ಮುಂಬೈ : ಬಾಲಿವುಡ್ ನಟ ಸಂಜಯ ದತ್ತ ಮುಂಬರುವ ಲೋಕಸಭೆ ಚುನಾವಣೆಯಲ್ಲಿ 2024 ರಲ್ಲಿ ಹರಿಯಾಣದಿಂದ ಸ್ಪರ್ಧಿಸಬಹುದು ಎಂಬ ವದಂತಿಗಳ ಬಗ್ಗೆ ನಟ ಸಂಜಯ ದತ್ತ ಪ್ರತಿಕ್ರಿಯಿಸಿದ್ದಾರೆ.
ಅಂತಹ ಎಲ್ಲಾ ವದಂತಿಗಳನ್ನು ತಳ್ಳಿಹಾಕಿರುವ ಅವರು ಈ ಬಗ್ಗೆ ತನ್ನ X (ಹಿಂದೆ ಟ್ವಿಟರ್ ಎಂದು ಕರೆಯಲಾಗುತ್ತಿತ್ತು) ಪೋಸ್ಟ್‌ನಲ್ಲಿ ಸ್ಪಷ್ಟನೆ ನೀಡಿದ್ದಾರೆ. ಸಂಜಯ ದತ್ತ ಅವರು ತಮ್ಮ ಹೇಳಿಕೆಯಲ್ಲಿ, ನಾನು ರಾಜಕೀಯಕ್ಕೆ ಪ್ರವೇಶಿಸಿದರೆ ಅದನ್ನು ಘೋಷಿಸುವ ಮೊದಲ ವ್ಯಕ್ತಿ ನಾನೇ ಎಂದು ಹೇಳಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಸಂಜಯ ದತ್ತ ಅವರು ಹರ್ಯಾಣದಿಂದ ಸ್ಪರ್ಧಿಸುತ್ತಾರೆ ಎಂಬ ಬದಂತಿ ಹರಡಿತ್ತು. ಅವರ ಪೂರ್ವಜರ ಮನೆ ಹರಿಯಾಣದ ಯಮುನಾನಗರದಲ್ಲಿದೆ.
ಸಂಜಯ ದತ್ತ ಹೇಳಿದ್ದೇನು?
ಬಾಲಿವುಡ್ ನಟ ಸಂಜಯ ದತ್ತ ಅವರು ಸೋಮವಾರ ತಾವು ರಾಜಕೀಯಕ್ಕೆ ಪ್ರವೇಶಿಸುವ ವದಂತಿಗಳನ್ನು ತಳ್ಳಿಹಾಕಿದ್ದಾರೆ. “ನಾನು ರಾಜಕೀಯಕ್ಕೆ ಸೇರುತ್ತೇನೆ ಎಂಬ ಎಲ್ಲಾ ವದಂತಿಗಳಿಗೆ ನಾನು ವಿರಾಮ ಹಾಕಲು ಬಯಸುತ್ತೇನೆ. ನಾನು ಯಾವುದೇ ಪಕ್ಷಕ್ಕೆ ಸೇರುವುದಿಲ್ಲ ಅಥವಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ನಾನು ರಾಜಕೀಯ ಕ್ಷೇತ್ರಕ್ಕೆ ಕಾಲಿಡಲು ನಿರ್ಧರಿಸಿದರೆ ಅದನ್ನು ಘೋಷಿಸುವ ಮೊದಲ ವ್ಯಕ್ತಿ ನಾನೇ. ಸದ್ಯಕ್ಕೆ ನನ್ನ ಬಗ್ಗೆ ಏನೆಲ್ಲಾ ಸುದ್ದಿಗಳು ಹರಿದಾಡುತ್ತಿವೆ ದಯವಿಟ್ಟು ವದಂತಿ ನಂಬಬೇಡಿ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಸಂಜಯ ದತ್ತ ಅವರ ತಂದೆ ತಂದೆ ಸುನೀಲ ದತ್ತ ಮನಮೋಹನ್ ಸಿಂಗ್ ನೇತೃತ್ವದ ಕೇಂದ್ರದ ಯುಪಿಎ ಸರ್ಕಾರದಲ್ಲಿ ಸಚಿವರಾಗಿದ್ದರು. ಅವರ ಸಹೋದರಿ ಪ್ರಿಯಾ ದತ್ತ ಕೂಡ ಸಂಸದರಾಗಿದ್ದರು. ಹರಿಯಾಣದ ಕರ್ನಾಲ್ ಕ್ಷೇತ್ರಕ್ಕೆ ಬಿಜೆಪಿ ವಿರುದ್ಧ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಕಾಂಗ್ರೆಸ್ ಬಯಸಿದೆ. ಹೀಗಾಗಿ ಸಂಜಯ ದತ್ತ ಹೆಸರು ಸ್ಪರ್ಧಿಸುತ್ತಾರೆ ಎಂಬ ವದಂತಿಗೆ ಕಾರಣವಾಯಿತು. ನಟ ಐಎನ್‌ಎಲ್‌ಡಿ ನಾಯಕ ಅಭಯ ಸಿಂಗ್ ಚೌತಾಲಾ ಪರ ಪ್ರಚಾರ ಮಾಡಲು ಹರ್ಯಾಣಕ್ಕೆ ಹಲವಾರು ಬಾರಿ ಬಂದಿದ್ದರು. ಈಗ ಅವರೇ ಅಲ್ಲಿಂದ ಚುನಾವಣೆಗೆ ಸ್ಪರ್ಧಿಸಬಹುದು. ಬಹುಶಃ ಅದಕ್ಕಾಗಿಯೇ ಇಂತಹ ವದಂತಿಗಳು ಹೆಡ್‌ಲೈನ್ಸ್ ಪಡೆದವು. ಈಗ ಸಂಜಯ ದತ್ತ ಅವರೇ ಅಂತಹ ಎಲ್ಲಾ ಸುದ್ದಿಗಳನ್ನು ತಳ್ಳಿಹಾಕಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ