ಇತ್ತೀಚೆಗೆ ಹಿಟ್ ಆ್ಯಂಡ್ ರನ್ ಪ್ರಕರಣಗಳು ಹೆಚ್ಚಾಗುತ್ತಿವೆ. ಟ್ರಕ್ವೊಂದು ಬೈಕ್ಗೆ ಡಿಕ್ಕಿ ಹೊಡೆದು ಚಾಲಕನ ಸಮೇತ ಎಳೆದೊಯ್ದಿರುವ ಘಟನೆ ಹೈದರಾಬಾದ್ನಲ್ಲಿ ನಡೆದಿದ್ದು ಚಾಲಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಹಿಟ್ ಆ್ಯಂಡ್ ರನ್ ಪ್ರಕರಣದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವೇಗವಾಗಿ ಚಲಿಸುತ್ತಿದ್ದ ಲಾರಿಯೊಂದು ಬೈಕ್ಗೆ ಡಿಕ್ಕಿ ಹೊಡೆದ ನಂತರ ಮುಂಭಾಗದ ಟೈರ್ ಅಡಿಯಲ್ಲಿ ಬೈಕ್ ಅನ್ನು ಎಳೆದುಕೊಂಡು ಹೋಗುವುದನ್ನು ವೀಡಿಯೊ ತೋರಿಸುತ್ತದೆ. ಅದೃಷ್ಟವಶಾತ್ ಬೈಕ್ ಸವಾರ ತೀವ್ರ ಅಪಾಯದಿಂದ ಪಾರಾಗಿದ್ದಾನೆ. ಬೈಕ್ ಸವಾರ ಹೇಗೋ ಮಾಡಿ ಬೈಕ್ನಿಂದ ಹೊರಬಂದು ಲಾರಿಯ ಎಡ ಬದಿಯ ಕಿಟಕಿ ಬದಿ ಹಿಡಿದು ನೇತಾಡುತ್ತಿರುವುದನ್ನು ಕಾಣಬಹುದು. ಸ್ವಲ್ಪ ದೂರ ಹೋಗ ಬಳಿಕ ಲಾರಿ ಚಕ್ರಕ್ಕೆ ಸಿಲುಕಿದ್ದ ಬೈಕ್ ಬೇರ್ಪಡುತ್ತದೆ. ಈ ಘಟನೆ ಏಪ್ರಿಲ್ 14ರಂದು ನಡೆದಿದೆ.
ಏಪ್ರಿಲ್ 14ರಂದು ರಾತ್ರಿ 11 ಗಂಟೆ ಸುಮಾರಿಗೆ ಚಂಪಾಪೇಟೆಯ ಲಕ್ಷ್ಮೀ ಗಾರ್ಡನ್ ಕಡೆಗೆ ಬೈಕ್ನಲ್ಲಿ ಹೋಗುತ್ತಿದ್ದಾಗ ಹಿಂದಿನಿಂದ ಅತಿವೇಗವಾಗಿ ಬಂದ ಟ್ರಕ್ ಡಿಕ್ಕಿ ಹೊಡೆದಿತ್ತು.
ಡಿಕ್ಕಿಯ ನಂತರ ಬೈಕ್ ಲಾರಿಯ ಮುಂದಿನ ಚಕ್ರದ ಕೆಳಗೆ ಸಿಲುಕಿದೆ. , ಆಗ ಟ್ರಕ್ ಚಾಲಕ ವಾಹನವನ್ನು ನಿಲ್ಲಿಸದೆ ಲಾರಿ ಓಡಿಸಿಕೊಂಡು ಹೋಗಿದ್ದಾನೆ. ಆಗ ಬೈಕ್ ಸವಾರ ಅದು ಹೇಗೆ ಲಾರಿ ಮುಂದಿನ ಭಾಗದ ಟೈರ್ ಮೇಲಿನ ಕಿಟಕಿ ಹಿಡಿದುಕೊಂಡು ಬಚಾವ್ ಆಗಿದ್ದಾನೆ.
ಈ ಘಟನೆಯ ವೀಡಿಯೊವನ್ನು ಹಿಂದೆ ಬರುತ್ತಿದ್ದ ದ್ವಿಚಕ್ರ ವಾಹನ ಸವಾರರು ಮಾಡಿದ್ದಾರೆ. ಸವಾರನಿಗೆ ಗಾಯವಾಗದಿದ್ದರೂ ಆತನ ದ್ವಿಚಕ್ರವಾಹನವನ್ನು ಟ್ರಕ್ ಸುಮಾರು ದೂರ ಎಳೆದುಕೊಂಡು ಹೋಗಿದೆ.
ನಂತರ ಅದೇ ಟ್ರಕ್ ಚಂಪಾಪೇಟ್ ಟಿ ಜಂಕ್ಷನ್ನಲ್ಲಿ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದಿದೆ. ಪೊಲೀಸರು ಈ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಘಟನೆಗೆ ಅತಿಯಾದ ವೇಗವೇ ಕಾರಣ ಎಂದು ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ. ಪೊಲೀಸರ ಪ್ರಕಾರ ಏಪ್ರಿಲ್ 15ರಂದು ಈ ಕುರಿತು ದೂರು ನೀಡಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ