ಬಳ್ಳಾರಿ : 2024 ರ ಲೋಕಸಭೆ ಚುನಾವಣೆಗೆ ಮುನ್ನ ಬಳ್ಳಾರಿ ಪೊಲೀಸರು ನಡೆಸಿದ ಪ್ರಮುಖ ದಾಳಿಯಲ್ಲಿ 5.60 ಕೋಟಿ ರೂಪಾಯಿ ನಗದು, 3 ಕೆಜಿ ಚಿನ್ನ, 103 ಕೆಜಿ ಬೆಳ್ಳಿ ಆಭರಣಗಳು ಮತ್ತು 68 ಬೆಳ್ಳಿಯ ತುಂಡುಗಳನ್ನು ಬಳ್ಳಾರಿ ಪಟ್ಟಣದಲ್ಲಿ ವಶಪಡಿಸಿಕೊಂಡಿದ್ದಾರೆ.
ಬಳ್ಳಾರಿಯ (Bellary) ಬ್ರೂಸ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಕಂಬಳಿ ಬಜಾರ್‌ನಲ್ಲಿರುವ ಜ್ಯೂವೆಲರಿ ಶಾಪ್ ಮಾಲೀಕರ ಮನೆಯಲ್ಲಿ ಹಣ, ಆಭರಣಗಳನ್ನು ಜಪ್ತಿ ಮಾಡಲಾಗಿದೆ
₹ 5.6 ಕೋಟಿ ಮೊತ್ತದ ಅಪಾರ ಪ್ರಮಾಣದ ನಗದು ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕೋಟ್ಯಂತರ ಮೌಲ್ಯದ ಚಿನ್ನಾಭರಣ ಹಾಗೂ ಬೆಳ್ಳಿಯ ತುಣುಕುಗಳು ಪತ್ತೆಯಾಗಿವೆ. ಒಟ್ಟು ₹ 7.60 ಕೋಟಿ ವಸೂಲಾತಿಯಾಗಿದೆ.
ಜ್ಯುವೆಲ್ಲರಿ ಮಾಲೀಕ ನರೇಶ ಅವರ ಮನೆಯಲ್ಲಿ ಅಪಾರ ಪ್ರಮಾಣದ ನಗದು ಮತ್ತು ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಸಂಭಾವ್ಯ ಹವಾಲಾ ಸಂಪರ್ಕವನ್ನು ಶಂಕಿಸಿದ್ದಾರೆ ಮತ್ತು ಕರ್ನಾಟಕ ಪೊಲೀಸ್ ಕಾಯ್ದೆಯ ಸೆಕ್ಷನ್ 98 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ತನಿಖೆಯ ಫಲಿತಾಂಶಗಳನ್ನು ಹೆಚ್ಚಿನ ವಿಚಾರಣೆಗಾಗಿ ಆದಾಯ ತೆರಿಗೆ ಇಲಾಖೆಗೆ ರವಾನಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ