ಇಸ್ರೇಲ್‌-ಇರಾನ್‌ ಉದ್ವಿಗ್ನತೆ ನಡುವೆ 17 ಭಾರತೀಯರಿದ್ದ ಹಡಗನ್ನು ಯುಎಇ ಕರಾವಳಿಯಲ್ಲಿ ವಶಪಡಿಸಿಕೊಂಡ ಇರಾನ್ : ಮೂಲಗಳು

ದುಬೈ: ಹೋರ್ಮುಜ್‌ ಜಲಸಂಧಿಯಲ್ಲಿ ಹಡಗೊಂದರ ಮೇಲೆ ಕಮಾಂಡೊಗಳು ದಾಳಿ ನಡೆಸಿದ್ದು, ಇರಾನ್ ಈ ಕೃತ್ಯ ಎಸಗಿದೆ ಎಂದು ಮಧ್ಯಪ್ರಾಚ್ಯದ ರಕ್ಷಣಾ ಅಧಿಕಾರಿಗಳು ಆರೋಪಿಸಿದ್ದಾರೆ. ಯುಎಇ ಕರಾವಳಿಯಲ್ಲಿ ಇರಾನ್‌ನ ರೆವಲ್ಯೂಷನರಿ ಗಾರ್ಡ್‌ಗಳು ಶನಿವಾರ ವಶಪಡಿಸಿಕೊಂಡಿದೆ ಎಂದು ಹೇಳಲಾದ ಕಂಟೇನರ್ ಹಡಗಿನಲ್ಲಿದ್ದ 25 ಸಿಬ್ಬಂದಿಯಲ್ಲಿ 17 ಮಂದಿ ಭಾರತೀಯರು ಎಂದು ಮೂಲಗಳು ತಿಳಿಸಿವೆ.
ಹೆಲಿಕಾಪ್ಟರ್‌ ಮೂಲಕ ಬಂದ ಕಮಾಂಡೊಗಳು ಹಗ್ಗದ ಸಹಾಯದಿಂದ ಕೆಳಗಿಳಿದು ಕಂಟೇನರ್‌ಗಳ ಮೇಲೆ ನಿಲ್ಲುವ ದೃಶ್ಯವಿದೆ.
ಕಂಟೇನರ್ ಹಡಗು, ಎಂಎಸ್‌ಸಿ (MSC) ಏರೀಸ್ ಅನ್ನು ಹೆಲಿಬೋರ್ನ್ ಕಾರ್ಯಾಚರಣೆ” ನಡೆಸುವ ಮೂಲಕ ಹಾರ್ಮುಜ್ ಜಲಸಂಧಿಯ ಬಳಿ ವಶಪಡಿಸಿಕೊಳ್ಳಲಾಯಿತು ಮತ್ತು ಅದು ಈಗ ಇರಾನ್‌ನ ಪ್ರಾದೇಶಿಕ ನೀರಿನ ಕಡೆಗೆ ಸಾಗುತ್ತಿದೆ ಎಂದು ದೇಶದ ಸರ್ಕಾರಿ ಸ್ವಾಮ್ಯದ ಇರ್ನಾ (IRNA) ಸುದ್ದಿ ಸಂಸ್ಥೆ ವರದಿ ಮಾಡಿದೆ.

“ಇರಾನ್ ಸರಕು ಸಾಗಣೆ ಹಡಗಿನ ‘MSC ಏರೀಸ್’ ಅನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದೆ ಎಂದು ನಮಗೆ ತಿಳಿದಿದೆ. 17 ಭಾರತೀಯ ಪ್ರಜೆಗಳು ಹಡಗಿನಲ್ಲಿದ್ದಾರೆ ಎಂದು ನಾವು ತಿಳಿದುಕೊಂಡಿದ್ದೇವೆ. ಭಾರತೀಯ ಪ್ರಜೆಗಳ ಭದ್ರತೆ, ಕಲ್ಯಾಣ ಮತ್ತು ಆರಂಭಿಕ ಬಿಡುಗಡೆಯನ್ನು ಖಚಿತಪಡಿಸಿಕೊಳ್ಳಲು ನಾವು ಟೆಹ್ರಾನ್‌ನಲ್ಲಿ ಮತ್ತು ರಾಜತಾಂತ್ರಿಕ ಮಾರ್ಗಗಳ ಮೂಲಕ ಇರಾನ್ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದು ಮೂಲವೊಂದನ್ನು ಉಲ್ಲೇಖಿಸಿದ ವರದಿಯೊಂದು ತಿಳಿಸಿದೆ.

ಮಧ್ಯಪ್ರಾಚ್ಯದಲ್ಲಿ ಹೆಚ್ಚಿದ ಉದ್ವಿಗ್ನತೆಯ ಮಧ್ಯೆ ಈ ಹಡಗಿನ ವಶಪಡಿಸಿಕೊಳ್ಳುವಿಕೆ ನಡೆದಿದೆ. ಸುಮಾರು ಎರಡು ವಾರಗಳ ಹಿಂದೆ ಸಿರಿಯಾದ ಡಮಾಸ್ಕಸ್‌ನಲ್ಲಿರುವ ತನ್ನ ರಾಯಭಾರಿ ಕಚೇರಿಯ ಕಾನ್ಸುಲರ್ ವಿಭಾಗದ ಮೇಲೆ ವೈಮಾನಿಕ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಇರಾನ್‌ ದೇಶವು ಇಸ್ರೇಲ್‌ಗೆ ಎಚ್ಚರಿಸಿದ ನಂತರ ದಾಳಿಯ ಆತಂಕಗಳ ನಡುವೆ ಈ ಬೆಳವಣಿಗೆ ನಡೆದಿದೆ. ಈ ವಾಯುದಾಳಿಯಲ್ಲಿ ಇಬ್ಬರು ಜನರಲ್‌ಗಳು ಸೇರಿದಂತೆ ಏಳು ಇರಾನ್‌ ಜನರು ಸಾವಿಗೀಡಾಗಿದ್ದರು.

ಪ್ರಮುಖ ಸುದ್ದಿ :-   ಆಗ್ರಾದಲ್ಲಿ ತಾಜ್ ಮಹಲಿಗೇ ಸ್ಪರ್ಧೆ ಒಡ್ಡುವ ಬಿಳಿ ಅಮೃತಶಿಲೆಯ ಮತ್ತೊಂದು ʼಅದ್ಭುತʼ ನಿರ್ಮಾಣವೇ ಈ ‘ಸೋಮಿ ಬಾಗ್’...

 

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement