ಸರ್ವರಿಗೂ ಕ್ರೋಧಿ ಸಂವತ್ಸರದ ಯುಗಾದಿಯ ಹಾರ್ದಿಕ ಶುಭಾಶಯಗಳು

98.52 ಕೋಟಿ ರೂ. ಮೊತ್ತದ ಬಿಯರ್-ಕಚ್ಚಾ ವಸ್ತು ಜಪ್ತಿ

ಮೈಸೂರು: ಇಲ್ಲಿನ ತಾಂಡ್ಯ ಕೈಗಾರಿಕಾ ಪ್ರದೇಶದಲ್ಲಿರುವ ಯುನೈಟೆಡ್ ಬ್ರಿವರೀಸ್ ಲಿಮಿಟೆಡ್ ಘಟಕದ ಮೇಲೆ ಅಬಕಾರಿ (Excise) ಜಂಟಿ ಆಯುಕ್ತರ ನೇತೃತ್ವದ ತಂಡ ದಾಳಿ ನಡೆಸಿದ್ದು, ಒಟ್ಟು 98.52 ಕೋಟಿ ರೂ. ಮೊತ್ತದ ಬಿಯರ್ ದಾಸ್ತಾನು ಜಪ್ತಿ ಮಾಡಿದೆ. ಘಟಕದ ಮೇಲೆ ಪ್ರಕರಣವನ್ನು ದಾಖಲಿಸಲಾಗಿದೆ.
ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿಗೆ ಬಂದ ಅನಾಮಧೇಯ ದೂರವಾಣಿ ಕರೆಯ ಮೇರೆಗೆ ಜಿಲ್ಲಾ ಚುನಾವಣಾಧಿಕಾರಿಯೂ  ಆಗಿರುವ ಜಿಲ್ಲಾಧಿಕಾರಿ ಆದೇಶದನ್ವಯ ಮೈಸೂರು (Mysuru) ಜಿಲ್ಲೆಯ ತಾಂಡ್ಯ ಕೈಗಾರಿಕಾ ಪ್ರದೇಶದಲ್ಲಿರುವ ಬಿಯರ್ (Beer) ತಯಾರಿಕಾ ಘಟಕದಲ್ಲಿ ಸರ್ಕಾರಕ್ಕೆ ತೋರಿಸಿರುವ ದಾಸ್ತಾನು ಲೆಕ್ಕಕ್ಕಿಂತ ಅಧಿಕ ದಾಸ್ತಾನು ಸಂಗ್ರಹ ಪತ್ತೆಯಾಗಿದೆ.

7000 ಸಾವಿರ ವಿವಿಧ ಬ್ರಾಂಡಿನ ಪೆಟ್ಟಿಗೆಗಲ್ಲಿ ಬಿಯರ್ ಬಾಟಲಿಗಳು ಪತ್ತೆಯಾಗಿದೆ. ಯುಟಿ ಟ್ಯಾಂಕ್, ಸೈಲೋಸ್ ಟ್ಯಾಂಕ್‌ಗಳಲ್ಲಿರುವ ಕಚ್ಚಾ ವಸ್ತು ಸಮೇತ ಜಪ್ತಿ ಮಾಡಿದ್ದು, ಈ ಸಂಬಂಧ 17 ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ದಾಖಲೆ ಪರಿಶೀಲಿಸಿದಾಗ ಲೆಕ್ಕಪುಸ್ತಕದ ದಾಸ್ತಾನಿಗಿಂತ ಹೆಚ್ಚಿನ ಬಿಯರ್ ದಾಸ್ತಾನು ಕಂಡುಬಂದಿದೆ. ಈ ಹಿನ್ನೆಲೆ ಅವುಗಳನ್ನು ಜಪ್ತಿ ಮಾಡಿ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಬಸ್ಸಿ​​ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಹೃದಯಾಘಾತದಿಂದ ಸಾವು

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement