ಸೌದಿ ಜೈಲಿನಲ್ಲಿ 18 ವರ್ಷದಿಂದ ಇರುವ ವ್ಯಕ್ತಿಯ ಬಿಡುಗಡೆಗಾಗಿ ಸಂಗ್ರಹವಾಯ್ತು 34 ಕೋಟಿ ರೂ…!

ಕೋಝಿಕ್ಕೋಡ್ : ಸೌದಿ ಅರೇಬಿಯಾದಲ್ಲಿ 18 ವರ್ಷಗಳಿಂದ ಜೈಲಿನಲ್ಲಿರುವ ಕೋಝಿಕ್ಕೋಡಿನ ಕೋಡಂಪುಳ ಮೂಲದ ಅಬ್ದುಲ್ ರಹೀಮ್ ಬಿಡುಗಡೆಗೆ ನಿಗದಿತ ಸಮಯಕ್ಕಿಂತ ಎರಡು ದಿನ ಮುಂಚಿತವಾಗಿ 34 ಕೋಟಿ ರೂ. ನಿಧಿ ಸಂಗ್ರಹವಾಗಿದೆ.
ರಿಯಾದ್‌ನಲ್ಲಿ ಬಂಧಿಯಾಗಿರುವ ಅಬ್ದುಲ್ ರಹೀಮ್ ಬಿಡುಗಡೆಗಾಗಿ ಕೇರಳ ಹಾಗೂ ರಾಜ್ಯದ ಹೊರಗೆ ಅಪಾರ ನಿಧಿ ಸಂಗ್ರಹವಾಯಿತು. ಪ್ರಪಂಚದ ಹಲವು ಭಾಗಗಳಲ್ಲಿರುವ ಮಲಯಾಳಿಗಳು ಅಬ್ದುಲ್ ರಹೀಮ್ ಬಿಡುಗಾಡೆಗಾಗಿ ಹಣ ನೀಡಿದ್ದಾರೆ. ಈ ಹಣವನ್ನು ಭಾರತೀಯ ರಾಯಭಾರಿ ಕಚೇರಿ ಮೂಲಕ 18 ವರ್ಷಗಳಿಂದ ಜೈಲಿನಲ್ಲಿರುವ ಅಬ್ದುಲ್ ರಹೀಮ್ ಬಿಡುಗಡೆಗಾಗಿ ಸೌದಿ ಕುಟುಂಬಕ್ಕೆ ನೀಡಲಾಗುತ್ತದೆ.

ಅಬ್ದುಲ್ ರಹೀಮ್ ಬಿಡುಗಡೆಗಾಗಿ ಆರಂಭಿಸಲಾದ ಟ್ರಸ್ಟ್ ಮೂಲಕ ಪ್ರಮುಖ ನಿಧಿ ಸಂಗ್ರಹವಾಗಿದೆ. 31,93,46,568 ರೂ. ಹಣ ಬ್ಯಾಂಕ್ ತಲುಪಿದೆ. ಮನೆಗೆ ನೇರವಾಗಿ 2.52 ಕೋಟಿ ರೂ. ಬಂದಿದೆ. ಬಾಬಿ ಚೆಮ್ಮನ್ನೂರ್ ನೀಡಿದ ಒಂದು ಕೋಟಿ ರೂಪಾಯಿ ಕೊಡುಗೆ ನೀಡಿದ್ದಾರೆ ಎಂದು ಹಣಕಾಸು ಸಮಿತಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
2006 ರಲ್ಲಿ, ಆಗ 26 ವರ್ಷದವರಾಗಿದ್ದ ಅಬ್ದುಲ್ ರಹೀಮ್ ಸೌದಿ ಅರೇಬಿಯಾದಲ್ಲಿ ಜೈಲು ಪಾಲಾಗಿದ್ದರು. ಚಾಲಕ ವೀಸಾದ ಮೇಲೆ ಸೌದಿ ಅರೇಬಿಯಾಕ್ಕೆ ಬಂದಿದ್ದ. ಅವರು ಕೆಲಸ ಮಾಡುತ್ತಿದ್ದ ಮನೆ ಮಾಲೀಕರ ಮಗ ಫೈಜ್‌ ವಿಕಲಚೇತನನಾಗಿದ್ದ. ಕುತ್ತಿಗೆಗೆ ಜೋಡಿಸಲಾದ ವಿಶೇಷ ಸಾಧನದ ಮೂಲಕ ಫೈಜ್ ಗೆ ಆಹಾರ ಮತ್ತು ನೀರನ್ನು ನೀಡಲಾಗುತ್ತಿತ್ತು.

ಪ್ರಮುಖ ಸುದ್ದಿ :-   ವೀಡಿಯೊ..| ಭಾರತದ 20 ನಗರಗಳ ಮೇಲೆ ಪಾಕಿಸ್ತಾನದಿಂದ ಡ್ರೋನ್ ದಾಳಿ ;ಎಲ್ಲವನ್ನೂ ಹೊಡೆದುರುಳಿಸಿದ ಸೇನೆ...

ಮಗುವನ್ನು ಹೊರಗೆ ಕರೆದುಕೊಂಡು ಹೋಗುವ ಜವಾಬ್ದಾರಿ ರಹೀಮ್ ಅವರ ಮೇಲಿತ್ತು. 2006ರ ಡಿ. 24 ರಂದು ಕಾರಿನಲ್ಲಿ ಫೈಜ್ ಅವರನ್ನು ಕರೆದುಕೊಂಡು ಹೋಗುವಾಗ ಆಕಸ್ಮಿಕವಾಗಿ ಮಗುವಿನ ಕುತ್ತಿಗೆಗೆ ಅಳವಡಿಸಿದ್ದ ಸಾಧನಕ್ಕೆ ಅಬ್ದುಲ್ ರಹೀಮ್ ಕೈ ಸಿಕ್ಕಿಹಾಕಿಕೊಂಡಿತ್ತು. ಫೈಜ್ ಪ್ರಜ್ಞೆ ತಪ್ಪಿ ಬಿದ್ದು, ನಂತರ ಸಾವಿಗೀಡಾಗಿದ್ದ.
ಈ ಘಟನೆಯ ಸಂಬಂಧ ಪೊಲೀಸರು ರಹೀಮ್ ನನ್ನು ಕೊಲೆ ಆರೋಪದ ಮೇಲೆ ಬಂಧಿಸಿದ್ದರು. ಹಾಗೂ ರಿಯಾದ್‌ನ ನ್ಯಾಯಾಲಯವು ಅವರಿಗೆ ಮರಣದಂಡನೆ ಶಿಕ್ಷೆ ವಿಧಿಸಿತು. ಮೇಲ್ಮನವಿ ನ್ಯಾಯಾಲಯಗಳೂ ಮರಣದಂಡನೆ ಶಿಕ್ಷೆಯನ್ನು ಎತ್ತಿ ಹಿಡಿದಿದ್ದವು. ಈ ವೇಳೆ ಫೈಜ್ ಅವರ ಕುಟುಂಬವನ್ನು ಸಂಪರ್ಕಿಸಲು ಹಲವಾರು ಪ್ರಯತ್ನಗಳನ್ನು ಮಾಡಲಾಯಿತು, ಆದರೆ ಅವರು ಕ್ಷಮೆ ನೀಡಲು ಸಿದ್ಧರಿರಲಿಲ್ಲ. ಕೊನೆಗೂ ಸಾಕಷ್ಟು ಭರವಸೆ ನೀಡಿ ಫೈಜ್ ಕುಟುಂಬ 34 ಕೋಟಿ ರೂಪಾಯಿ ದೇಣಿಗೆ ನೀಡಿದರೆ ಕ್ಷಮೆ ನೀಡುವುದಕ್ಕೆ ಒಪ್ಪಿಗೆ ನೀಡಿತು. ಹೀಗಾಗಿ ಈ ದೇಣಿಗೆ ಸಂಗ್ರಹವಾಗಿದೆ.

ಪ್ರಮುಖ ಸುದ್ದಿ :-   ವೀಡಿಯೊಗಳು...| ಪಾಕಿಸ್ತಾನದ 4 ವಾಯುನೆಲೆಗಳ ಭಾರತದ ದಾಳಿ, ಡ್ರೋನ್ ಉಡಾವಣಾ ಪ್ಯಾಡ್‌ ನಾಶ, ಪಾಕ್‌ 2 ಫೈಟರ್ ಜೆಟ್ ಹೊಡೆದುರುಳಿಸಿದ ಸೇನೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement