ಖ್ಯಾತ ನಟ ಪ್ರಕಾಶ ಹೆಗ್ಗೋಡು ನಿಧನ

ಬೆಂಗಳೂರು: ಖ್ಯಾತ ನಟ, ರಂಗಕರ್ಮಿ ಪ್ರಕಾಶ ಹೆಗ್ಗೋಡು ಅನಾರೋಗ್ಯದಿಂದ ಶನಿವಾರ (ಮಾರ್ಚ್‌ 30) ನಿಧನರಾಗಿದ್ದಾರೆ.
ಅವರಿಗೆ 58 ವರ್ಷ ವಯಸ್ಸಾಗಿತ್ತು. ಕೆಲವು ದಿನಗಳ ಹಿಂದೆ ಅನಾರೋಗ್ಯಕ್ಕೆ ಒಳಗಾಗಿದ್ದ ಅವರು ಮಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ನಿಧನರಾಗಿದ್ದಾರೆ ಎಂದು ವರದಿಯಾಗಿದೆ.

ಯೇಸುಪ್ರಕಾಶ್‌ ಕಲ್ಲುಕೊಪ್ಪ ಎಂದೂ ಗುರುತಿಸ್ಪಡುತ್ತಿದ್ದ ಪ್ರಕಾಶ ಹೆಗ್ಗೋಡು ಶಿವಮೊಗ್ಗ ಜಿಲ್ಲೆಯ, ಸಾಗರ ತಾಲೂಕಿನ ಪುರಪ್ಪೆಮನೆಯವರು.
ಕನ್ನಡದ 35ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಪ್ರಕಾಶ ಹೆಗ್ಗೋಡು ಅವರು ಸಿನಿಮಾ, ರಂಗಭೂಮಿಗಳಲ್ಲಿ ಸಕ್ರಿಯರಾಗಿದ್ದರು. ಅಲ್ಲದೆ, ಪರಿಸರ ಹೋರಾಟದಲ್ಲಿಯೂ ಮುಂಚೂಣಿಯಲ್ಲಿದ್ದರು. ಅವರು ಪತ್ನಿ, ಇಬ್ಬರು ಪುತ್ರಿಯರು ಮತ್ತು ಓರ್ವ ಪುತ್ರನನ್ನು ಅಗಲಿದ್ದಾರೆ.
ನಟ ಯಶ್‌ ಅವರ ಜತೆ ʼರಾಜಾಹುಲಿʼ, ಶಿವರಾಜಕುಮಾರ ಅವರೊಂದಿಗೆ ʼಸಂತʼ, ʼಭಾಗ್ಯದ ಬಳೆಗಾರʼ, ಉಪೇಂದ್ರ ಅವರೊಂದಿಗೆ ʼಕಲ್ಪನಾ 2ʼ ಜತೆಗೆ ʼವೀರುʼ, ʼಮಾಡರ್ನ್‌ ಮಹಾಭಾರತʼ ಮುಂತಾದ ಸಿನಿಮಾಗಳಲ್ಲಿ ಖಳನಟನಾಗಿ, ಪೋಷಕ ನಟನಾಗಿ ಮಿಂಚಿದ್ದಾರೆ. ಇವರು ನೀನಾಸಂ ರಂಗ ತಂಡ ಸೇರಿ ಅನೇಕ ನಾಟಕಗಳಲ್ಲಿ ಅಭಿನಯಿಸಿದ್ದರು. ಯಕ್ಷಗಾನದ ಅಭಿನಯದ ತರಬೇತಿ ಪಡೆದಿದ್ದ ಪ್ರಕಾಶ ಅನೇಕ ಯಕ್ಷಗಾನ ಪಾತ್ರಗಳಿಗೂ ಬಣ್ಣ ಹಚ್ಚಿದ್ದರು.

ಪ್ರಮುಖ ಸುದ್ದಿ :-   ಬಿಜೆಪಿ ಶಾಸಕ ಹರೀಶ ಪೂಂಜಾ ವಿರುದ್ದ ಮತ್ತೊಂದು ಎಫ್ಐಆರ್

 

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement