ಚುನಾವಣಾ ಬಾಂಡ್, ಉತ್ತರ ಭಾರತ-ದಕ್ಷಿಣ ಭಾರತ ಚರ್ಚೆ, ಸಿಬಿಐ – ಇ.ಡಿ. ದುರ್ಬಳಕೆ ಆರೋಪ, ಬಿಜೆಪಿ ಮಾಡೆಲ್-ಕಾಂಗ್ರೆಸ್‌ ಮಾಡೆಲ್‌ ಬಗ್ಗೆ ಮೋದಿ ಹೇಳಿದ್ದೇನು..?

2047ರ ವೇಳೆಗೆ ವಿಕಸಿತ ಭಾರತದ ಬಗೆಗಿನ ತಮ್ಮ ವಿಶಾಲವಾದ ದೃಷ್ಟಿಕೋನದಿಂದ ಹಿಡಿದು ಉಕ್ರೇನ್‌ನಿಂದ ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಮರಳಿ ಕರೆತರುವಲ್ಲಿ ತಮ್ಮ ಮಧ್ಯಸ್ಥಿಕೆಯವರೆಗೆ, ಪ್ರಧಾನಿ ನರೇಂದ್ರ ಮೋದಿ ಅವರು ಸುದ್ದಿ ಸಂಸ್ಥೆ ಎಎನ್‌ಐ (ANI)ಗೆ ನೀಡಿದ ಸಂದರ್ಶನದಲ್ಲಿ ಎಲ್ಲಾ ಪ್ರಮುಖ ಘಟನೆಗಳ ಬಗ್ಗೆ ಮಾತನಾಡಿದ್ದಾರೆ.
ಕಳೆದ ದಶಕದಲ್ಲಿ ರಾಷ್ಟ್ರದಲ್ಲಿ ಭ್ರಷ್ಟಾಚಾರ ಮತ್ತು ಕಪ್ಪುಹಣ ನಿಭಾಯಿಸುವಲ್ಲಿ ಜಾರಿ ನಿರ್ದೇಶನಾಲಯ(ಇ.ಡಿ.)ದ ಪಾತ್ರವನ್ನು ಪ್ರಧಾನಿ ಮೋದಿ ಶ್ಲಾಘಿಸಿದರು. ‘ಒಂದು ರಾಷ್ಟ್ರ, ಒಂದು ಚುನಾವಣೆ’ ಕಡೆಗೆ ಬಿಜೆಪಿ ಬದ್ಧತೆಯನ್ನು ಅವರು ಪ್ರತಿಪಾದಿಸಿದರು.
ಪ್ರಧಾನಿ ಮೋದಿಯವರ ಸಂದರ್ಶನದ ಪ್ರಮುಖ ಅಂಶಗಳು
ಪ್ರಧಾನಿ ನರೇಂದ್ರ ಮೋದಿ ಅವರು 2047 ರ ವೇಳೆಗೆ ಭಾರತವನ್ನು ಅಭಿವೃದ್ಧಿಪಡಿಸಲು ತಮ್ಮ “ದೊಡ್ಡ ಯೋಜನೆಗಳ ಬಗ್ಗೆ ಒತ್ತಿ ಹೇಳಿದರು ಮತ್ತು “ಯಾರೂ ಭಯಪಡಬಾರದು” ಎಂದು ಹೇಳಿದರು.”ನಾನು ಯಾರನ್ನೂ ಹೆದರಿಸುವ ಅಥವಾ ಓಡಿಸುವ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ, ನಾನು ರಾಷ್ಟ್ರದ ಆರೋಗ್ಯಕರ ಅಭಿವೃದ್ಧಿಗಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇನೆ” ಎಂದು ಪ್ರಧಾನಿ ಮೋದಿ ಹೇಳಿದರು.
ನಾನು ದೊಡ್ಡ ಯೋಜನೆಗಳನ್ನು ಹೊಂದಿದ್ದೇನೆ ಎಂದು ನಾನು ಹೇಳಿದಾಗ, ಯಾರೂ ಭಯಪಡಬಾರದು, ನಾನು ಯಾರನ್ನೂ ಹೆದರಿಸುವ ಅಥವಾ ಓಡಿಹೋಗುವ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ, ನಾನು ರಾಷ್ಟ್ರದ ಸಮಗ್ರ ಅಭಿವೃದ್ಧಿಗಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇನೆ. ಅಲ್ಲದೆ, ಸರ್ಕಾರಗಳು ಯಾವಾಗಲೂ ನಾವು ಮಾಡಿದ್ದೇವೆ ಎಂದು ಹೇಳುತ್ತವೆ. ನಾನು ಎಲ್ಲವನ್ನೂ ಸರಿಯಾದ ದಿಕ್ಕಿನಲ್ಲಿ ತರಲು ಯಶಸ್ವಿಯಾದೆ ಎಂದು ನಾನು ಹೇಳುವುದಿಲ್ಲ, ನಾನು ಮಾಡಬೇಕಾದದ್ದು ತುಂಬಾ ಇದೆ, ಏಕೆಂದರೆ ನನ್ನ ದೇಶವು ಪ್ರತಿ ಕುಟುಂಬದ ಅಗತ್ಯಗಳನ್ನು ಹೊಂದಿದೆ. ಹೀಗಾಗಿಯೇ ಇದು ಟ್ರೈಲರ್ ಎಂದು ನಾನು ಹೇಳುತ್ತೇನೆ ಎಂದು ಮೋದಿ ಹೇಳಿದರು.

ಸರ್ಕಾರದ ಮಹತ್ವಾಕಾಂಕ್ಷೆಯ “2047 ವಿಕಸಿತ ಭಾರತ” (ಅಭಿವೃದ್ಧಿ ಹೊಂದಿದ ಭಾರತ) ಯೋಜನೆಗಾಗಿ ತಮ್ಮ ಯೋಜನೆಯನ್ನು ಬಹಿರಂಗಪಡಿಸಿದ ಪ್ರಧಾನಮಂತ್ರಿ ಅವರು ಕಳೆದ ಎರಡು ವರ್ಷಗಳಿಂದ ಅದರ ಕೆಲಸಗಳು ನಡೆಯುತ್ತಿವೆ ಎಂದು ಹೇಳಿದರು.
“ನಾನು ಕಳೆದ ಎರಡು ವರ್ಷಗಳಿಂದ ʼ2047 ವಿಕಸಿತ ಭಾರತʼ ದ ಬಗ್ಗೆ ಕೆಲಸ ಮಾಡುತ್ತಿದ್ದೇನೆ ಮತ್ತು ಅದಕ್ಕಾಗಿ ನಾನು ದೇಶಾದ್ಯಂತದ ಜನರ ಅಭಿಪ್ರಾಯ ಮತ್ತು ಸಲಹೆಗಳನ್ನು ಕೇಳಿದೆ. ಮುಂಬರುವ 25 ವರ್ಷಗಳಲ್ಲಿ ಭಾರತವನ್ನು ಹೇಗೆ ನೋಡಬೇಕೆಂದು ನಾನು 15 ಲಕ್ಷಕ್ಕೂ ಹೆಚ್ಚು ಜನರಿಂದ ಸಲಹೆಗಳನ್ನು ತೆಗೆದುಕೊಂಡಿದ್ದೇನೆ ” ಎಂದು ಅವರು ಹೇಳಿದರು.
“ನಾನು ವಿಶ್ವವಿದ್ಯಾನಿಲಯಗಳನ್ನು ಸಂಪರ್ಕಿಸಿದೆ, ನಾನು ವಿವಿಧ ಎನ್‌ಜಿಒಗಳನ್ನು ಸಂಪರ್ಕಿಸಿದೆ ಮತ್ತು 15-20 ಲಕ್ಷ ಜನರು ತಮ್ಮ ಇನ್‌ಪುಟ್‌ಗಳನ್ನು ನೀಡಿದರು. ನಂತರ ನಾನು ಕೃತಕ ಬುದ್ಧಿಮತ್ತೆ (AI) ಸಹಾಯವನ್ನು ಪಡೆದುಕೊಂಡೆ ಮತ್ತು ಅದನ್ನು ವಿಷಯವಾರು ವರ್ಗೀಕರಿಸಿದೆ. ನಾನು ಈ ನಿಟ್ಟಿನಲ್ಲಿ ಕೆಲಸ ಮಾಡಲು ಪ್ರತಿ ಇಲಾಖೆಯಲ್ಲಿ ಅದಕ್ಕಾಗಿಯೇ ನಗದಿಪಡಿಸಿದ ಅಧಿಕಾರಿಗಳ ತಂಡವನ್ನು ರಚಿಸಿದೆ. ಹೇಗೆ ಅದನ್ನು ಮುಂದಿನ ಅವಧಿಗೆ ಮಾಡಬೇಕು? ಮತ್ತು ನಂತರ ನಾನು ಅವರೊಂದಿಗೆ ಕುಳಿತುಕೊಂಡೆ ಮತ್ತು ಅವರು ಎರಡರಿಂದ 2.5 ಗಂಟೆಗಳ ಕಾಲ ಈ ಬಗ್ಗೆ ಪ್ರೆಸೆಂಟೇಶನ್‌ ನೀಡಿದರು ಎಂದು ಮೋದಿ ತಿಳಿಸಿದರು.

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ದೇಶದ ಮತದಾರರು ಕಳೆದ 10 ವರ್ಷಗಳಲ್ಲಿ ತನ್ನ ಸಾಧನೆಯನ್ನು ತೋರಿಸಿರುವ ಬಿಜೆಪಿ ಮಾದರಿ ಹಾಗೂ “ವಿಫಲ ಕಾಂಗ್ರೆಸ್ ಮಾದರಿ” ನಡುವೆ ಆಯ್ಕೆ ಮಾಡುತ್ತಾರೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
“ನಾವು 2024 ರ ಚುನಾವಣೆಯನ್ನು ನೋಡಿದರೆ, ದೇಶದ ಮುಂದೆ ಒಂದು ಅವಕಾಶವಿದೆ. ಕಾಂಗ್ರೆಸ್ ಸರ್ಕಾರದ ಮಾದರಿ ಮತ್ತು ಬಿಜೆಪಿ ಸರ್ಕಾರದ ಮಾದರಿ ಇದೆ. ಅವರು 5-6 ದಶಕಗಳಿಂದ ಕೆಲಸ ಮಾಡಿದ್ದಾರೆ ಮತ್ತು ನಾನು 10 ವರ್ಷ ಮಾತ್ರ ಕೆಲಸ ಮಾಡಿದ್ದೇನೆ. ಇವುಗಳನ್ನು ಹೋಲಿಕೆ ಮಾಡಿ ಕೆಲವು ನ್ಯೂನತೆಗಳಿದ್ದರೂ, ನಮ್ಮ ಪ್ರಯತ್ನಗಳಲ್ಲಿ ಯಾವುದೇ ಕೊರತೆ ಇಲ್ಲ ಎಂದು ಪ್ರಧಾನಿ ಹೇಳಿದರು.
ಕಳೆದ ಎರಡು ವರ್ಷಗಳಿಂದ ವಿಕಸಿತ ಭಾರತ ಯೋಜನೆಯ ಕೆಲಸ ನಡೆಯುತ್ತಿದೆ. ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ತಾವು ಚುನಾಯಿತರಾದರೆ ತಮ್ಮ ಮೊದಲ 100 ದಿನಗಳ ಅಧಿಕಾರದ ಅವಧಿಗೆ ಈಗಾಗಲೇ ಯೋಜನೆ ರೂಪಿಸಿದ್ದಾಗಿ ಪ್ರಧಾನಿ ಹೇಳಿದ್ದಾರೆ. ಭಾರತಮಾತೆಗೆ ಮಗನಂತೆ ಸೇವೆ ಸಲ್ಲಿಸುತ್ತಿದ್ದೇನೆ. ಇದೇ ನನ್ನ ಧ್ಯೇಯ ಎಂದು ಹೇಳಿದರು.

ಪ್ರಮುಖ ಸುದ್ದಿ :-   ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣ: ಉದ್ಯಮಿ ನೀರವ್ ಮೋದಿ ಸಹೋದರ ನೇಹಲ್ ಮೋದಿ ಅಮೆರಿಕದಲ್ಲಿ ಬಂಧನ

ಇ.ಡಿ.,  ಕೇಂದ್ರೀಯ ಸಂಸ್ಥೆಗಳ ‘ದುರುಪಯೋಗ’ ಆರೋಪಕ್ಕೆ ಪ್ರಧಾನಿ ಮೋದಿ ಉತ್ತರ
ಕಳೆದ ದಶಕದಲ್ಲಿ ಕಪ್ಪುಹಣ ಮತ್ತು ಭ್ರಷ್ಟಾಚಾರವನ್ನು ತಡೆಗಟ್ಟುವಲ್ಲಿ ಜಾರಿ ನಿರ್ದೇಶನಾಲಯದ ಪಾತ್ರವನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದರು. ವಿರೋಧ ಪಕ್ಷದ ನಾಯಕರ ಧ್ವನಿಯನ್ನು ಅಡಗಿಸಲು ಬಿಜೆಪಿಯು ಕೇಂದ್ರೀಯ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂಬ ಆರೋಪವನ್ನು ಅವರು ತಳ್ಳಿಹಾಕಿದರು ಮತ್ತು ಇಡಿ ಪ್ರಕರಣಗಳಲ್ಲಿ 97% ರಾಜಕೀಯದಲ್ಲಿ ಭಾಗಿಯಾಗದ ಜನರ ವಿರುದ್ಧವಾಗಿದೆ ಎಂದು ಸಮರ್ಥಿಸಿಕೊಂಡರು.
“ಕಳೆದ ಹತ್ತು ವರ್ಷಗಳಲ್ಲಿ ನಾವು 2,200 ಕೋಟಿ ರೂಪಾಯಿ ನಗದು ವಸೂಲಿ ಮಾಡಿದ್ದೇವೆ, ಆದರೆ 2014 ಕ್ಕಿಂತ ಮೊದಲು ಇ.ಡಿ.ಗೆ ಕೇವಲ 34 ಲಕ್ಷ ರೂಪಾಯಿಗಳನ್ನು ಮಾತ್ರ ವಸೂಲಿ ಮಾಡಲು ಸಾಧ್ಯವಾಗಿತ್ತು, ಅದನ್ನು ಶಾಲಾ ಬ್ಯಾಗ್‌ನಲ್ಲಿ ಕೊಂಡೊಯ್ಯಬಹುದು … ಇದರರ್ಥ ಇ.ಡಿ. ಉತ್ತಮವಾಗಿ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದರು. ಭ್ರಷ್ಟಾಚಾರ ದೇಶವನ್ನು ನಾಶ ಮಾಡಿದೆ. ಹೀಗಾಗಿ ಅದನ್ನು ಸಂಪೂರ್ಣ ಶಕ್ತಿಯಿಂದ ಎದುರಿಸಬೇಕಾಗಿದೆ ಎಂದು ಪ್ರತಿಪಾದಿಸಿದರು.
ಒಂದು ರಾಷ್ಟ್ರ, ಒಂದು ಚುನಾವಣೆ…
ದೇಶದಲ್ಲಿ ಒಂದು ರಾಷ್ಟ್ರ, ಒಂದು ಚುನಾವಣೆ ಎಂಬ ಕಲ್ಪನೆಯೊಂದಿಗೆ ಅನೇಕ ಜನರು ಬಂದಿದ್ದಾರೆ ಎಂದು ಹೇಳಿದರು. “ಸಮಿತಿಯು ಅತ್ಯಂತ ಸಕಾರಾತ್ಮಕ ಮತ್ತು ನವೀನ ಸಲಹೆಗಳನ್ನು ಸ್ವೀಕರಿಸಿದೆ ಮತ್ತು ನಾವು ಈ ವರದಿಯನ್ನು ಕಾರ್ಯಗತಗೊಳಿಸಲು ಸಾಧ್ಯವಾದರೆ ದೇಶಕ್ಕೆ ಬಹಳಷ್ಟು ಪ್ರಯೋಜನವಾಗುತ್ತದೆ” ಎಂದು ಪ್ರಧಾನಿ ಹೇಳಿದರು.

ಚುನಾವಣಾ ಬಾಂಡ್‌ಗಳ ಕುರಿತು…
ಚುನಾವಣಾ ಬಾಂಡ್‌ಗಳನ್ನು ಸಮರ್ಥಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ, ಇದು ಹಣದ ಹಾದಿಯನ್ನು ಸ್ಪಷ್ಟಪಡಿಸಿದೆ ಮತ್ತು “ಮುಂದೆ ಪ್ರತಿಯೊಬ್ಬರೂ ಅದನ್ನು ರದ್ದುಗೊಳಿಸುವುದಕ್ಕೆ ವಿಷಾದಿಸುತ್ತಾರೆ” ಎಂದು ಅವರು ಹೇಳಿದರು.
“ಚುನಾವಣೆಯಲ್ಲಿ ಹಣ ಖರ್ಚಾಗುತ್ತದೆ, ಇದನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ. ನನ್ನ ಪಕ್ಷವೂ ಖರ್ಚು ಮಾಡುತ್ತದೆ, ಎಲ್ಲಾ ಪಕ್ಷಗಳು, ಅಭ್ಯರ್ಥಿಗಳು ಖರ್ಚು ಮಾಡುತ್ತಾರೆ ಮತ್ತು ಜನರಿಂದ ಹಣವನ್ನು ತೆಗೆದುಕೊಳ್ಳಬೇಕು. ಈ ಕಪ್ಪುಹಣದ ಚುನಾವಣೆಯನ್ನು ಮುಕ್ತಗೊಳಿಸಲು ನಾವು ಏನಾದರೂ ಪ್ರಯತ್ನಿಸಬೇಕೆಂದು ನಾನು ಬಯಸುತ್ತೇನೆ. ನನ್ನ ಮನಸ್ಸಿನಲ್ಲಿ ಶುದ್ಧ ಆಲೋಚನೆ ಇತ್ತು. ನಾವು ದಾರಿ ಹುಡುಕುತ್ತಿದ್ದೆವು. ನಾವು ಒಂದು ಸಣ್ಣ ಮಾರ್ಗವನ್ನು ಕಂಡುಕೊಂಡಿದ್ದೇವೆ, ಇದು ಪರಿಪೂರ್ಣ ಮಾರ್ಗ ಎಂದು ನಾವು ಎಂದಿಗೂ ಹೇಳಿಕೊಂಡಿಲ್ಲ ಎಂದು ಪ್ರಧಾನಿ ಮೋದಿ ಹೇಳಿದರು.
ಚುನಾವಣಾ ಬಾಂಡ್‌ಗಳು ಯಾವ ಕಂಪನಿ ಕೊಟ್ಟವು, ಹೇಗೆ ಕೊಟ್ಟವು ಮತ್ತು ಎಲ್ಲಿ ಕೊಟ್ಟವು ಎಂಬುದನ್ನು ತೋರಿಸುತ್ತವೆ ಎಂದರು. “ಮತ್ತು ಅದಕ್ಕಾಗಿಯೇ ನಾನು ಹೇಳುತ್ತೇನೆ ಅವರು (ವಿರೋಧ) ಪ್ರಾಮಾಣಿಕವಾಗಿ ಯೋಚಿಸಿದಾಗ, ಪ್ರತಿಯೊಬ್ಬರೂ ವಿಷಾದಿಸುತ್ತಾರೆ ಎಂದು ಅವರು ಹೇಳಿದರು.
ಸಂಬಂಧಿತ ಮಸೂದೆಯನ್ನು ಅಂಗೀಕರಿಸಿದಾಗ ಚುನಾವಣಾ ಬಾಂಡ್‌ಗಳ ಯೋಜನೆ ಕುರಿತು ಸಂಸತ್ತಿನಲ್ಲಿ ಚರ್ಚೆ ನಡೆದಿತ್ತು ಮತ್ತು ಈಗ ಅದರ ಬಗ್ಗೆ ಪ್ರತಿಕ್ರಿಯಿಸುತ್ತಿರುವ ಕೆಲವರು ಅದನ್ನು ಬೆಂಬಲಿಸಿದ್ದಾರೆ ಎಂದು ಅವರು ಹೇಳಿದರು.
ಚುನಾವಣಾ ಬಾಂಡ್‌ಗಳ ಮೇಲೆ ಸುಳ್ಳುಗಳನ್ನು ಹರಡಿದ್ದಕ್ಕಾಗಿ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಯೋಜನೆಯ ಮೂಲಕ ದೇಣಿಗೆ ನೀಡಿದ 3,000 ಕಂಪನಿಗಳ ಬಗ್ಗೆ, 26 ಇ.ಡಿ.(E.D.) ಯಂತಹ ಏಜೆನ್ಸಿಗಳಿಂದ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದರು.

‘ಸನಾತನ ವಿರೋಧಿ’ ಡಿಎಂಕೆ ಜೊತೆಗಿನ ಕಾಂಗ್ರೆಸ್ ಮೈತ್ರಿ ಪ್ರಶ್ನಿಸಿದ ಮೋದಿ….
ತಮಿಳುನಾಡಿನಲ್ಲಿ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಜೊತೆಗಿನ ಮೈತ್ರಿಯ ಬಗ್ಗೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್‌ನ “ಸನಾತನ ವಿರೋಧಿ” ನಿಲುವಿನ ಬಗ್ಗೆ ಪ್ರಶ್ನಿಸಿದ್ದಾರೆ. ಸನಾತನ ಧರ್ಮದ ವಿರುದ್ಧ “ದ್ವೇಷ” ಮತ್ತು “ವಿಷ”ವನ್ನು ಉಗುಳುವ ಡಿಎಂಕೆಯೊಂದಿಗೆ ಮೈತ್ರಿ ಮಾಡಿಕೊಳ್ಳಲು ಕಾಂಗ್ರೆಸ್‌ ಯಾಕೆ ಕಟ್ಟುಬಿದ್ದಿದೆ ಎಂದು ಪ್ರಶ್ನಿಸಿದರು.
“ಮಹಾತ್ಮಾ ಗಾಂಧಿಯವರ ಹೆಸರನ್ನು ಹೊಂದಿರುವ ಕಾಂಗ್ರೆಸ್, ಇಂದಿರಾ ಗಾಂಧಿ ಕೊರಳಿಗೆ ಮಾಲೆ (ರುದ್ರಾಕ್ಷ ಮಾಲೆ) ಹಾಕುತ್ತಿದ್ದ ಕಾಂಗ್ರೆಸ್ ಎಂಬ ಬಗ್ಗೆ ಪ್ರಶ್ನೆಯನ್ನು ಕಾಂಗ್ರೆಸ್‌ಗೆ ಕೇಳಬೇಕು. ನಿಮ್ಮ ಅಸಹಾಯಕತೆ ಏನು? ಸನಾತನ ಧರ್ಮದ ವಿರುದ್ಧ ಕಿಡಿಕಾರಿದವರ ಜೊತೆ ಯಾಕೆ ಕುಳಿತಿದ್ದೀರಿ? ನಿಮ್ಮ ರಾಜಕೀಯ ಅಪೂರ್ಣವಾಗಿ ಉಳಿಯುತ್ತದೆಯೇ? ಈ ಕಾಂಗ್ರೆಸ್ ಏನು ಯೋಚಿಸುತ್ತಿದೆ? ಇದು ಕಳವಳಕಾರಿ ವಿಷಯವಾಗಿದೆ ಎಂದು ಪ್ರಧಾನಿ ಹೇಳಿದರು.
ಮೊದಲ ಸಂವಿಧಾನದ ಪ್ರತಿ ಪುಟದಲ್ಲಿರುವ ಪೇಂಟಿಂಗ್‌ ಸನಾತನಕ್ಕೆ ಸಂಪರ್ಕ ಹೊಂದಿದೆ, ಅದು ಸರ್ಕಾರದ ಭಾಗವಾಗಿದೆ ಎಂದು ಅವರು ಹೇಳಿದರು. “ಇಂದು ಯಾರಿಗಾದರೂ ಸನಾತನವನ್ನು ಇಷ್ಟೊಂದು ದುರುಪಯೋಗಪಡಿಸಿಕೊಳ್ಳುವ ಧೈರ್ಯವಿದ್ದರೆ ಮತ್ತು ನೀವು ಚುನಾವಣೆಗಾಗಿ ಅವರೊಂದಿಗೆ ರಾಜಕೀಯ ಮಾಡಿ ಆ ಪಕ್ಷವನ್ನು ಬೆಂಬಲಿಸಿದರೆ ಅದು ದೇಶಕ್ಕೆ ಕಳವಳಕಾರಿ ” ಎಂದು ಪ್ರಧಾನಿ ಹೇಳಿದರು. “ಡಿಎಂಕೆ ವಿರುದ್ಧ ಜನರ ಕೋಪವು ಬಿಜೆಪಿಯತ್ತ ಸಕಾರಾತ್ಮಕ ರೀತಿಯಲ್ಲಿ ತಿರುಗುತ್ತಿದೆ” ಎಂದು ಅವರು ಹೇಳಿದರು.

ಪ್ರಮುಖ ಸುದ್ದಿ :-   ಮನೆ ಮುಂದೆಯೇ ಗುಂಡು ಹಾರಿಸಿ ಬಿಜೆಪಿ ನಾಯಕ-ಖ್ಯಾತ ಉದ್ಯಮಿ ಗೋಪಾಲ ಖೇಮ್ಕಾ ಹತ್ಯೆ

ಉಕ್ರೇನ್‌ನಿಂದ ಭಾರತೀಯ ವಿದ್ಯಾರ್ಥಿಗಳನ್ನು ಮನೆಗೆ ಕರೆತರಲು ತಮ್ಮ ಮಧ್ಯಸ್ಥಿಕೆ ಬಗ್ಗೆ…
ಕಳೆದ ದಶಕದಲ್ಲಿ ಭಾರತದ ಹೆಚ್ಚಿದ ವಿಶ್ವಾಸಾರ್ಹತೆಯನ್ನು ಒತ್ತಿ ಹೇಳಿದ ಪ್ರಧಾನಿ ನರೇಂದ್ರ ಮೋದಿ, ರಷ್ಯಾ-ಉಕ್ರೇನ್ ಸಂಘರ್ಷದ ಆರಂಭದಲ್ಲಿ ಹಲವಾರು ಭಾರತೀಯರು ಉಕ್ರೇನ್‌ನಲ್ಲಿ ಸಿಲುಕಿಕೊಂಡಾಗ ಭಾರತೀಯ ತ್ರಿವರ್ಣ ಧ್ವಜದ ಶಕ್ತಿಯೇ ತಮ್ಮ “ಗ್ಯಾರಂಟಿ” ಎಂದು ಹೇಳಿದರು.
“ನಾನು ಇಬ್ಬರೂ ಅಧ್ಯಕ್ಷರೊಂದಿಗೆ (ರಷ್ಯಾ ಮತ್ತು ಉಕ್ರೇನ್) ತುಂಬಾ ಸ್ನೇಹದಿಂದ ಇದ್ದೇನೆ. ಇದು ಯುದ್ಧದ ಸಮಯವಲ್ಲ ಎಂದು ನಾನು ಅಧ್ಯಕ್ಷ ಪುತಿನ್‌ ಅವರಿಗೆ ಸಾರ್ವಜನಿಕವಾಗಿ ಹೇಳಬಲ್ಲೆ. ನಾವು ಸಂವಾದದ ಮಾರ್ಗವನ್ನು ಅನುಸರಿಸಬೇಕು ಎಂದು ನಾನು ಉಕ್ರೇನ್‌ಗೆ ಸಾರ್ವಜನಿಕವಾಗಿ ಹೇಳಬಲ್ಲೆ” “ಇದು ವಿಶ್ವಾಸಾರ್ಹತೆ ಇರುವುದರಿಂದ ನನಗೆ ಸಾಧ್ಯ” ಎಂದು ಅವರು ಹೇಳಿದರು.
ಭಾರತೀಯ ಧ್ವಜದ ಶಕ್ತಿ ದೊಡ್ಡದಾಗಿದೆ. ವಿದೇಶಿಯರು ಕೂಡ ಭಾರತೀಯ ಧ್ವಜವನ್ನು ಕೈಯಲ್ಲಿ ಹಿಡಿಯುತ್ತಿದ್ದಾರೆ. ಆದ್ದರಿಂದ ನಮಗೆ ಒಂದು ಸ್ಥಳವಿತ್ತು. ಹಾಗಾಗಿ ನನ್ನ ಧ್ವಜ ನನ್ನ ಗ್ಯಾರಂಟಿಯಾಯಿತು ಎಂದು ಪ್ರಧಾನಿ ಮೋದಿ ಹೇಳಿದರು.
ಭಾರತದ ರಾಜತಾಂತ್ರಿಕ ಪರಾಕ್ರಮವನ್ನು ಎತ್ತಿ ತೋರಿಸಿದ ಅವರು, 2015 ರಲ್ಲಿ ಯುದ್ಧಪೀಡಿತ ಯೆಮೆನ್‌ನಿಂದ ಭಾರತೀಯರನ್ನು ಸ್ಥಳಾಂತರಿಸುವ ಸಂದರ್ಭದಲ್ಲಿ ಭಾರತದ ಕೋರಿಕೆಯ ಮೇರೆಗೆ ‘ಬಾಂಬಾರ್ಡಿಂಗ್‌ ನಡೆದಿಲ್ಲ’ ಎಂದು ನೆನಪಿಸಿಕೊಂಡರು.

ಸೌದಿ ಕ್ರೌನ್ ಪ್ರಿನ್ಸ್‌ನೊಂದಿಗೆ ಅಮೆರಿಕ ಅಧ್ಯಕ್ಷರ ಹಸ್ತಲಾಘವದಲ್ಲಿ ಪ್ರಧಾನಿ ಮೋದಿಯವರ ‘ತಂತ್ರ’
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಮತ್ತು ಸೌದಿ ಕ್ರೌನ್ ಪ್ರಿನ್ಸ್ ಬಿನ್ ಸಲ್ಮಾನ್ ನಡುವಿನ ಹಸ್ತಲಾಘವವನ್ನು ನೆನಪಿಸಿಕೊಂಡರು ಮತ್ತು ಜಂಟಿ ಜಿ 20 ಘೋಷಣೆಯ ಬಗ್ಗೆ ಪಾಶ್ಚಿಮಾತ್ಯ ಮಾಧ್ಯಮ ವಿಮರ್ಶಕರದ್ದು ತಪ್ಪು ಎಂದು ಸಾಬೀತುಪಡಿಸಿದರು.
“… ನಾನು ಕೊನೆಯ ಅಧಿವೇಶನದವರೆಗೆ ಕಾಯಲು ಬಯಸಲಿಲ್ಲ. ನಾನು ಅದನ್ನು ಬೇಗನೆ ಮಾಡಬೇಕೆಂದು ಬಯಸಿದ್ದೆ ಅದು ಜನರನ್ನು ಆಶ್ಚರ್ಯಗೊಳಿಸುತ್ತದೆ. ಎರಡನೇ ದಿನದಲ್ಲಿಯೇ ನಾವು ಮೊದಲ ಅಧಿವೇಶನದಲ್ಲಿ ಘೋಷಣೆಯನ್ನು ಪಡೆದುಕೊಂಡಿದ್ದೇವೆ,” ಎಂದು ಅವರು ಹೇಳಿದರು, “ಋಣಾತ್ಮಕ ಅಂದಾಜಿನ ಆಧಾರದ ಮೇಲೆ G20 ಅನ್ನು ಎಳೆದುತರಲು ಪ್ರಯತ್ನಿಸಲಾಯಿತು – ನಾನು ಅವರನ್ನು ಎಲ್ಲ ರೀತಿಯಿಂದಲೂ ಅಚ್ಚರಿಗೊಳಿಸಲು ಬಯಸುತ್ತೇನೆ. ಅದು ನನ್ನ ತಂತ್ರವಾಗಿತ್ತು. ತಂತ್ರವು ಯಶಸ್ವಿಯಾಗಿದೆ ಮತ್ತು ನನಗೆ ಸಂತೋಷವಾಗಿದೆ …ಎಂದು ಮೋದಿ ಹೇಳಿದರು.

ಉತ್ತರ-ದಕ್ಷಿಣ ಚರ್ಚೆಯಲ್ಲಿ ಪ್ರಧಾನಿ ಮೋದಿ
‘ಉತ್ತರ-ದಕ್ಷಿಣ ಚರ್ಚೆ’ ಕುರಿತು ಪ್ರತಿಕ್ರಿಯಿಸಿದ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರವನ್ನು ಪ್ರತ್ಯೇಕ ಘಟಕಗಳಾಗಿ ನೋಡುವುದು “ಭಾರತದ ಬಗ್ಗೆ ಬುದ್ದಿಹೀನತೆಯ ಪರಿಣಾಮವಾಗಿದೆ” ಎಂದು ಹೇಳಿದರು. “ಭಾರತದ ಯಾವ ಭಾಗವು ಭಗವಾನ್ ರಾಮನ ಹೆಸರಿನೊಂದಿಗೆ ಹೆಚ್ಚು ಸಂಖ್ಯೆಯ ಹಳ್ಳಿಗಳನ್ನು ಹೊಂದಿದೆ? ತಮಿಳುನಾಡು… ವೈವಿಧ್ಯತೆ ನಮ್ಮ ಶಕ್ತಿ, ನಾವು ಅದನ್ನು ಆಚರಿಸಬೇಕು… ನೀವು ಅದನ್ನು ಪ್ರತ್ಯೇಕ (ಘಟಕ) ಎಂದು ಹೇಗೆ ಕರೆಯಬಹುದು?” ಎಂದು ಪ್ರಧಾನಿ ಮೋದಿ ಹೇಳಿದರು.
ವೈವಿಧ್ಯತೆಯೇ ನಮ್ಮ ಶಕ್ತಿ ಅದನ್ನು ಸಂಬ್ರಮಿಸಬೇಕು. ಭಾರತವು ಒಂದು ಪುಷ್ಪಗುಚ್ಛವಾಗಿದ್ದು, ಪ್ರತಿಯೊಬ್ಬರೂ ತಮ್ಮ ಹೂವನ್ನು ನೋಡಬಹುದು. ಆ ಭಾವನೆಯನ್ನು ಆಶ್ರಯಿಸಬೇಕು” ಎಂದು ಪ್ರಧಾನಿ ಮೋದಿ ಹೇಳಿದರು.

5 / 5. 5

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement