ಸರ್ವರಿಗೂ ಕ್ರೋಧಿ ಸಂವತ್ಸರದ ಯುಗಾದಿಯ ಹಾರ್ದಿಕ ಶುಭಾಶಯಗಳು

ರಾಜ್ಯದಲ್ಲಿ ವಿದ್ಯುತ್​ ದರ ಇಳಿಕೆ : ಇಂದಿನಿಂದಲೇ ಜಾರಿ

ಬೆಂಗಳೂರು: ಲೋಕಸಭೆ ಚುನಾವಣೆ ಸಮಯದಲ್ಲಿ ಕರ್ನಾಟಕ ರಾಜ್ಯ ವಿದ್ಯುತ್​ಚ್ಛಕ್ತಿ ನಿಯಂತ್ರಣ ಆಯೋಗ(KERC)ಎಲ್ಲ ವರ್ಗದ ವಿದ್ಯುತ್​ ಬಳಕೆದಾರರಿಗೆ ಗುಡ್​ ನ್ಯೂಸ್​ ನೀಡಿದೆ. ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗ (KERC) ಫೆಬ್ರವರಿಯಲ್ಲಿ ಪ್ರಕಟಿಸಿದ ವಿದ್ಯುತ್‌ ದರ ಪರಿಷ್ಕರಣೆ ಆದೇಶ ಇಂದಿನಿಂದ ಜಾರಿಯಾಗಲಿದೆ. ಅಲ್ಲದೆ, ಕೈಗಾರಿಕೆ ಮತ್ತು ವಾಣಿಜ್ಯೋದ್ಯಮ ಬಳಕೆದಾರ ವರ್ಗದವರಿಗೆ ನಿಗದಿತ ಶುಲ್ಕದಲ್ಲೂ ಇಳಿಕೆಯಾಗಿದೆ.
ಆದೇಶದಂತೆ 100 ಯುನಿಟ್​ಗಿಂತ ಹೆಚ್ಚು ವಿದ್ಯುತ್‌ ಬಳಸುವವರಿಗೆ ಪ್ರತಿ ಯುನಿಟ್​ಗೆ 1.10 ರೂ. ಕಡಿಮೆ ಮಾಡಲಾಗಿದೆ.
ಈ ಮೂಲಕ 15 ವರ್ಷಗಳ ಬಳಿಕ ರಾಜ್ಯದಲ್ಲಿ ವಿದ್ಯುತ್ ದರ ಇಳಿಕೆಯಾಗಿದೆ. 2024-25ನೇ ಸಾಲಿಗೆ ಅನ್ವಯವಾಗುವಂತೆ ಈ ಪರಿಷ್ಕೃತ ದರ ಏಪ್ರಿಲ್​ 01ರಿಂದ ಜಾರಿಗೆ ಬರಲಿದೆ. ಎಲ್ಲಾ ಎಸ್ಕಾಂಗಳಿಗೂ ಏಕರೂಪದ ಗೃಹಬಳಕೆ ವಿದ್ಯುತ್​ ದರ ನಿಗದಿ ಮಾಡಲಾಗಿದೆ.

ಗೃಹ ಬಳಕೆಯಲ್ಲಿ ಮೊದಲು 100ಕ್ಕಿಂತ ಹೆಚ್ಚು ಯುನಿಟ್​ ವಿದ್ಯುತ್​ ಬಳಕೆ ಮಾಡುವವರಿಗೆ ಪ್ರತಿ ಯುನಿಟ್​​ಗೆ 7 ರೂ. ನಿಗದಿ ಮಾಡಲಾಗಿತ್ತು. ಇದೀಗ 7 ರೂ.ಗಳ ಬದಲಿಗೆ ಪ್ರತಿ ಯುನಿಟ್​ಗೆ 5.90 ರೂ. ಮಾತ್ರ ಶುಲ್ಕ ವಿಧಿಸಲಾಗುತ್ತದೆ. ಗ್ರಾಹಕರು 100ಕ್ಕಿಂತ ಹೆಚ್ಚು ಎಷ್ಟೇ ಯೂನಿಟ್‌ ಖರ್ಚು ಮಾಡಿದರೆ ಪ್ರತಿ ಯೂನಿಟ್‌ಗೆ 5.90 ರೂ. ದರ ನಿಗದಿ ಮಾಡಲಾಗಿದೆ.
ಸರ್ಕಾರ 200 ಯೂನಿಟ್‌ ಒಳಗೆ ಬಳಸುವವರಿಗೆ ಗೃಹಜ್ಯೋತಿ ಯೋಜನೆಯಡಿ ಈ ಯೋಜನೆಯ ಸೌಲಭ್ಯ ಪಡೆಯದವರು ಹಾಗೂ ತಿಂಗಳಿಗೆ 100 ಯೂನಿಟ್‌ಗಿಂತ ಹೆಚ್ಚು ವಿದ್ಯುತ್ ಬಳಸುವವರಿಗೆ ಇದರ ಲಾಭ ಸಿಗಲಿದೆ. ಮೇ ತಿಂಗಳಿನಲ್ಲಿ ಬರುವ ಬಿಲ್‌ನಲ್ಲಿ ಈ ದರ ಅನ್ವಯವಾಗಲಿದೆ.

ಪ್ರಮುಖ ಸುದ್ದಿ :-   ಜೇನು ಹುಳುಗಳ ದಾಳಿಯಿಂದ 30ಕ್ಕೂ ಹೆಚ್ಚು ಪ್ರವಾಸಿಗರಿಗೆ ಗಾಯ : ಸಾತೊಡ್ಡಿ ಜಲಪಾತಕ್ಕೆ ಪ್ರವಾಸಿಗರಿಗೆ ನಿರ್ಬಂಧ

 

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement