ಖ್ಯಾತ ಜ್ಯೋತಿಷಿ ಎಸ್.ಕೆ.ಜೈನ್ ವಿಧಿವಶ

ಬೆಂಗಳೂರು: ನಾಡಿನ ಖ್ಯಾತ ಜ್ಯೋತಿಷಿ ಎಸ್.ಕೆ.ಜೈನ್ (67) ಅವರು ಶುಕ್ರವಾರ ನಿಧನರಾಗಿದ್ದಾರೆ. ಕೆಲ ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಶುಕ್ರವಾರ ಇಹಲೋಕ ತ್ಯಜಿಸಿದ್ದಾರೆ.
ಎಸ್ ಕೆ ಜೈನ್ ಅವರು ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ಹೇಳಲಾಗಿದೆ. ಮೃತರು ಪತ್ನಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಮೂಲತಃ ದಕ್ಷಿಣಕನ್ನಡ ಜಿಲ್ಲೆಯವರಾದ ಸುರೇಂದ್ರಕುಮಾರ್ ಜೈನ್ (ಎಸ್.ಕೆ.ಜೈನ್) ಅವರು ಬೆಂಗಳೂರಿನಲ್ಲಿ ವಾಸವಾಗಿದ್ದರು. ತಮ್ಮ ತಂದೆ ಶಶಿಕಾಂತ ಜೈನ್ ಅವರಿಂದ ಜ್ಯೋತಿಷ್ಯವನ್ನು ಸಿದ್ಧಿಸಿಕೊಂಡಿದ್ದರು.

ಅವರು ಸಾರ್ವಜನಿಕರಿಗೆ ಮನಮುಟ್ಟುವ ರೀತಿ ಭವಿಷ್ಯದ ಬಗ್ಗೆ ವಿವರಣೆ ನೀಡುತ್ತಿದ್ದರು. ಹೀಗಾಗಿಯೇ ಅವರು ದೇಶದೆಲ್ಲೆಡೆ ಅಸಂಖ್ಯ ಅಭಿಮಾನಿಗಳನ್ನು ಹೊಂದಿದ್ದರು. ಉತ್ತಮ ವಾಗ್ಮಿಯೂ ಆಗಿದ್ದ ಎಸ್.ಕೆ.ಜೈನ್ ಅವರು ಭಗವದ್ಗೀತೆ ಪ್ರಚಾರದಲ್ಲೂ ತೊಡಗಿಸಿಕೊಂಡಿದ್ದರು.
ಎಸ್.ಕೆ.ಜೈನ್ ಅವರು ಸುಮಾರು 40 ವರ್ಷಗಳಿಂದ ಜ್ಯೋತಿಷ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರು. ಉದಯ ಟಿವಿಯಲ್ಲಿ ಜೈನ್ ಅವರ ಕಾಲಚಕ್ರ ಕಾರ್ಯಕ್ರಮವು 20 ವರ್ಷಗಳ ಕಾಲ ಪ್ರಸಾರವಾಗಿತ್ತು. ಇದೊಂದು ದಾಖಲೆ ಎನ್ನಲಾಗಿದೆ. ಉದಯ ಟಿವಿಯ ‘ಕಾಲಚಕ್ರ’ ಕಾರ್ಯಕ್ರಮದ ಮೂಲಕ ಕನ್ನಡಿಗರ ಮನೆಮಾತಾಗಿದ್ದರು. ಡಾ.ಜೈನ್ ಅವರ ಕೊಡುಗೆಯನ್ನು ಗುರುತಿಸಿ ರಾಜ್ಯ ಸರ್ಕಾರವು ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿತ್ತು.

ಪ್ರಮುಖ ಸುದ್ದಿ :-   ಎಸ್‌ಐಟಿ ನೋಟಿಸ್​: ವಿಚಾರಣೆಗೆ ಹಾಜರಾಗಲು ಸಮಯ ಕೇಳಿದ ಪ್ರಜ್ವಲ್‌ ; ಪತ್ರದಲ್ಲೇನಿದೆ..?

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement