ಈ ಹಳ್ಳಿಯಲ್ಲಿರುವ ಮತದಾನ ಕೇಂದ್ರದ ಒಬ್ಬರೇ ಒಬ್ಬರು ಮತದಾರರಿಗಾಗಿ 40 ಕಿಮೀ ನಡೆದುಕೊಂಡು ಹೋದ ಚುನಾವಣಾ ಸಿಬ್ಬಂದಿ…!

ಈಶಾನ್ಯದ ಅರುಣಾಚಲ ಪ್ರದೇಶದ ದೂರದ ಹಳ್ಳಿ, 40-ಕಿಮೀ ಚಾರಣ ಮಾಡಿ ಅಲ್ಲಿಗೆ ಹೋಗಬೇಕು. ಆದರೆ ಈ ಮತದಾನ ಕೇಂದ್ರದಲ್ಲಿರುವುದು ಒಬ್ಬರೇ ಒಬ್ಬರು ಮತದಾರರು..! ಲೋಕಸಭೆ ಚುನಾವಣೆ ಮತದಾನಕ್ಕಾಗಿ ಏಕೈಕ ಮತದಾರರು ಇರುವ ಮಲೋಗಮ್ ಗ್ರಾಮದ ಮತದಾನ ಕೇಂದ್ರಕ್ಕೆ ಚುನಾವಣಾ ಆಯೋಗದ (EC) ಅಧಿಕಾರಿಗಳು ಗುರುವಾರ ಶ್ರಮದಾಯಕ ಸುದೀರ್ಘ ಪಾದಯಾತ್ರೆಯನ್ನು ಕೈಗೊಂಡರು. ಕೇಂದ್ರದ ಏಕೈಕ ಮತದಾರರಾದ 44 ವರ್ಷದ ಸೊಖೆಲಾ ತಯಾಂಗ್ ಅವರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಬಹುದು ಮತ್ತು ವಿಶ್ವದ ಅತಿದೊಡ್ಡ ಚುನಾವಣೆ ಲೋಕಸಭೆ ಚುನಾವಣೆ 2024ರಲ್ಲಿ ಭಾಗವಹಿಸಬಹುದು ಎಂದು ಈ ಅಧಿಕಾರಿಗಳು ತಮ್ಮ ಕರ್ತವ್ಯಕ್ಕೆ ಹಾಜರಾಗುವ ಮೂಲಕ ಖಚಿತಪಡಿಸಿದರು.

ಲೋಕಸಭೆಯ 1ನೇ ಹಂತದ ಮತದಾನಕ್ಕೂ ಮುನ್ನ ಗ್ರಾಮವನ್ನು ತಲುಪಲು ಅಗತ್ಯವಿರುವ ಎಲ್ಲ ಸಲಕರಣೆಗಳನ್ನು ಹೊತ್ತುಕೊಂಡು ಚುನಾವಣಾ ಸಿಬ್ಬಂದಿ ಭದ್ರತಾ ಸಿಬ್ಬಂದಿಯೊಂದಿಗೆ ಕನಿಷ್ಠ 40 ಕಿಮೀ ಕಾಲ್ನಡಿಗೆಯಲ್ಲಿ ಕ್ರಮಿಸಿದರು. ತಯಾಂಗ್ ಎಂಬ ಮಹಿಳೆ ಚೀನಾದ ಗಡಿ ಬಳಿ ನೆಲೆಸಿರುವ ಈ ಗ್ರಾಮದ ಏಕೈಕ ಮತದಾರರಾಗಿದ್ದಾರೆ.
ಚುನಾವಣಾ ಸಿಬ್ಬಂದಿ ತಂಡವು ಗುಡ್ಡಗಾಡು ಪ್ರದೇಶಗಳ ಮೂಲಕ ಚಾಲನೆ ಮಾಡಬೇಕಾಗಿತ್ತು ಮತ್ತು ನಂತರ 45 ಹಯುಲಿಯಾಂಗ್ ವಿಧಾನಸಭಾ ಕ್ಷೇತ್ರ ಮತ್ತು ಅರುಣಾಚಲ ಪೂರ್ವ ಸಂಸತ್ತಿನ ಕ್ಷೇತ್ರದಲ್ಲಿ 52-ಮಲೋಗಮ್ ಪೋಲಿಂಗ್ ಸ್ಟೇಷನ್ ಅನ್ನು ತಲುಪಲು ಕಾಲ್ನಡಿಗೆಯಲ್ಲಿ ಚಾರಣ ಮಾಡಬೇಕಾಗಿತ್ತು. ಶುಕ್ರವಾರ ತಯಾಂಗ್ ಅವರು ಮತ ಚಲಾಯಿಸುವವರೆಗೆ ಚುನಾವಣಾಧಿಕಾರಿಗಳು ಕೇಂದ್ರದಲ್ಲಿಯೇ ಇರುತ್ತಾರೆ ಮತ್ತು ನಂತರ ಮತಯಂತ್ರದ ಸಮೇತ ತಮ್ಮ ಮೂಲ ಸ್ಥಳಕ್ಕೆ ಹಿಂತಿರುಗುತ್ತಾರೆ.

ಪ್ರಮುಖ ಸುದ್ದಿ :-   ವೀಡಿಯೊ..| ಮತದಾನದ ವೇಳೆ ಮತಗಟ್ಟೆಯಲ್ಲಿನ ವಿವಿಪ್ಯಾಟ್‌ ಯಂತ್ರವನ್ನು ನೆಲಕ್ಕೆ ಅಪ್ಪಳಿಸಿ ಧ್ವಂಸ ಮಾಡಿದ ಶಾಸಕ...!

ಮತದಾರರಾದ ತಯಾಂಗ್ ಅವರು ಅವಿವಾಹಿತರಾಗಿದ್ದು, ಆಕೆಯ ಪೋಷಕರು ಕೆಲವು ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ. ಈ ಮಹಿಳೆ ಹಳ್ಳಿಯಲ್ಲಿ ತಾನೇ ವಾಸಿಸುತ್ತಾರೆ. ಚೀನಾ ಗಡಿ ಪ್ರಾರಂಭವಾಗುವ ಮೊದಲು ಈ ಹಳ್ಳಿಯ ಆಚೆಗೆ ಕೇವಲ ಒಂದು ಬೆಟ್ಟವಿದೆ.
21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ್ಯಂತ 102 ಕ್ಷೇತ್ರಗಳಲ್ಲಿ ಜನರು ತಮ್ಮ ಮತವನ್ನು ಏಪ್ರಿಲ್ 19ರಂದು ಚಲಾಯಿಸುತ್ತಾರೆ.
ಅರುಣಾಚಲ ಪ್ರದೇಶದಲ್ಲಿ, ಅರುಣಾಚಲ ಪ್ರದೇಶ ಪೂರ್ವ ಮತ್ತು ಅರುಣಾಚಲ ಪ್ರದೇಶ ಪಶ್ಚಿಮ ಲೋಕಸಭಾ ಕ್ಷೇತ್ರಗಳಿಗೆ ಏಪ್ರಿಲ್ 19ರಂದು ಲೋಕಸಭೆ ಚುನಾವಣೆಯ ಮೊದಲ ಹಂತದಲ್ಲಿ ಮತದಾನ ನಡೆಯಲಿದೆ.
60 ಸ್ಥಾನಗಳ ಗುಡ್ಡಗಾಡು ರಾಜ್ಯವೂ ಶುಕ್ರವಾರ ವಿಧಾನಸಭೆ ಚುನಾವಣೆಗೆ ಸಜ್ಜಾಗಿದೆ. ಈಗಾಗಲೇ 10 ಅಭ್ಯರ್ಥಿಗಳು ಅವಿರೋಧವಾಗಿ ವಿಜೇತರೆಂದು ಘೋಷಿಸಲಾಗಿದ್ದು, ಅರುಣಾಚಲ ಪ್ರದೇಶದ ಆಡಳಿತಾರೂಢ ಬಿಜೆಪಿಯು ಪ್ರತಿಪಕ್ಷ ಕಾಂಗ್ರೆಸ್ ಬದಲಿಗೆ ತನ್ನ ಮಿತ್ರಪಕ್ಷಗಳ ವಿರುದ್ಧ ಹೋರಾಟಕ್ಕೆ ಸಜ್ಜಾಗಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement