ವೀಡಿಯೊ…| ಬೈಕ್​ಗೆ ಡಿಕ್ಕಿ ಹೊಡೆದ ನಂತ್ರ ದೂರ ಎಳೆದೊಯ್ದ ಲಾರಿ..: ಟ್ರಕ್‌ ಹಿಡಿದುಕೊಂಡು ನೇತಾಡುತ್ತಿದ್ದ ಸವಾರ

ಇತ್ತೀಚೆಗೆ ಹಿಟ್​ ಆ್ಯಂಡ್​ ರನ್ ಪ್ರಕರಣಗಳು ಹೆಚ್ಚಾಗುತ್ತಿವೆ. ಟ್ರಕ್​ವೊಂದು ಬೈಕ್​ಗೆ ಡಿಕ್ಕಿ ಹೊಡೆದು ಚಾಲಕನ ಸಮೇತ ಎಳೆದೊಯ್ದಿರುವ ಘಟನೆ ಹೈದರಾಬಾದ್​ನಲ್ಲಿ ನಡೆದಿದ್ದು ಚಾಲಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಹಿಟ್​ ಆ್ಯಂಡ್ ರನ್ ಪ್ರಕರಣದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವೇಗವಾಗಿ ಚಲಿಸುತ್ತಿದ್ದ ಲಾರಿಯೊಂದು ಬೈಕ್​ಗೆ ಡಿಕ್ಕಿ ಹೊಡೆದ ನಂತರ ಮುಂಭಾಗದ ಟೈರ್ ಅಡಿಯಲ್ಲಿ ಬೈಕ್‌ ಅನ್ನು ಎಳೆದುಕೊಂಡು ಹೋಗುವುದನ್ನು ವೀಡಿಯೊ ತೋರಿಸುತ್ತದೆ. ಅದೃಷ್ಟವಶಾತ್‌ ಬೈಕ್‌ ಸವಾರ ತೀವ್ರ ಅಪಾಯದಿಂದ ಪಾರಾಗಿದ್ದಾನೆ. ಬೈಕ್ ಸವಾರ ಹೇಗೋ ಮಾಡಿ ಬೈಕ್​ನಿಂದ ಹೊರಬಂದು ಲಾರಿಯ ಎಡ ಬದಿಯ ಕಿಟಕಿ ಬದಿ ಹಿಡಿದು ನೇತಾಡುತ್ತಿರುವುದನ್ನು ಕಾಣಬಹುದು. ಸ್ವಲ್ಪ ದೂರ ಹೋಗ ಬಳಿಕ ಲಾರಿ ಚಕ್ರಕ್ಕೆ ಸಿಲುಕಿದ್ದ ಬೈಕ್​ ಬೇರ್ಪಡುತ್ತದೆ. ಈ ಘಟನೆ ಏಪ್ರಿಲ್​ 14ರಂದು ನಡೆದಿದೆ.

ಏಪ್ರಿಲ್​ 14ರಂದು ರಾತ್ರಿ 11 ಗಂಟೆ ಸುಮಾರಿಗೆ ಚಂಪಾಪೇಟೆಯ ಲಕ್ಷ್ಮೀ ಗಾರ್ಡನ್ ಕಡೆಗೆ ಬೈಕ್​ನಲ್ಲಿ ಹೋಗುತ್ತಿದ್ದಾಗ ಹಿಂದಿನಿಂದ ಅತಿವೇಗವಾಗಿ ಬಂದ ಟ್ರಕ್ ಡಿಕ್ಕಿ ಹೊಡೆದಿತ್ತು.
ಡಿಕ್ಕಿಯ ನಂತರ ಬೈಕ್‌ ಲಾರಿಯ ಮುಂದಿನ ಚಕ್ರದ ಕೆಳಗೆ ಸಿಲುಕಿದೆ. , ಆಗ ಟ್ರಕ್ ಚಾಲಕ ವಾಹನವನ್ನು ನಿಲ್ಲಿಸದೆ ಲಾರಿ ಓಡಿಸಿಕೊಂಡು ಹೋಗಿದ್ದಾನೆ. ಆಗ ಬೈಕ್‌ ಸವಾರ ಅದು ಹೇಗೆ ಲಾರಿ ಮುಂದಿನ ಭಾಗದ ಟೈರ್‌ ಮೇಲಿನ ಕಿಟಕಿ ಹಿಡಿದುಕೊಂಡು ಬಚಾವ್‌ ಆಗಿದ್ದಾನೆ.

ಪ್ರಮುಖ ಸುದ್ದಿ :-   ವೀಡಿಯೊ: ತಾಪಮಾನ ಹೆಚ್ಚಳದಿಂದ ವಿದ್ಯಾರ್ಥಿಗಳು ಪಾರಾಗಲು ಕ್ಲಾಸ್‌ ರೂಮ್‌ ಅನ್ನೇ ಈಜುಕೊಳವಾಗಿ ಪರಿವರ್ತಿಸಿದ ಶಾಲೆ...!

ಈ ಘಟನೆಯ ವೀಡಿಯೊವನ್ನು ಹಿಂದೆ ಬರುತ್ತಿದ್ದ ದ್ವಿಚಕ್ರ ವಾಹನ ಸವಾರರು ಮಾಡಿದ್ದಾರೆ. ಸವಾರನಿಗೆ ಗಾಯವಾಗದಿದ್ದರೂ ಆತನ ದ್ವಿಚಕ್ರವಾಹನವನ್ನು ಟ್ರಕ್‌ ಸುಮಾರು ದೂರ ಎಳೆದುಕೊಂಡು ಹೋಗಿದೆ.
ನಂತರ ಅದೇ ಟ್ರಕ್​ ಚಂಪಾಪೇಟ್ ಟಿ ಜಂಕ್ಷನ್​ನಲ್ಲಿ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದಿದೆ. ಪೊಲೀಸರು ಈ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಘಟನೆಗೆ ಅತಿಯಾದ ವೇಗವೇ ಕಾರಣ ಎಂದು ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ. ಪೊಲೀಸರ ಪ್ರಕಾರ ಏಪ್ರಿಲ್ 15ರಂದು ಈ ಕುರಿತು ದೂರು ನೀಡಲಾಗಿದೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement