ಲೋಕಸಭೆ ಚುನಾವಣೆ: ಏ.3 ರಂದು ಮಂಡ್ಯದಲ್ಲೇ ಮತ್ತೊಂದು ಸಭೆ ನಡೆಸಿದ ನಂತರ ನಿರ್ಧಾರ ಪ್ರಕಟಿಸ್ತೇನೆ ; ಬೆಂಗಳೂರು ಸಭೆ ನಂತ್ರ ಸುಮಲತಾ

ಬೆಂಗಳೂರು : ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಬೆಂಬಲಿಗರು ಮತ್ತು ಅಭಿಮಾನಿಗಳ ಜೊತೆ ಚರ್ಚಿಸಿ ತನ್ನ ನಿರ್ಧಾರವನ್ನ ಇಂದು ಪ್ರಕಟಿಸುವುದಾಗಿ ತಿಳಿಸಿದ್ದ ಹಾಲಿ ಸಂಸದೆ ಸುಮಲತಾ ಅಂಬರೀಶ ಶನಿವಾರ (ಮಾರ್ಚ್‌ ೩೦) ಮಂಡ್ಯ ಲೋಕಸಭಾ ಕ್ಷೇತ್ರದ ಅಭಿಮಾನಿಗಳ ಸಭೆಯ ನಂತರ ಏಪ್ರಿಲ್ 3ಕ್ಕೆ ಮಂಡ್ಯದಲ್ಲಿ ತಮ್ಮ ನಿಲುವು ಪ್ರಕಟಿಸುವುದಾಗಿ ತಿಳಿಸಿದ್ದಾರೆ.
ಬೆಂಗಳೂರಿನ ಜೆ.ಪಿ ನಗರದ ನಿವಾಸದ ಬಳಿಗೆ ಆಗಮಿಸಿದ್ದ ನೂರಾರು ಬೆಂಬಲಿಗರು, ಅಭಿಮಾನಿಗಳನ್ನ ಉದ್ದೇಶಿಸಿ ಮಾತನಾಡಿದ ಸಂಸದೆ ಸುಮಲತಾ ಅಂಬರೀಶ, ನಿಮ್ಮಿಂದ ನನ್ನ 5 ವರ್ಷಗಳ ರಾಜಕೀಯ ಜೀವನ ಪ್ರಾರಂಭವಾಗಿದೆ. ನಿಮ್ಮ ಅನಿಸಿಕೆ ಹಂಚಿಕೊಳ್ಳಲು ಬಂದಿದ್ದೀರಾ. ನೀವೆ ನನಗೆ ಶಕ್ತಿ. ನನ್ನ ಜೊತೆ ಯಾವ ದೊಡ್ಡ ನಾಯಕರು ಇಲ್ಲ.  ನನಗೆ ಎಲ್ಲವೂ ನೀವೇ ಎಂದು ಹೇಳಿದರು.

ಮಂಡ್ಯ ಬಿಟ್ಟು ಬೇರೆ ಕಡೆ ಟಿಕೆಟ್ ಕೊಡುತ್ತೇವೆ ನಿಲ್ಲಿ ಎಂದರು, ಆದರೆ ನಾನು ಮಂಡ್ಯ ಕ್ಷೇತ್ರ ಹಾಗೂ ಕ್ಷೇತ್ರದ ಜನರನ್ನು ಬಿಡುವುದಿಲ್ಲ. ಏಪ್ರಿಲ್ 3 ರಂದು ಮಂಡ್ಯಕ್ಕೆ ಹೋಗಿ ಸಭೆ ಮಾಡುತ್ತೇನೆ. ಸಭೆಯ ನಂತರವೇ ನಂತರ ನನ್ನ ನಿರ್ಧಾರ ಪ್ರಕಟಿಸುತ್ತೇನೆ. ಅಭಿಮಾನಿಗಳು ಹಾಗೂ ಕಾರ್ಯಕರ್ತರಿಗೆ ನೋವಾಗುವ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ನಿಮ್ಮ ಪ್ರೀತಿ ವಿಶ್ವಾಸ ಹೀಗೆ ಇರಲಿ ಎಂದು ಎಂದು ಹೇಳಿದರು.

ಪ್ರಮುಖ ಸುದ್ದಿ :-   ಬಿಜೆಪಿ ಶಾಸಕ ಹರೀಶ ಪೂಂಜಾ ವಿರುದ್ದ ಮತ್ತೊಂದು ಎಫ್ಐಆರ್

ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ಮಂಡ್ಯದಲ್ಲಿ ಬಿಜೆಪಿ-ಜೆಡಿಎಸ್‌ ಮೈತ್ರಿಗೆ ಬೆಂಬಲ ನೀಡುವಂತೆ ಪಕ್ಷದ ವರಿಷ್ಠರು ಹೇಳುತ್ತಿದ್ದಾರೆ. ಮತ್ತು ಅಲ್ಲದೆ, ನನಗೆ ಸೂಕ್ತ ಸ್ಥಾನಮಾನದ ಭರವಸೆಯನ್ನೂ ನೀಡಿದ್ದಾರೆ. ನಿನ್ನೆ ಶುಕ್ರವಾರ ನನ್ನನ್ನು ಭೇಟಿಯಾಗಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಸಹ ತನಗೆ ಅದೇ ಮಾತನ್ನು ಹೇಳಿದ್ದಾರೆ. ಆದರೆ ಬೆಂಬಲಿಗರು ಮಂಡ್ಯದಿಂದ ಸ್ಪರ್ಧಿಸುವಂತೆ ಹೇಳುತ್ತಿದ್ದಾರೆ. ಹೀಗಾಗಿ ಇನ್ನೂ ಯಾವುದನ್ನೂ ನಿರ್ಧರಿಸಿಲ್ಲ, ಏಪ್ರಿಲ್ 3 ರಂದು ಮಂಡ್ಯದಲ್ಲಿ ಕಾರ್ಯಕರ್ತರ ಜೊತೆ ಮತ್ತೊಂದು ಸಭೆ ನಡೆಸಿ ತಮ್ಮ ಅಂತಿಮ ನಿರ್ಧಾರ ಪ್ರಕಟಿಸುವುದಾಗಿ ಸುಮಲತಾ ಹೇಳಿದರು.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement