ಬೆಂಗಳೂರು: ಕಾನೂನು ಅಭ್ಯಾಸ ಮಾಡುವವರೂ ವಂಚಕರಿಂದ ಮುಕ್ತರಾಗಿಲ್ಲ ಎಂಬ ಸಂಕೇತವಾಗಿ ಬೆಂಗಳೂರಿನ ಮಹಿಳಾ ವಕೀಲರೊಬ್ಬರಿಗೆ 14 ಲಕ್ಷ ರೂ.ಗಳಿಗೂ ಅಧಿಕ ಹಣ ವಂಚನೆ ಮಾಡಲಾಗಿದೆ ಎಂದು ವರದಿಯಾಗಿದೆ. ಅಲ್ಲದೆ, ಮಾದಕ ದ್ರವ್ಯ ಪರೀಕ್ಷೆ (Narcotics Test) ಹೆಸರಿನಲ್ಲಿ ವೀಡಿಯೊ ಮೂಲಕ ಬಟ್ಟೆ ತೆಗೆಯುವಂತೆ ಬಲವಂತ ಮಾಡಲಾಗಿದೆ. ನಂತರ ಮಹಿಳೆಯ ನಗ್ನ ವೀಡಿಯೋಗಳನ್ನು ಬಳಸಿಕೊಂಡು ಆಕೆಯಿಂದ ಹೆಚ್ಚುವರಿಯಾಗಿ ₹ 10 ಲಕ್ಷ ಸುಲಿಗೆ ಮಾಡಲು ಪ್ರಯತ್ನಿಸಲಾಗಿದೆ. ಕೊನೆಗೆ ಮಹಿಳೆ ಪೊಲೀಸ್ ದೂರು ದಾಖಲಿಸಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ವರದಿ ಪ್ರಕಾರ, ಮುಂಬೈ ಸೈಬರ್ ಕ್ರೈಮ್ ತಂಡದವರು ಎಂದು ಹೇಳಿಕೊಂಡ ಗುಂಪೊಂದು 29 ವರ್ಷದ ಮಹಿಳೆಯನ್ನು ವರ್ಚುವಲ್‌ನಲ್ಲಿ ಸುಮಾರು ಎರಡು ದಿನಗಳ ಕಾಲ ಒತ್ತೆಯಾಳಾಗಿ ಇರಿಸಿಕೊಂಡು, ಎಲ್ಲಾ ಸಮಯದಲ್ಲೂ ತನ್ನ ವೀಡಿಯೊ ಕ್ಯಾಮೆರಾ ಅಥವಾ ಮೈಕ್ರೊಫೋನ್ ಆನ್ ಇಟ್ಟುಕೊಳ್ಳುವಂತೆ ಮಾಡಿ ನಂತರ ವರ್ಚುವಲ್‌ನಲ್ಲಿ ರೆಕಾರ್ಡಿಂಗ್ ಮಾಡಲಾಗಿದೆ.
ಕಳೆದ ಬುಧವಾರ (ಏಪ್ರಿಲ್ 3) ಫೆಡ್‌ಎಕ್ಸ್‌ನಿಂದ ಬಂದವರೆಂದು ಹೇಳಿಕೊಳ್ಳುವ ಯಾರೋ ಕರೆ ಮಾಡಿದಾಗ ಆಕೆಗೆ ವಂಚನೆಯ ಮೊದಲನೇ ಹಂತ ಪ್ರಾರಂಭವಾಯಿತು, ಅವರು ತಮ್ಮ ಹೆಸರಿನಲ್ಲಿರುವ ಪಾರ್ಸೆಲ್ ಹಿಂತಿರುಗಿ ಬಂದಿದೆ ಎಂದು ಹೇಳಿದರು. ಮುಂಬೈನಿಂದ ಥೈಲ್ಯಾಂಡ್‌ಗೆ ಪಾರ್ಸೆಲ್ ಕಳುಹಿಸಲಾಗಿತ್ತು ಮತ್ತು ಐದು ಪಾಸ್‌ಪೋರ್ಟ್‌ಗಳು, ಮೂರು ಕ್ರೆಡಿಟ್ ಕಾರ್ಡ್‌ಗಳು ಮತ್ತು ನಿಷೇಧಿತ ಡ್ರಗ್ ಎಂಡಿಎಂಎಯ 140 ಮಾತ್ರೆಗಳನ್ನು ಹೊಂದಿತ್ತು ಎಂದು ಆಕೆಗೆ ತಿಳಿಸಲಾಯಿತು ಎಂದು ಮಹಿಳೆ ದೂರಿನಲ್ಲಿ ಹೇಳಿದ್ದಾರೆ ಎಂದು ವರದಿ ಹೇಳಿದೆ.
ತನಗೂ ಪಾರ್ಸೆಲ್‌ಗೂ ಯಾವುದೇ ಸಂಬಂಧವಿಲ್ಲ ಎಂದು ಮಹಿಳೆ ಹೇಳಿದಾಗ, ತಮ್ಮ ಗುರುತು ಕಳ್ಳತನ ಮಾಡಿದ (identity theft.) ದೂರನ್ನು ದಾಖಲಿಸಲು ಮುಂಬೈನಲ್ಲಿರುವ ಸೈಬರ್ ಕ್ರೈಮ್ ತಂಡವನ್ನು ಸಂಪರ್ಕಿಸಲು ಬಯಸುತ್ತೀರಾ ಎಂದು ಕೇಳಲಾಯಿತು. ಮಹಿಳೆ ಸಕಾರಾತ್ಮಕವಾಗಿ ಉತ್ತರಿಸಿದಾಗ, ಸೈಬರ್ ಕ್ರೈಮ್ ತಂಡದವರೆಂದು ಹೇಳಿಕೊಂಡವರಿಗೆ ಕರೆಯನ್ನು ವರ್ಗಾಯಿಸಲಾಯಿತು. ಇನ್ನೊಂದು ತುದಿಯಲ್ಲಿರುವ ವ್ಯಕ್ತಿಯು ಸ್ಕೈಪ್ ಅನ್ನು ಡೌನ್‌ಲೋಡ್ ಮಾಡಲು ಮತ್ತು ಜನಪ್ರಿಯ ವೀಡಿಯೊ-ಕಾಲಿಂಗ್ ಅಪ್ಲಿಕೇಶನ್‌ನಲ್ಲಿ ಕರೆ ಮಾಡಲು ಮಹಿಳೆಗೆ ಸೂಚಿಸಿದ್ದಾನೆ.
ನಾನು ಸ್ಕೈಪ್ ಅನ್ನು ಡೌನ್‌ಲೋಡ್ ಮಾಡಿದ ನಂತರ ಅವರು ಆಪಾದಿತ ಅಕ್ರಮ ಪಾರ್ಸೆಲ್ ಮತ್ತು ನನ್ನ ಆಧಾರ್ ಕಾರ್ಡ್ ಮಾಹಿತಿಯ ಬಗ್ಗೆ ವಿವರಗಳನ್ನು ಕೇಳಿದರು. ಇದರ ನಂತರ, ಅಧಿಕಾರಿ ಎಂದು ಕರೆಯಲ್ಪಡುವವರು ಉನ್ನತ ಅಧಿಕಾರಿಗಳೊಂದಿಗೆ ಪರಿಶೀಲಿಸಿದರು. ನಂತರ ಸ್ಕೈಪ್ ಕರೆಯನ್ನು ಅಭಿಷೇಕ್ ಚೌಹಾಣ ಎಂದು ಹೇಳುವ ಹಿರಿಯ ಸಿಬಿಐ ಅಧಿಕಾರಿಗೆ ವರ್ಗಾಯಿಸಲಾಯಿತು, ಅಲ್ಲಿ ನನ್ನ ಕ್ಯಾಮೆರಾವನ್ನು ಸ್ವಿಚ್ ಆನ್ ಮಾಡಿ ಸಂಭಾಷಣೆಯನ್ನು ಪ್ರಾರಂಭಿಸಲು ನನಗೆ ಸೂಚಿಸಲಾಯಿತು ಎಂದು ಮಹಿಳೆ ತನ್ನ ಪ್ರಥಮ ಮಾಹಿತಿ ವರದಿಯಲ್ಲಿ (ಎಫ್‌ಐಆರ್) ಹೇಳಿದ್ದಾರೆ ಎಂದು ಎನ್‌ಡಿಟಿವಿ ವರದಿ ಉಲ್ಲೇಖಿಸಿದೆ.
ತನ್ನ ಖಾತೆಯಲ್ಲಿನ ಬಾಕಿ, ಸಂಬಳ ಮತ್ತು ಹೂಡಿಕೆ ಸೇರಿದಂತೆ ತನ್ನ ಎಲ್ಲಾ ವಿವರಗಳನ್ನು ‘ಅಧಿಕಾರಿ’ ನಮೂದಿಸಿಕೊಂಡಿದ್ದಾನೆ ಎಂದು ಮಹಿಳೆ ಹೇಳಿದರು.
ಸ್ವಲ್ಪ ಸಮಯದ ನಂತರ, ಅವರು ತಮ್ಮ ಉನ್ನತ ಅಧಿಕಾರಿಗಳಿಂದ ಆದೇಶವಿದೆ ಮತ್ತು ತನಿಖೆ ಪೂರ್ಣಗೊಳ್ಳುವವರೆಗೂ ನಾನು ಯಾವುದೇ ವಿವರಗಳನ್ನು ಬಹಿರಂಗಪಡಿಸುವುದಿಲ್ಲ, ಗೌಪ್ಯತೆ ಕಾಪಾಡುತ್ತೇನೆ ಎಂಬ ಆದೇಶವನ್ನು ಓದಿ ಪ್ರಮಾಣ ಮಾಡಿಸಲಾಯಿತು” ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ.
ತನ್ನ ಕುಟುಂಬ ಅಥವಾ ಪೊಲೀಸ್ ಅಧಿಕಾರಿಯೊಂದಿಗೆ ಮಾತನಾಡಬಹುದೇ ಎಂದು ಆತನಿಗೆ ಮಹಿಳೆ ಕೇಳಿದಾಗ, ಹಾಗೆ ಮಾಡಬೇಡಿ ಎಂದು ಹೇಳಲಾಯಿತು ಮತ್ತು ಇದು ಆಕೆಯ “ಸ್ವಂತ ಸುರಕ್ಷತೆ”ಗಾಗಿ ಎಂದು ಮಹಿಳೆಗೆ ಭರವಸೆ ನೀಡಲಾಯಿತು. ನಂತರ ಉದ್ಯೋಗಿಗಳ ವಿವರಗಳನ್ನು ಬಳಸಿಕೊಂಡು ಭಾರತದ ಪ್ರಮುಖ ಬ್ಯಾಂಕ್ ಒಂದರಿಂದ ನಡೆಸಲ್ಪಡುವ ಅಕ್ರಮ ಹಣ ವರ್ಗಾವಣೆ ಮತ್ತು ಮಾನವ ಕಳ್ಳಸಾಗಣೆ ಹಗರಣದ ಕುರಿತಾದ ಕತೆಯನ್ನು ಆಕೆಗೆ ಹೇಳಲಾಯಿತು.
“ಈ ಹೈ-ಪ್ರೊಫೈಲ್ ಪ್ರಕರಣದಲ್ಲಿ ಪೊಲೀಸರು ಮತ್ತು ರಾಜಕಾರಣಿಗಳು ಭಾಗಿಯಾಗಿರುವುದರಿಂದ, ಅವರೊಂದಿಗೆ ಸಹಕರಿಸಲು ಮತ್ತು ಯಾರೊಂದಿಗೂ ಮಾತನಾಡದಂತೆ ನನಗೆ ತಿಳಿಸಲಾಯಿತು. ಬುಧವಾರದವರೆಗೆ ನಾನು ಅವರ ಕಣ್ಗಾವಲಿನಲ್ಲಿದ್ದೆ, ನನ್ನ ಕ್ಯಾಮೆರಾವನ್ನು ಸ್ವಿಚ್ ಆನ್ ಮಾಡಲು ಮತ್ತು ನನ್ನ ಮೊಬೈಲ್ ಸ್ಕ್ರೀನ್ ಹಂಚಿಕೊಳ್ಳಲು ಸೂಚಿಸಲಾಯಿತು. ಇದರಿಂದ ನಾನು ಯಾರಿಗಾದರೂ ಕರೆ ಮಾಡುತ್ತಿದ್ದೇನೆಯೇ ಅಥವಾ ಸಂದೇಶ ಕಳುಹಿಸುತ್ತಿದ್ದೇನೆಯೇ ಎಂದು ಅವರು ನೋಡುತ್ತಾರೆ. ಇಡೀ ದಿನ ನನ್ನನ್ನು ವೀಕ್ಷಿಸಲಾಯಿತು ಮತ್ತು ರಾತ್ರಿಯೂ ಸಹ, ಕ್ಯಾಮೆರಾ ಆನ್ ಮಾಡಿ ಮಲಗಲು ನನಗೆ ಸೂಚಿಸಲಾಯಿತು ಎಂದು ಮಹಿಳೆ ಎಫ್‌ಐಆರ್ ನಲ್ಲಿ ತಿಳಿಸಿದ್ದಾರೆ.
ಮರುದಿನ, “ಸಿಬಿಐ ಅಧಿಕಾರಿ” ಎಂದು ಹೇಳಿಕೊಂಡ ಚೌಹಾಣ, “ಆರ್‌ಬಿಐ ಮಾರ್ಗಸೂಚಿಗಳ ಪ್ರಕಾರ” ವ್ಯವಹಾರಗಳ ಕಾನೂನುಬದ್ಧತೆಯನ್ನು ಪರಿಶೀಲಿಸಲು ಆಕೆಯ ಖಾತೆಯಿಂದ ಎಲ್ಲಾ ಹಣವನ್ನು ನಕಲಿ ಖಾತೆಗೆ ವರ್ಗಾಯಿಸಲು ಸೂಚಿಸಿದ್ದಾನೆ. ಆಕೆಯ ಬ್ಯಾಂಕ್ ಶಾಖೆಗೆ ಹೋಗುವಂತೆ ಹೇಳಲಾಗಿದ್ದು, ಅಲ್ಲಿ ತನ್ನ ಖಾತೆಯಲ್ಲಿದ್ದ ₹ 10.79 ಲಕ್ಷವನ್ನು ಅದೇ ಬ್ಯಾಂಕ್‌ನ ಮತ್ತೊಂದು ಖಾತೆಗೆ ಮಹಿಳೆ ವರ್ಗಾಯಿಸಿದ್ದಾರೆ. ಎಲ್ಲಾ ಸಮಯದಲ್ಲೂ, ಕರೆಯಲ್ಲಿ ಉಳಿಯಲು ಮತ್ತು ಫೋನ್‌ನ ಸ್ಕ್ರೀನ್ ಶಾಟ್ ಹಂಚಿಕೊಳ್ಳಲು ಆಕೆಗೆ ಸೂಚಿಸಲಾಯಿತು. ಯಾಕೆಂದರೆ ಅದರಿಂದ ಆಕೆಯನ್ನು ಮೇಲ್ವಿಚಾರಣೆ ಮಾಡಬಹುದು ಎಂಬುದು ವಂಚಕರ ಉದ್ದೇಶವಾಗಿತ್ತು.
ಗಂಟೆಗಳ ನಂತರ, ಹಣವನ್ನು ವರ್ಗಾಯಿಸಿದ ನಂತರ, ತಾವು ಹೆಚ್ಚಿನ ವಹಿವಾಟುಗಳನ್ನು ಪರಿಶೀಲಿಸಿರುವುದಾಗಿ ಆಕೆಗೆ ತಿಳಿಸಲಾಯಿತು ಆದರೆ ಕ್ರೆಡಿಟ್ ಕಾರ್ಡ್ ವ್ಯವಹಾರಗಳಲ್ಲಿ ಕೆಲವು ವ್ಯತ್ಯಾಸಗಳಿವೆ ಎಂದು ಆಕೆಗೆ ತಿಳಿಸಲಾಯಿತು. ನಂತರ ಆಕೆಗೆ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಲು ಹೇಳಲಾಯಿತು. ನಂತರ ಅದರ ಮೂಲಕ ವಂಚಕರು $5,000 (ಸುಮಾರು ₹ 4.16 ಲಕ್ಷ) ಮೌಲ್ಯದ ಬಿಟ್‌ಕಾಯಿನ್ ಖರೀದಿಸಲು ಪ್ರಯತ್ನಿಸಿದರು ಆದರೆ ವಹಿವಾಟು ರಿಜೆಕ್ಟ್ ಆಯಿತು. ನಂತರ ಬಳಕೆಯ ಮಿತಿಯನ್ನು ಬದಲಾಯಿಸಲು ಮಹಿಳೆಗೆ ಸೂಚಿಸಲಾಯಿತು. ಆದರೆ ಎರಡು ನಂತರದ ಪ್ರಯತ್ನಗಳೂ ವಿಫಲವಾದವು. ಆಕೆಯ ಕಾರ್ಡ್‌ನ “ದುರುಪಯೋಗ” ತಪ್ಪಿಸುವ ಅದರ ಫೋಟೋಗಳನ್ನು ಕಳುಹಿಸಲು ತಿಳಿಸಲಾಯಿತು ಮತ್ತು ನಂತರ ಶಾಪಿಂಗ್ ಸೈಟ್‌ನಲ್ಲಿ ₹ 2.04 ಲಕ್ಷ ಮತ್ತು ₹ 1.73 ಲಕ್ಷ ಮೌಲ್ಯದ ವಹಿವಾಟುಗಳನ್ನು ಗುರುವಾರ (ಏಪ್ರಿಲ್ 5) ಮುಂಜಾನೆ ನಡೆಸಲಾಯಿತು. ಆಕೆಗೆ ತನ್ನ ಬ್ಯಾಂಕ್‌ನ ಗ್ರಾಹಕ ಸೇವೆಯಿಂದ ಕರೆಗಳು ಬಂದಾಗ, ತಾನು ವಹಿವಾಟು ನಡೆಸಿದ್ದೇನೆ ಎಂದು ದೃಢೀಕರಿಸುವಂತೆ ಒತ್ತಾಯಿಸಲಾಯಿತು, ಇಲ್ಲದಿದ್ದರೆ ಅವರು ಪ್ರಕರಣವನ್ನು ಮುಕ್ತಾಯಗೊಳಿಸಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಲಾಯಿತು. ಈ ವ್ಯವಹಾರಗಳ ನಂತರ, ,ಹಿಳೆಗೆ “ಮಾದಕ ದ್ರವ್ಯ ಪರೀಕ್ಷೆ” ಗಾಗಿ ಬಟ್ಟೆ ತೆಗೆಯುವಂತೆ ಸೂಚಿಸಲಾಯಿತು.
“ಅವರು ಎಲ್ಲಾ ಹಣವನ್ನು ತೆಗೆದುಕೊಂಡ ನಂತರ, ಅಭಿಷೇಕ್ ಚೌಹಾಣ ನಾರ್ಕೋಟಿಕ್ ಡ್ರಗ್ಸ್ ಪರೀಕ್ಷೆಗೆ ಸಿದ್ಧವಾಗುವಂತೆ ನನಗೆ ಹೇಳಿದ್ದಾನೆ. ಬಟ್ಟೆಗಳನ್ನು ತೆಗೆಯುವಂತೆ ಬಲವಂತ ಮಾಡಲಾಯಿತು ಮತ್ತು ಕ್ಯಾಮರಾ ಆನ್ ಆಗಿರುವಾಗ ಅಶ್ಲೀಲ ವೀಡಿಯೊಗಳನ್ನು ಮಾಡುವಂತೆ ಸೂಚಿಸಲಾಯಿತು. ಹಾಗೆ ಮಾಡದಿದ್ದರೆ ಡ್ರಗ್ಸ್ ಪ್ರಕರಣದಲ್ಲಿ ನನ್ನನ್ನು ಮತ್ತು ನನ್ನ ಕುಟುಂಬದವರನ್ನು ಬಂಧಿಸುವುದಾಗಿ ಬೆದರಿಸಿದರು. ನನ್ನನ್ನು ಮತ್ತು ನನ್ನ ಕುಟುಂಬವನ್ನು ಕೊಲ್ಲುತ್ತೇವೆ ಅಥವಾ ತೊಂದರೆ ನೀಡುತ್ತೇವೆ ಎಂದು ಬೆದರಿಸಲಾಯಿತು. ನಂತರ ಆ ವ್ಯಕ್ತಿ ಆಕೆಯನ್ನು ಬ್ಲ್ಯಾಕ್‌ಮೇಲ್ ಮಾಡಿ ಅದೇ ದಿನ ಮಧ್ಯಾಹ್ನ 3 ಗಂಟೆಯೊಳಗೆ ₹ 10 ಲಕ್ಷ ನೀಡದಿದ್ದರೆ ತನ್ನ ವೀಡಿಯೊಗಳನ್ನು ಅನೇಕ ಜನರಿಗೆ ಮತ್ತು ಡಾರ್ಕ್ ವೆಬ್‌ನಲ್ಲಿ ಮಾರಾಟ ಮಾಡುವುದಾಗಿ ಬೆದರಿಸಿದ್ದಾನೆ ಎಂದು ಮಹಿಳೆ ದೂರಿನಲ್ಲಿ ಹೇಳಿದ್ದಾರೆ ಎಂದು ಎನ್‌ಡಿಟಿವಿ ವರದಿ ಹೇಳಿದೆ. ತನಿಖೆ ನಡೆಯುತ್ತಿದೆ.
ನಿಮ್ಮ ಕಾಮೆಂಟ್ ಬರೆಯಿರಿ