ಕತ್ತೆ…ಕತ್ತೆ ಎಂದು ಹಂಗಿಸಬೇಡಿ…; ಕತ್ತೆ ಸಾಕಣೆ ಮಾಡಿ ಲೀಟರಿಗೆ 5000 ರೂ.ನಂತೆ ಹಾಲು ಮಾರುತ್ತಿದ್ದಾನೆ ಈ ವ್ಯಕ್ತಿ…!

ಅಹಮದಾಬಾದ್: ಶತಮಾನಗಳಿಂದ, ಅವುಗಳನ್ನು ಗುರುತಿಸದೆ ವಿಡಂಬನೆಯ ರೂಪಕವಾಗಿ ಬಳಸಲಾಗುತ್ತಿದ್ದ ಕತ್ತೆಗೆ ಕೊನೆಗೂ ಬೆಲೆ ಬಂದಿದೆ. ಅದರ ಹಾಲು ಗೋವು, ಕುರಿ ಸೇರಿದಂತೆ ಇತರ ಪ್ರತಿಸ್ಪರ್ಧಿ ಪ್ರಾಣಿಗಳ ಹಾಲಿನ ಬೆಲೆಗಿಂತ 70 ಪಟ್ಟು ಹೆಚ್ಚು ದರದಲ್ಲಿ ಮಾರಾಟವಾಗುತ್ತಿದೆ….!
ಗುಜರಾತಿನ ಧೀರೇನ್ ಸೋಲಂಕಿ ಅವರು ಪಟಾನ್ ಜಿಲ್ಲೆಯ ತಮ್ಮ ಗ್ರಾಮದಲ್ಲಿ 42 ಕತ್ತೆಗಳೊಂದಿಗೆ ಕತ್ತೆ ಸಾಕಣೆ ಕೇಂದ್ರವನ್ನು ಸ್ಥಾಪಿಸಿದ್ದಾರೆ ಮತ್ತು ದಕ್ಷಿಣದ ರಾಜ್ಯಗಳ ಗ್ರಾಹಕರಿಗೆ ಕತ್ತೆ ಹಾಲು ಸರಬರಾಜು ಮಾಡುವ ಮೂಲಕ ತಿಂಗಳಿಗೆ ₹ 2-3 ಲಕ್ಷ ಗಳಿಸುತ್ತಿದ್ದಾರೆ ಎಂದು ವರದಿಯೊಂದು ತಿಳಿಸಿದೆ.
ಕತ್ತೆ ಸಾಕಣೆಯ ಧೀರೇನ್ ಸೋಲಂಕಿ ಅವರ ಪ್ರಯಾಣ ಹೇಗೆ ಪ್ರಾರಂಭವಾಯಿತು ಎಂಬುದು ರೋಚಕವಾಗಿದೆ. ಸೋಲಂಕಿ ಅವರು ಸರ್ಕಾರಿ ಉದ್ಯೋಗವನ್ನು ಹುಡುಕುತ್ತಿದ್ದೆ ಎಂದು ಹೇಳುತ್ತಾರೆ. “ನಾನು ಕೆಲವು ಖಾಸಗಿ ಉದ್ಯೋಗಗಳನ್ನು ಕಂಡುಕೊಂಡೆ, ಆದರೆ ಈ ಉದ್ಯೋಗಗಳ ಸಂಬಳವು ನನ್ನ ಕುಟುಂಬದ ವೆಚ್ಚವನ್ನು ಸರಿದೂಗಿಸುತ್ತಿರಲಿಲ್ಲ. ಈ ಸಮಯದಲ್ಲಿ, ದಕ್ಷಿಣ ಭಾರತದಲ್ಲಿ ಕತ್ತೆ ಸಾಕಣೆಯ ಬಗ್ಗೆ ನನಗೆ ತಿಳಿದಿತ್ತು. ಈ ಸಂಬಂಧ ನಾನು ಕೆಲವರನ್ನು ಭೇಟಿಯಾಗಿ ಸುಮಾರು 8 ತಿಂಗಳ ಹಿಂದೆ ನನ್ನ ಹಳ್ಳಿಯಲ್ಲಿ ಕತ್ತೆ ಫಾರ್ಮ್ ಅನ್ನು ಸ್ಥಾಪಿಸಿದೆ. ಫಾರ್ಮ್‌ ಅನ್ನು ತಾನು 20 ಕತ್ತೆಗಳು ಮತ್ತು ₹ 22 ಲಕ್ಷ ಹೂಡಿಕೆಯಿಂದ ಪ್ರಾರಂಭಿಸಿದ್ದಾಗಿ ಅವರು ಹೇಳುತ್ತಾರೆ.

ಆರಂಭ ಸವಾಲಿನದಾಗಿತ್ತು. ಗುಜರಾತ್‌ನಲ್ಲಿ ಕತ್ತೆ ಹಾಲಿಗೆ ಅಷ್ಟೇನೂ ಬೇಡಿಕೆಯಿರಲಿಲ್ಲ, ಮತ್ತು ಸೋಲಂಕಿ ಅವರು ಅದರಿಂದ ಮೊದಲ ಐದು ತಿಂಗಳಲ್ಲಿ ಏನನ್ನೂ ಗಳಿಸಲಿಲ್ಲ. ನಂತರ ಅವರು ದಕ್ಷಿಣ ಭಾರತದ ಕಂಪನಿಗಳ ಸಂಪರ್ಕ ಮಾಡಲು ಪ್ರಾರಂಭಿಸಿದರು. ಅಲ್ಲಿ ಕತ್ತೆ ಹಾಲಿಗೆ ಬೇಡಿಕೆಯಿದೆ. ಅವರು ಈಗ ಕರ್ನಾಟಕ ಮತ್ತು ಕೇರಳಕ್ಕೆ ಕತ್ತೆ ಹಾಲನ್ನು ಸರಬರಾಜು ಮಾಡುತ್ತಾರೆ ಮತ್ತು ಅವರ ಅವರಿಂದ ಖರೀದಿಸುವವರಲ್ಲಿ ತಮ್ಮ ಪ್ರಾಡಕ್ಸ್‌ ಗಳಲ್ಲಿ ಕತ್ತೆ ಹಾಲನ್ನು ಬಳಸುವ ಕಾಸ್ಮೆಟಿಕ್ ಕಂಪನಿಗಳಿವೆಯಂತೆ.
ಕತ್ತೆ ಹಾಲಿನ ದರ ಲೀಟರಿಗೆ ₹ 5,000 ರಿಂದ ₹ 7,000 ರ ನಡುವೆ ಇರುತ್ತದೆ ಎಂದು ಸೋಲಂಕಿ ಹೇಳುತ್ತಾರೆ. ಹಸುವಿನ ಹಾಲಿನ ದರ ₹ 65 ಕ್ಕೆ ಮಾರಾಟವಾಗುತ್ತವೆ ಎಂದು ಅವರು ಹೇಳುತ್ತಾರೆ. ಹಾಲು ತಾಜಾ ಇರಿಸಲು ಫ್ರೀಜರ್‌ಗಳಲ್ಲಿ ಕತ್ತೆ ಹಾಲನ್ನು ಸಂಗ್ರಹಿಸಲಾಗುತ್ತದೆ. ಹಾಲನ್ನು ಒಣಗಿಸಿ ಪುಡಿ ಮಾಡಿ ಮಾರಾಟ ಮಾಡಲಾಗುತ್ತಿದ್ದು, ಕೆಜಿಗೆ ಸುಮಾರು ಒಂದು ಲಕ್ಷದವರೆಗೆ ಬೆಲೆ ಬರುತ್ತದೆಯಂತೆ.
ಸೋಲಂಕಿ ಅವರು ಈಗ ತಮ್ಮ ಜಮೀನಿನಲ್ಲಿ 42 ಕತ್ತೆಗಳನ್ನು ಸಾಕಿದ್ದಾರೆ ಮತ್ತು ಇದುವರೆಗೆ ಸುಮಾರು 38 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿದ್ದಾರೆ. ರಾಜ್ಯ ಸರ್ಕಾರದಿಂದ ಇಲ್ಲಿಯವರೆಗೆ ಯಾವುದೇ ಸಹಾಯವನ್ನು ಪಡೆದಿಲ್ಲ ಎಂದು ಅವರು ಹೇಳುತ್ತಾರೆ, ಆದರೆ ಈ ಕ್ಷೇತ್ರಕ್ಕೂ ಗಮನ ಹರಿಸಬೇಕು ಎಂದು ಅವರು ಬಯಸುತ್ತಾರೆ.

ಪ್ರಮುಖ ಸುದ್ದಿ :-   ವೀಡಿಯೊ | ಜನವರಿಯಲ್ಲಿ ಉದ್ಘಾಟನೆಯಾದ ನಂತರ ಅಯೋಧ್ಯೆ ರಾಮಮಂದಿರದಲ್ಲಿ ಇದೇ ಮೊದಲ ಬಾರಿಗೆ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ ಮೋದಿ

ಕತ್ತೆ ಹಾಲಿನ ಪ್ರಯೋಜನಗಳು
ಪ್ರಾಚೀನ ಕಾಲದಲ್ಲಿ ಕತ್ತೆ ಹಾಲನ್ನು ವ್ಯಾಪಕವಾಗಿ ಬಳಸಲಾಗುತ್ತಿತ್ತು, ಕೆಲವು ಮಾಹಿತಿಗಳ ಪ್ರಕಾರ ಈಜಿಪ್ಟಿನ ರಾಣಿ ಕ್ಲಿಯೋಪಾತ್ರ ಅದರಲ್ಲಿ ಸ್ನಾನ ಮಾಡುತ್ತಿದ್ದಳು. ಔಷಧದ ಪಿತಾಮಹ, ಗ್ರೀಕ್ ವೈದ್ಯ ಹಿಪ್ಪೊಕ್ರೇಟ್ಸ್ ಯಕೃತ್ತಿನ ಸಮಸ್ಯೆಗಳು, ಮೂಗಿನ ರಕ್ತಸ್ರಾವಗಳು, ವಿಷಗಳು, ಸಾಂಕ್ರಾಮಿಕ ರೋಗಗಳು ಮತ್ತು ಜ್ವರಗಳಿಗೆ ಕತ್ತೆ ಹಾಲನ್ನು ಸೂಚಿಸಿದ್ದಾರೆಂದು ತಿಳಿದುಬರುತ್ತದೆ.
ಅದರ ಅನೇಕ ಪ್ರಯೋಜನಗಳ ಹೊರತಾಗಿಯೂ, ವಿಜ್ಞಾನಿಗಳು ಅದರ ಸಾಮರ್ಥ್ಯವನ್ನು ಮರುಶೋಧಿಸುವ ಮೊದಲು ಆಧುನಿಕ ಯುಗದಲ್ಲಿ ಕತ್ತೆ ಹಾಲಿನ ಮಹತ್ವ ಹಾಗೂ ಬೇಡಿಕೆಯಲ್ಲಿ ಕುಸಿತ ಕಂಡಿತು. ಆದಾಗ್ಯೂ, ಲಭ್ಯತೆ ಇನ್ನೂ ಸೀಮಿತವಾಗಿದ್ದು, ಹೀಗಾಗಿ ಇದು ಹೆಚ್ಚಿನ ಬೆಲೆಗಳಿಗೆ ಮಾರಾಟವಾಗುತ್ತಿದೆ.

ಅಮೆರಿಕದ ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್‌ನ ವರದಿಯ ಪ್ರಕಾರ, ಕತ್ತೆ ಹಾಲಿನ ಸಂಯೋಜನೆಯು ಮಾನವ ಹಾಲಿಗೆ ಹೆಚ್ಚು ಹೋಲುತ್ತದೆ ಮತ್ತು ಶಿಶುಗಳಿಗೆ, ವಿಶೇಷವಾಗಿ ಹಸುವಿನ ಹಾಲಿಗೆ ಅಲರ್ಜಿ ಇರುವವರಿಗೆ ಇದು ಉತ್ತಮ ಆಯ್ಕೆಯಾಗಿದೆ.
“ವೈದ್ಯಕೀಯ ಕ್ಷೇತ್ರದಲ್ಲಿ ಕತ್ತೆ ಹಾಲಿನ ಮತ್ತೊಂದು ಪ್ರಮುಖ ಅಂಶವೆಂದರೆ ಕರುಳಿನ ಮೈಕ್ರೋಫ್ಲೋರಾವನ್ನು ನಿಯಂತ್ರಿಸುವ ಸಾಮರ್ಥ್ಯ” ಎಂದು ವರದಿ ಹೇಳುತ್ತದೆ, ಉತ್ತಮ ಕರುಳಿನ ಆರೋಗ್ಯವನ್ನು ಖಾತ್ರಿಪಡಿಸುವಲ್ಲಿ ಅದರ ಪ್ರಯೋಜನಗಳನ್ನು ವಿವರಿಸುತ್ತದೆ. ರೋಗನಿರೋಧಕ ಶಕ್ತಿ ಮತ್ತು ಮಧುಮೇಹ ವಿರೋಧಿ ಗುಣಗಳನ್ನು ಹೆಚ್ಚಿಸುವಲ್ಲಿ ಅದರ ಪ್ರಯೋಜನಗಳನ್ನು ಸೂಚಿಸುವ ಅಧ್ಯಯನಗಳೂ ಇವೆ. ಕತ್ತೆ ಹಾಲು ಹೆಚ್ಚಿನ ಶೆಲ್ಫ್ ಜೀವಿತಾವಧಿಯನ್ನು ಹೊಂದಿದೆ ಎಂದು ತಿಳಿದುಬಂದಿದೆ ಏಕೆಂದರೆ ಇದು ಹಾಲಿನ ಇತರ ರೂಪಗಳಲ್ಲಿ ಕಂಡುಬರುವ ಹಲವಾರು ರೋಗಕಾರಕಗಳನ್ನು ಹೊಂದಿರುವುದಿಲ್ಲ ಎಂದು ಹೇಳಲಾಗುತ್ತದೆ.

ಪ್ರಮುಖ ಸುದ್ದಿ :-   ಜಾರ್ಖಂಡ್ ಸಚಿವರ ಆಪ್ತ ಕಾರ್ಯದರ್ಶಿ ಮನೆಯಲ್ಲಿ ಕಂತೆ ಕಂತೆ ಹಣ ಪತ್ತೆ, ಹಣದ ರಾಶಿ ನೋಡಿ ಇ.ಡಿ.ಯೇ ದಂಗು

3.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement