ಚುನಾವಣೆಯಲ್ಲಿ ತಮ್ಮ ಮಗ ಸೋಲಬೇಕು ಎಂದ ಹಿರಿಯ ಕಾಂಗ್ರೆಸ್ ನಾಯಕ…!

ತಿರುವನಂತಪುರಂ: ಕೇರಳದ ಪತ್ತನಂತಿಟ್ಟ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ತಮ್ಮ ಪುತ್ರ ಅನಿಲ ಕೆ. ಆಂಟನಿ ಚುನಾವಣೆಯಲ್ಲಿ ಗೆಲ್ಲಬಾರದು ಎಂದು ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಕೇಂದ್ರ ರಕ್ಷಣಾ ಸಚಿವ ಎ.ಕೆ.ಆಂಟನಿ ಹೇಳಿದ್ದಾರೆ.
ಸುದೀರ್ಘ ಸಮಯದ ನಂತರ ಮೌನ ಮುರಿದ ಎ.ಕೆ.ಆಂಟನಿ ತಮ್ಮ ಮಗ ಸೋಲಬೇಕು, ಅವರ ವಿರುದ್ಧ ಸ್ಪರ್ಧಿಸಿರುವ ದಕ್ಷಿಣ ಕೇರಳ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಂಟೊ ಆಂಟೋನಿ ಅವರನ್ನು ಸಂಪೂರ್ಣ ಬಹುಮತದಿಂದ ಗೆಲ್ಲಿಸಬೇಕು ಎಂದು ಹೇಳಿದ್ದಾರೆ.
83ರ ಹರೆಯದ ಕೇರಳದ ಮಾಜಿ ಮುಖ್ಯಮಂತ್ರಿ ಆಂಟನಿ, ‘ಭಾರತ ಮತ್ತು ಅದರ ಸಂವಿಧಾನ ರಕ್ಷಿಸಲು ಹಾಗೂ ಇದು ಚುನಾವಣೆಯಾಗಿರುವುದರಿಂದ ಹೊರಗೆ ಬಂದು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಭಾವಿಸಿದ್ದರಿಂದ ತಮ್ಮ ಆರೋಗ್ಯ ಸಮಸ್ಯೆಗಳನ್ನು ಬದಿಗಿಟ್ಟು ಬಂದು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ್ದೇನೆ ಎಂದರು. ಇದು ಮಾಡು ಇಲ್ಲವೇ ಮಡಿ ಹೋರಾಟವಾಗಿದೆ” ಎಂದು ಹೇಳಿದರು.

ಕಾಂಗ್ರೆಸ್ ಪಕ್ಷದ ಪರ ಪ್ರಚಾರಕ್ಕಾಗಿ ತಿರುವನಂತಪುರದಿಂದ ಹೊರಗೆ ಹೋಗದಿರಲು ಆರೋಗ್ಯ ಸಮಸ್ಯೆಗಳು ಕಾರಣ ಎಂದು ಅವರು ಹೇಳಿದರು ಮತ್ತು ಪತ್ತನಂತಿಟ್ಟದಲ್ಲಿ ಪ್ರಚಾರಕ್ಕೆ ಹೋಗದಿದ್ದರೂ ಆಂಟೋ ಆಂಟೋನಿ ಸಂಪೂರ್ಣ ಬಹುಮತದಿಂದ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
“ನನಗೆ ಕುಟುಂಬ ಮತ್ತು ರಾಜಕೀಯ ವಿಭಿನ್ನವಾಗಿದೆ. ಈ ನಿಲುವು ಹೊಸದಲ್ಲ; ನಾನುಕೇರಳ ಸ್ಟೂಡೆಂಟ್ಸ್ ಯೂನಿಯನ್(ಕೆಎಸ್‌ಯು)ನಲ್ಲಿದ್ದ ದಿನಗಳಿಂದಲೂ ಅದನ್ನು ಉಳಿಸಿಕೊಂಡಿದ್ದೇನೆ” ಎಂದು ಆಂಟನಿ ಹೇಳಿದರು. ಕೇರಳ ಸ್ಟೂಡೆಂಟ್ಸ್ ಯೂನಿಯನ್ (ಕೆಎಸ್‌ಯು) ಕೇರಳದ ಕಾಂಗ್ರೆಸ್‌ನ ವಿದ್ಯಾರ್ಥಿ ಸಂಘಟನೆಯಾಗಿದೆ.‘ಕಾಂಗ್ರೆಸ್ ನನ್ನ ಧರ್ಮ’ ಎಂದ ಆ್ಯಂಟನಿ ಅವರು ತಮ್ಮ ಮಗನ ರಾಜಕೀಯದ ಬಗ್ಗೆ ಪದೇ ಪದೇ ಕೇಳುತ್ತಿರುವ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು.

ತಮ್ಮ ತಂದೆಯ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಅನಿಲ ಆಂಟನಿ, ಕಾಂಗ್ರೆಸ್ ಹಳೆಯ ನಾಯಕರನ್ನು ಹೊಂದಿದೆ ಮತ್ತು ಇತ್ತೀಚೆಗೆ ಪುಲ್ವಾಮಾ ಭಯೋತ್ಪಾದಕ ದಾಳಿ ಕುರಿತು ಹೇಳಿಕೆಗಳನ್ನು ನೀಡಿ ವಿವಾದ ಸೃಷ್ಟಿಸಿದ್ದ ಹಾಲಿ ಸಂಸದ ಮತ್ತು ಕಾಂಗ್ರೆಸ್ ಸದಸ್ಯ ಆಂಟೋ ಆಂಟೋನಿ ಅವರನ್ನು ಬೆಂಬಲಿಸಿದ್ದಕ್ಕಾಗಿ ಮಾಜಿ ರಕ್ಷಣಾ ಸಚಿವ ತಮ್ಮ ತಂದೆ ಬಗ್ಗೆ ಸಹಾನುಭೂತಿ ಇದೆ ಎಂದು ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅನಿಲ, ಪತ್ತನಂತಿಟ್ಟದಲ್ಲಿ ನಾನೇ ಗೆಲ್ಲುತ್ತೇನೆ ಎಂದು ಹೇಳಿದ್ದಾರೆ.
ಅನಿಲ ಆಂಟನಿ ಮತ್ತು ಕಾಂಗ್ರೆಸ್ ದಿಗ್ಗಜ ದಿವಂಗತ ಕೆ. ಕರುಣಾಕರನ್ ಅವರ ಪುತ್ರಿ ಪದ್ಮಜಾ ವೇಣುಗೋಪಾಲ ಅವರು ಕೇರಳದಲ್ಲಿ ಬಿಜೆಪಿಗೆ ಸೇರ್ಪಡೆಯಾದ ನಂತರ ಪಕ್ಷವು ರಕ್ಷಣಾತ್ಮಕ ನಡೆಯಲ್ಲಿದ್ದು, ಎಕೆ ಆಂಟನಿ ಅವರ ನಿಲುವು ಕಾಂಗ್ರೆಸ್‌ಗೆ ದೊಡ್ಡ ಉತ್ತೇಜನ ನೀಡಿದಂತಾಗಿದೆ.

ಪ್ರಮುಖ ಸುದ್ದಿ :-   ಬಿಜೆಪಿಯ ಭರ್ತೃಹರಿ ಮಹತಾಬ್ ಲೋಕಸಭೆಯ ಹಂಗಾಮಿ ಸ್ಪೀಕರ್

ಕೋವಿಡ್-19 ರ ನಂತರದ ಅವರ ಸುದೀರ್ಘ ಪತ್ರಿಕಾಗೋಷ್ಠಿಯಲ್ಲಿ ಆಂಟನಿ, ಕೇರಳದ ಬಿಜೆಪಿ ಮತ್ತು ಎಡರಂಗದ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದರು. ಭಾರತವನ್ನು ‘ಪುನಃಶೋಧಿಸಲು’ ಮತ್ತು ಭಾರತೀಯ ಸಂವಿಧಾನದ ಆತ್ಮವನ್ನು ರಕ್ಷಿಸಲು ಜನರು ಕಾಂಗ್ರೆಸ್‌ನ ಹಿಂದೆ ಏಕೆ ಒಟ್ಟುಗೂಡಬೇಕು ಎಂದು ಪುನರುಚ್ಚರಿಸಿದರು.
“ಕೇಂದ್ರದಲ್ಲಿ ಆಡಳಿತ ನಡೆಸುವ ಪಕ್ಷವು ಭಾರತದ ಪರಿಕಲ್ಪನೆಯನ್ನು ನಾಶಮಾಡಲು ಪ್ರಯತ್ನಿಸುತ್ತಿದೆ ಮತ್ತು ಈ ಅಪಾಯವನ್ನು ಹೇಗೆ ನಿಲ್ಲಿಸುವುದು ಎಂಬುದೇ ಪ್ರಮುಖ ಪ್ರಶ್ನೆಯಾಗಿದೆ” ಎಂದು ಆಂಟನಿ ಹೇಳಿದರು.
ಕೇರಳದಲ್ಲಿ ಬಿಜೆಪಿಯ ಸುವರ್ಣ ವರ್ಷಗಳು ಈಗಾಗಲೇ ಮುಗಿದಿದ್ದು, ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲಿ ಎನ್‌ಡಿಎ ಮೂರನೇ ಸ್ಥಾನಕ್ಕೆ ಬರಲಿದೆ ಎಂದರು. “ದಯವಿಟ್ಟು ಇದನ್ನು ಬರೆದು ಇಟ್ಟುಕೊಳ್ಳಿ. ಅವರು ಕೇರಳದ ಎಲ್ಲಾ ಕ್ಷೇತ್ರಗಳಲ್ಲಿ 3 ನೇ ಸ್ಥಾನ ಗಳಿಸುತ್ತಾರೆ” ಎಂದು ಆಂಟನಿ ಹೇಳಿದರು.
ಶಬರಿಮಲೆ ಮಹಿಳೆಯರ ಪ್ರವೇಶ ವಿವಾದದಿಂದಾಗಿ 2019 ರ ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ ಬಿಜೆಪಿಯ ಸುವರ್ಣ ಯುಗವಾಗಿದೆ ಮತ್ತು ಅವರು ಕೆಲವು ಹೆಚ್ಚುವರಿ ಮತಗಳನ್ನು ಗಳಿಸಿರಬಹುದು ಎಂದು ಅವರು ಹೇಳಿದರು.”ಈ ವರ್ಷ, ಬಿಜೆಪಿಗೆ ಅನುಕೂಲವಾಗುವ ಯಾವುದೇ ಅಂಶವಿಲ್ಲ, ಮತ್ತು ಅವರು ಕಡಿಮೆ ಮತಗಳನ್ನು ಪಡೆಯಲಿದ್ದಾರೆ” ಎಂದು ಆಂಟನಿ ಹೇಳಿದರು.

ಪ್ರಮುಖ ಸುದ್ದಿ :-   ಅಬಕಾರಿ ನೀತಿ ಹಗರಣ: ದೆಹಲಿ ಸಿಎಂ ಅರವಿಂದ ಕೇಜ್ರಿವಾಲಗೆ ಜಾಮೀನು

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ತರಾಟೆಗೆ ತೆಗೆದುಕೊಂಡ ಆಂಟನಿ, ವಿಜಯನ್ ಅಥವಾ ಅವರ ಪಕ್ಷವು ಭಾರತದ ಸಂವಿಧಾನ ರಚನೆಯೊಂದಿಗೆ ಯಾವುದೇ ಸಂಬಂಧ ಹೊಂದಿಲ್ಲ ಮತ್ತು ಅದರ ರಚನೆಯ ಸಂಪೂರ್ಣ ಶ್ರೇಯಸ್ಸು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮತ್ತು ಡಾ ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.”ಅವರ ಪಕ್ಷ (ಕಮ್ಯುನಿಸ್ಟ್) ಭಾರತಕ್ಕೆ ದೊರೆತ ಸ್ವಾತಂತ್ರ್ಯವು ಸ್ವಾತಂತ್ರ್ಯವಲ್ಲ ಎಂದು ಪ್ರತಿಪಾದಿಸಿತು ಮತ್ತು ಕಲ್ಕತ್ತಾ ಥಿಸಿಸ್‌ ಮೂಲಕ ನೆಹರೂ ಸರ್ಕಾರದ ವಿರುದ್ಧ ಸಶಸ್ತ್ರ ದಂಗೆಗೆ ಕರೆ ನೀಡಿತ್ತು ಎಂದು ಆಂಟನಿ ಆರೋಪಿಸಿದರು.
“ಕಲ್ಕತ್ತಾ ಥಿಸಿಸ್‌ʼ 1948 ರಲ್ಲಿ ಕಲ್ಕತ್ತಾದಲ್ಲಿ ನಡೆದ ತನ್ನ ಎರಡನೇ ಕಾಂಗ್ರೆಸ್‌ನಲ್ಲಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ) ರೂಪಿಸಿದ ದಾಖಲೆಯನ್ನು ಉಲ್ಲೇಖಿಸುತ್ತದೆ. ಇದು ಜವಾಹರಲಾಲ್ ನೆಹರು ನೇತೃತ್ವದ ಭಾರತ ಸರ್ಕಾರದ ವಿರುದ್ಧ ಸಶಸ್ತ್ರ ಕ್ರಾಂತಿಯ ತಂತ್ರವನ್ನು ಪ್ರತಿಪಾದಿಸಿತು.
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಬಹುಮತವನ್ನು ಹೊಂದಿರುವ ಸಂವಿಧಾನ ಸಮಿತಿಯು ಬಿ ಆರ್ ಅಂಬೇಡ್ಕರ ಅವರ ಸಹಾಯದಿಂದ ಸಂವಿಧಾನವನ್ನು ರಚಿಸಿದೆ ಎಂದು ಆಂಟನಿ ಹೇಳಿದರು ಮತ್ತು ಪಿಣರಾಯಿ ವಿಜಯನ್ ಅವರಿಗೆ ಸಂವಿಧಾನವನ್ನು ರಕ್ಷಿಸಲು ಕರೆ ನೀಡುವಾಗ ಕಾಂಗ್ರೆಸ್ ಅನ್ನು ಟೀಕಿಸುವ ಯಾವುದೇ ಹಕ್ಕಿಲ್ಲ ಎಂದು ಪ್ರತಿಪಾದಿಸಿದರು.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement