತ್ರಗಳನ್ನು ಹೋಲುವ ಯಾವುದೇ ಶಂಕಿತರ ಬಗ್ಗೆ ಯಾವುದೇ ಮಾಹಿತಿಯನ್ನು ಒದಗಿಸಲು ಎನ್‌ಐಎ (NIA) ಸಾರ್ವಜನಿಕರಿಂದ ಸಹಾಯವನ್ನು ಕೋರಿದೆ. ಕರ್ನಾಟಕ, ತಮಿಳುನಾಡು ಮತ್ತು ಹತ್ತಿರದ ರಾಜ್ಯಗಳಲ್ಲಿನ ಲಾಡ್ಜ್‌ಗಳು, ಹುಡುಗರ ಹಾಸ್ಟೆಲ್‌ಗಳು ಮತ್ತು ಬಜೆಟ್ ಹೋಟೆಲ್‌ಗಳಿಗೆ ಏಜೆನ್ಸಿ ಎಚ್ಚರಿಕೆ ನೀಡಿದೆ ಏಕೆಂದರೆ ಶಂಕಿತರು ಅಂತಹ ವಸತಿಗೃಗಗಳು ಅಥವಾ ಜಾಡ್ಜ್‌ ಅನ್ನು ಬಳಸಲು ಬಯಸುತ್ತಾರೆ ಎಂದು ಅದು ಹೇಳಿದೆ.
ಬಾಂಬ್‌ ಇರಿಸಿದ ವ್ಯಕ್ತಿ ಸ್ಫೋಟ ನಡೆಸಿದ ಪ್ರಮುಖ ಆರೋಪಿ ಮುಸ್ಸಾವಿರ್ ಹುಸೇನ್‌ ಶಾಜೀಬ್ ಎಂಬಾತನ ಮೂರು ಫೋಟೋ ಬಿಡುಗಡೆ ಮಾಡಿದೆ. 30 ವರ್ಷ ವಯಸ್ಸಿನ ಈತ ಜಿಮ್‌ ಬಾಡಿ ಹೊಂದಿದ್ದು ಅಂದಾಜು 6.2 ಅಡಿ ಎತ್ತರವಿದ್ದಾನೆ. ಮೊಹಮ್ಮದ್‌ ಜುನೈದ್‌ ಸಯ್ಯದ್‌ ಹೆಸರಿನಲ್ಲಿ ಡ್ರೈವಿಂಗ್‌ ಲೈಸೆನ್ಸ್‌ ಹೊಂದಿದ್ದಾನೆ ಎಂದು ತಿಳಿಸಿದೆ. ಮತ್ತೊಬ್ಬ ಸಂಚುಕೋರ ಅಬ್ದುಲ್‌ ಮತೀನ್‌ ಅಹ್ಮದ್‌ 5.5 ಅಡಿ ಎತ್ತರವಿದ್ದು, ಮುಂದುಗಡೆ ತಲೆ ಬೋಳಾಗಿದೆ. ಹೆಚ್ಚಾಗಿ ಕ್ಯಾಪ್‌ ಧರಿಸುತ್ತಾನೆ. 30 ವರ್ಷದ ಈತ ವಿಘ್ನೇಶ ಅಥವಾ ಬೇರೆ ನಕಲಿ ಐಡಿ ದಾಖಲೆಯನ್ನು ಹೊಂದಿದ್ದಾನೆ ಎಂದು ಅದು ಹೇಳಿದೆ.

ಪ್ರಮುಖ ಸುದ್ದಿ :-   ಬೆಂಗಳೂರು ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ: 11 ಕಡೆ ಎನ್‌ಐಎ ದಾಳಿ

ಇಬ್ಬರು ಶಂಕಿತರ ಬಗ್ಗೆ ಮಾಹಿತಿ ಇರುವವರು ಅಥವಾ ಸಿಕ್ಕಿದರೆ [email protected] ಇಮೇಲ್ ಮೂಲಕ ಅಥವಾ ಕರೆ ಮೂಲಕ ಏಜೆನ್ಸಿಯನ್ನು ಸಂಪರ್ಕಿಸಬಹುದು ಎಂದು ಹೇಳಿದೆ. ಮಾಹಿತಿ ನೀಡಿದವರ ಹೆಸರು ಹಾಗೂ ಗುರುತನ್ನು ಗೌಪ್ಯವಾಗಿಡಲಾಗುವುದು ಎಂದು ಎನ್‌ಐಎ ತಿಳಿಸಿದೆ.
ಸಹ-ಆರೋಪಿ ಅಬ್ದುಲ್ ಮಥೀನ್ ಅಹ್ಮದ್ ತಾಹಾ ಓಡಿಹೋಗುವಾಗ ನಕಲಿ ಹಿಂದೂ ಹೆಸರನ್ನು (ಸುಮಿತ್ ಅಥವಾ ವಿಘ್ನೇಶ್) ಬಳಸುತ್ತಿರಬಹುದು ಎಂದು ಸಂಸ್ಥೆ ಎಚ್ಚರಿಸಿದೆ.
ಆರೋಪಿ ಅಬ್ದುಲ್ ಮಥೀನ್ ಅಹ್ಮದ್ ತಾಹಾ ಐಸಿಸ್ ಶಿವಮೊಗ್ಗ ಮಾಡ್ಯೂಲ್‌ನ ಮಾಸ್ಟರ್ ಮೈಂಡ್ ಮತ್ತು ಮಂಗಳೂರು ಆಟೋ ಸ್ಫೋಟ ಪ್ರಕರಣದ ಪ್ರಮುಖ ಹ್ಯಾಂಡ್ಲರ್ ಎಂದು ನಂಬಲಾಗಿದೆ. ಕಳೆದ ಮೂರು ವರ್ಷಗಳಿಂದ ಇವರಿಬ್ಬರು ಪರಾರಿಯಾಗಿದ್ದಾರೆ. ಅಲ್-ಹಿಂದ್ ಪ್ರಕರಣ ಸೇರಿದಂತೆ ಅನೇಕ ಪ್ರಕರಣಗಳಲ್ಲಿ ಎನ್‌ಐಎ ಅವರನ್ನು ಹೆಸರಿಸಿದೆ.

ಎನ್‌ಐಎ ತಂಡವು ಕರ್ನಾಟಕದ 12, ತಮಿಳುನಾಡಿನ 5 ಮತ್ತು ಉತ್ತರ ಪ್ರದೇಶದ 1 ಸೇರಿದಂತೆ 18 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದ ನಂತರ, ಮಾರ್ಚ್ 28 ರಂದು ಪ್ರಕರಣದ ಪ್ರಮುಖ ಸಹ ಸಂಚುಕೋರರಲ್ಲಿ ಒಬ್ಬರಾದ ಮುಝಮ್ಮಿಲ್ ಶರೀಫ್ ಎಂಬಾತನನ್ನು ಬಂಧಿಸಿತ್ತು. ಘಟನೆಯಲ್ಲಿ ಭಾಗಿಯಾಗಿರುವ ಇತರ ಆರೋಪಿಗಳಿಗೆ ಶರೀಫ್ ವ್ಯವಸ್ಥಾಪನಾ ಬೆಂಬಲ ನೀಡಿದ್ದಾನೆ ಎಂದು ಎನ್ಐಎ ಹೇಳಿದೆ.

ಪ್ರಮುಖ ಸುದ್ದಿ :-   ಮೈಸೂರು: ಮಲಗಿದ್ದ ಸ್ಥಿತಿಯಲ್ಲೇ ಒಂದೇ ಕುಟುಂಬದ ನಾಲ್ವರು ಸಾವು

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement