ಮಲಸಹೋದರನಿಂದಲೇ ಹಾರ್ದಿಕ್ ಪಾಂಡ್ಯಗೆ 4.3 ಕೋಟಿ ವಂಚನೆ ; ಬಂಧನ

ಭಾರತೀಯ ಕ್ರಿಕೆಟಿಗರಾದ ಹಾರ್ದಿಕ್ ಪಾಂಡ್ಯ ಮತ್ತು ಅವರ ಸಹೋದರ ಕೃನಾಲ್ ಪಾಂಡ್ಯ ಅವರನ್ನು ವಂಚಿಸಿದ ಆರೋಪದ ಮೇಲೆ ವ್ಯಕ್ತಿಯೋರ್ವನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಹಾರ್ದಿಕ್ ಪಾಂಡ್ಯ ಸಹೋದರರಿಗೆ 4.3 ಕೋಟಿ ರೂಪಾಯಿ ವಂಚಿಸಿದ ಆರೋಪದ ಮೇಲೆ ಹಾರ್ದಿಕ್ ಪಾಂಡ್ಯ ಅವರ ಮಲ ಸಹೋದರ ವೈಭವ ಪಾಂಡ್ಯ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. 37 ವರ್ಷದ ವೈಭವ ಅವರ ಪಾಲುದಾರಿಕೆ ಸಂಸ್ಥೆಯಿಂದ ಸುಮಾರು 4.3 ಕೋಟಿ ರೂಪಾಯಿಗಳನ್ನು ದುರುಪಯೋಗಪಡಿಸಿಕೊಂಡಿದ್ದರಿಂದ ಹಾರ್ದಿಕ್ ಮತ್ತು ಕೃನಾಲ್ ಪಾಂಡ್ಯ ಅವರಿಗೆ ಭಾರಿ ಆರ್ಥಿಕ ನಷ್ಟ ಉಂಟಾಗಿದೆ ಎಂದು ಆರೋಪಿಸಲಾಗಿದೆ.

ಹಾರ್ದಿಕ್, ಕೃನಾಲ್ ಮತ್ತು ವೈಭವ್ 2021 ರಲ್ಲಿ ವ್ಯವಹಾರ ಆರಂಭಿಸಲಾಗಿತ್ತು ಮತ್ತು ಒಪ್ಪಂದದ ಪ್ರಕಾರ, ಇಬ್ಬರು ಕ್ರಿಕೆಟಿಗರು ಲಾಭದಿಂದ ತಲಾ 40 ಪ್ರತಿಶತವನ್ನು ಹಂಚಿಕೊಳ್ಳುತ್ತಾರೆ ಮತ್ತು ವೈಭವ್ ಶೇಕಡಾ 20 ಪಡೆಯುತ್ತಾರೆ.
ಆದಾಗ್ಯೂ, ವೈಭವ ಪಾಂಡ್ಯ ಲಾಭವನ್ನು ಹಂಚಿಕೊಳ್ಳುವ ಬದಲು, ಪ್ರತ್ಯೇಕ ಕಂಪನಿಯನ್ನು ಸ್ಥಾಪಿಸಿದರು ಮತ್ತು ವ್ಯವಹಾರದಿಂದ ಹಣವನ್ನು ಅದಕ್ಕೆ ತಿರುಗಿಸಿದರು ಎಂದು ಆರೋಪಿಸಲಾಗಿದೆ.
ಮುಂಬೈ ಪೊಲೀಸರ ಆರ್ಥಿಕ ಅಪರಾಧ ವಿಭಾಗದ (ಇಒಡಬ್ಲ್ಯು) ಅಧಿಕಾರಿಗಳ ಪ್ರಕಾರ, ವೈಭವ ವಿರುದ್ಧ ವಂಚನೆ ಮತ್ತು ಫೋರ್ಜರಿ ಆರೋಪ ಹೊರಿಸಲಾಗಿದೆ. ಹಾರ್ದಿಕ್ ಅವರು 37 ವರ್ಷದ ವೈಭವ ವಿರುದ್ಧ ದೂರು ದಾಖಲಿಸಿದ ನಂತರ ಬಂಧಿಸಲಾಗಿದೆ.

ಪ್ರಮುಖ ಸುದ್ದಿ :-   ವೀಡಿಯೊ...| ಶಿವಸೇನೆ ನಾಯಕಿ ಕರೆದೊಯ್ಯಲು ಬಂದಿದ್ದ ಹೆಲಿಕಾಪ್ಟರ್ ಅಪಘಾತ

ಈ ವಂಚನೆ ಪ್ರಕರಣವು ಹಣ ದುರ್ಬಳಕೆ ಮತ್ತು ಪಾಲುದಾರಿಕೆಯ ನಿಯಮಗಳ ಉಲ್ಲಂಘನೆಯನ್ನು ಒಳಗೊಂಡಿದೆ. ಮೂರು ವರ್ಷಗಳ ಹಿಂದೆ ಮೂರು ಜನರು ಕೆಲವು ಷರತ್ತುಗಳೊಂದಿಗೆ ಪಾಲಿಮರ್ ವ್ಯವಹಾರವನ್ನು ಪ್ರಾರಂಭಿಸಿದರು. ಕ್ರಿಕೆಟಿಗ ಸಹೋದರರು ಬಂಡವಾಳದ ಶೇಕಡ 40ರಷ್ಟು ಹೂಡಿಕೆ ಮಾಡಬೇಕಾಗಿತ್ತು. ವೈಭವ ಅವರು ಶೇಕಡ 20ರಷ್ಟು ಹಣ ನೀಡಬೇಕಿತ್ತು. ಹಾಗೂ ದೈನಂದಿನ ಕಾರ್ಯಾಚರಣೆಗಳನ್ನು ನಿರ್ವಹಿಸಬೇಕಿತ್ತು. ಷೇರುಗಳ ಪ್ರಕಾರ ಲಾಭವನ್ನು ವಿತರಿಸಬೇಕಾಗಿತ್ತು.

ಆದಾಗ್ಯೂ, ವೈಭವ ತನ್ನ ಪಾಲುದಾರರಿಗೆ ತಿಳಿಸದೆ ಅದೇ ವ್ಯವಹಾರದಲ್ಲಿ ಮತ್ತೊಂದು ಸಂಸ್ಥೆಯನ್ನು ಸ್ಥಾಪಿಸಿ ಪಾಲುದಾರಿಕೆ ಒಪ್ಪಂದವನ್ನು ಉಲ್ಲಂಘಿಸಿದ್ದಾರೆ. ಇದರ ಪರಿಣಾಮ ವ್ಯಾಪಾರದಲ್ಲಿ 3 ಕೋಟಿಗೂ ಅಧಿಕ ನಷ್ಟ ಉಂಟಾಗಿದೆ. ವೈಭವ್ ತನ್ನ ಲಾಭದ ಪಾಲನ್ನು ಯಾರಿಗೂ ತಿಳಿಸದೆ ಶೇಕಡ 20ರಷ್ಟು ರಿಂದ 33.3ರಷ್ಟು ಕ್ಕೆ ಹೆಚ್ಚಿಸಿಕೊಂಡಿದ್ದು, ಹಾಗೂ ತಾನು ಸ್ಥಾಪಿಸಿದ ಕಂಪನಿಗೆ ತಿರುಗಿಸಿದ್ದಾರೆ. ಹಾರ್ದಿಕ್ ಮತ್ತು ಕೃನಾಲ್ ಪಾಂಡ್ಯ ಅವರ ಆರ್ಥಿಕ ಹಿತಾಸಕ್ತಿಗಳ ಮೇಲೆ ಮತ್ತಷ್ಟು ಪರಿಣಾಮ ಬೀರಿದೆ ಎಂದು ಆರೋಪಿಸಲಾಗಿದೆ.

 

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement