ಅದೃಷ್ಟ ಅಂದ್ರೆ ಇದೇ ಅಲ್ವಾ | ಕೇವಲ 2 ಮೀನುಗಳ ಮಾರಾಟದಿಂದ ಲಕ್ಷಾಧಿಪತಿಯಾದ ಮೀನುಗಾರ..! ಮೀನಿನ ಬೆಲೆ ಕೇಳಿದ್ರೆ ಹೌಹಾರಬೇಕು…!!

ಕೆಲವೊಮ್ಮೆ ಮೀನುಗಾರರು ಬಲೆ ಬೀಸಿದಾಗ ಅಪರೂಪದ ಮೀನುಗಳು ಸಿಗುತ್ತವೆ. ದೊಡ್ಡ ಮೀನುಗಳ ಜೊತೆಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿರುವ ಮೀನುಗಳು ಸಹ ಬಲೆಗೆ ಬೀಳುತ್ತವೆ. ಕೆಲವು ಅಪರೂಪದ ಜಾತಿಯ ಮೀನುಗಳು ಮೀನುಗಳು ಬಲೆಗೆ ಬಿದ್ದರೆ ಮೀನುಗಾರರ ಸುಗ್ಗಿಯೋ ಸುಗ್ಗಿ. ಯಾಕೆಂದರೆ ಅವರು ರಾತ್ರೋರಾತ್ರಿ ಲಕ್ಷಾಧಿಪತಿಗಳಾಗುತ್ತಾರೆ.
ಇಂಥಹದ್ದೇ ಒಂದು ನಿದರ್ಶನದಲ್ಲಿ ಇತ್ತೀಚೆಗೆ ಕೃಷ್ಣಾ ಜಿಲ್ಲೆಯ ಅಂತರವೇದಿಯಲ್ಲಿ ಮೀನುಗಾರರೊಬ್ಬರು ಅಪರೂಪದ ಕಚಿಡಿ ಮೀನು ಹಿಡಿದಿದ್ದರು. ಕೋನಸೀಮಾ ಜಿಲ್ಲೆಯ ಅಂತರವೇದಿಪಲ್ಲಿಪಾಲೆಂ ಮೀನುಗಾರಿಕಾ ಬಂದರಿನಲ್ಲಿ ಈ ಅಪರೂಪದ ಹಾಗೂ ಬಹುಬೇಡಿಕೆಯ ಮೀನುಗಳನ್ನು ಹರಾಜು ಮಾಡಲಾಯಿತು. ಇವುಗಳನ್ನು ಖರೀದಿಸಲು ವ್ಯಾಪಾರಸ್ಥರು ಮುಗಿಬಿದ್ದರು. ಒಬ್ಬ ವ್ಯಾಪಾರಿ ಒಂದು ಮೀನಿಗೆ ಗರಿಷ್ಠ 2 ಲಕ್ಷ ರೂ. ದರ ನೀಡಿ 4 ಲಕ್ಷ ರೂ.ಗಳಿಗೆ ಎರಡು ಮೀನು ಖರೀದಿಸಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಈ ಮೀನಿಗೆ ಬೇಡಿಕೆ ಯಾಕೆ..?
ಬಲೆಗೆ ಬಿದ್ದ ಈ ಮೀನನ್ನು ಕಚಿಡಿ ಮೀನು ಎಂದು ಕರೆಯುತ್ತಾರೆ. ಇದರ ವೈಜ್ಞಾನಿಕ ಹೆಸರು ಪ್ರೋಟೋನಿಬಿಯಾ ಡಯಾಕಾಂಥಸ್. ಈ ಮೀನುಗಳ ಹೊಟ್ಟೆಯ ಅಂಗಾಂಗಗಳು ಔಷಧೀಯ ಗುಣಗಳನ್ನು ಹೊಂದಿವೆ ಎಂದು ಮೀನುಗಾರಿಕಾ ಅಧಿಕಾರಿಗಳು ಹೇಳುತ್ತಾರೆ. ಇಂತಹ ಮೀನುಗಳು ಮೀನುಗಾರರ ಬಲೆಗೆ ಬೀಳುವುದು ಅಪರೂಪವಂತೆ. ಅದರ ದುಬಾರಿ ಬೆಲೆಯ ಕಾರಣಕ್ಕೆ ಕಚಿಡಿ ಮೀನುಗಳನ್ನು ಸಮುದ್ರದ ಚಿನ್ನದ ಮೀನು ಎಂದು ಕರೆಯಲಾಗುತ್ತದೆ. ಮೀನಿನ ಹೆಸರೇ ಸೂಚಿಸುವಂತೆ, ಇದು ಚಿನ್ನದಷ್ಟೇ ಮೌಲ್ಯಯುತವಾಗಿದೆ. ಕಚಿಡಿ ಮೀನು ಒಂದೆಡೆ ಸ್ಥಿರವಾಗಿ ಇರುವುದಿಲ್ಲವಂತೆ. ಇದು ಸಮುದ್ರದಲ್ಲಿ ಒಂದೆಡೆಯಿಂದ ಇನ್ನೊಂದೆಡೆಗೆ ಪಯಣಿಸುತ್ತಲೇ ಇರುತ್ತದೆ ಎಂದರು. ದೂರದವರೆಗೆ ಹೋಗುತ್ತದೆಯಂತೆ. ಈ ಮೀನುಗಳು ಮೀನುಗಾರರ ಬಲೆಯಲ್ಲಿ ಸಿಕ್ಕಿಬೀಳುವುದು ಅಪರೂಪ ಎಂದು ಹೇಳಲಾಗುತ್ತದೆ.

ಪ್ರಮುಖ ಸುದ್ದಿ :-   'ಪುರಿ ಜಗನ್ನಾಥ ಪ್ರಧಾನಿ ಮೋದಿ ಭಕ್ತ' ಹೇಳಿಕೆ: ಬಾಯಿತಪ್ಪಿನ ಹೇಳಿಕೆಗೆ 3 ದಿನ ಉಪವಾಸ ಕೈಗೊಂಡ ಬಿಜೆಪಿ ಅಭ್ಯರ್ಥಿ ಸಂಬಿತ್ ಪಾತ್ರಾ

ಶಸ್ತ್ರಚಿಕಿತ್ಸೆಯ ಸಮಯದಲ್ಲಿ ವೈದ್ಯರು ಇವುಗಳಿಂದ ತಯಾರಾದ ದಾರದಿಂದ ಹೊಲಿಗೆಗಳನ್ನು ಮಾಡುತ್ತಾರೆ ಎಂದು ಹೇಳಲಾಗುತ್ತದೆ. ಮೀನಿನ ಹೊಟ್ಟೆಯಿಂದ ತಯಾರಿಸಲಾದ ಈ ದಾರವು ಕಾಲಾನಂತರದಲ್ಲಿ ದೇಹಕ್ಕೆ ಹೊಂದಿಕೊಳ್ಳುತ್ತದೆ ಎಂದು ಹೇಳಲಾಗುತ್ತದೆ. ಈ ಮೀನನ್ನು ಪಿತ್ತಕೋಶ ಮತ್ತು ಶ್ವಾಸಕೋಶದ ಔಷಧಿಗಳ ತಯಾರಿಕೆಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಇದಲ್ಲದೆ, ಜಾತಿಯ ವೈನ್ ತಯಾರಿಸುವ ಕೈಗಾರಿಕೆಗಳಲ್ಲಿ ಕಚಿಡಿ ಮೀನುಗಳನ್ನು ಬಳಸಲಾಗುತ್ತದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಮೀನುಗಳಿಗೆ ಉತ್ತಮ ಬೇಡಿಕೆ ಇರುವುದರಿಂದ ವ್ಯಾಪಾರಿಗಳು ಲಕ್ಷಗಟ್ಟಲೆ ಖರ್ಚು ಮಾಡಿ ಇವುಗಳನ್ನು ಖರೀದಿಸುತ್ತಾರೆ.

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement