‘ತಾರಕ್ ಮೆಹ್ತಾ’ ನಟ ಗುರುಚರಣ್ ಸಿಂಗ್ ಐದು ದಿನಗಳಿಂದ ನಾಪತ್ತೆ ; ಸಿಸಿಟಿವಿಯಲ್ಲಿ ರಸ್ತೆ ದಾಟುತ್ತಿರುವುದು ಸೆರೆ

ನವದೆಹಲಿ : ಅತ್ಯಂತ ಜನಪ್ರಿಯ ಭಾರತೀಯ ಸಿಟ್‌ಕಾಂನಲ್ಲಿ ರೋಷನ್ ಸಿಂಗ್ ಸೋಧಿ ಪಾತ್ರವನ್ನು ನಿರ್ವಹಿಸಿದ್ದ ‘ತಾರಕ್ ಮೆಹ್ತಾ ಕಾ ಊಲ್ಟಾ ಚಶ್ಮಾ’ ಖ್ಯಾತಿಯ ನಟ ಗುರುಚರಣ್ ಸಿಂಗ್ ಐದು ದಿನಗಳಿಂದ ನಾಪತ್ತೆಯಾಗಿದ್ದಾರೆ.
ಗುರುಚರಣ್ ಸಿಂಗ್ ಅವರ ತಂದೆ ನೀಡಿದ ದೂರಿನ ಆಧಾರದ ಮೇಲೆ ದೆಹಲಿ ಪೊಲೀಸರು ಇದೀಗ ಅಪಹರಣ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ನಟನ ತಂದೆ, ತಮ್ಮ ದೂರಿನಲ್ಲಿ, ತಮ್ಮ ಮಗ ಸೋಮವಾರ ದೆಹಲಿಯಿಂದ ಮುಂಬೈಗೆ ಹೊರಟರು, ಆದರೆ ಮುಂಬೈ ತಲುಪಲಿಲ್ಲ. ಅಂದಿನಿಂದ ಅವರ ಫೋನ್ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.
“ಅವರು ಮಾನಸಿಕವಾಗಿ ಸ್ಥಿರನಾಗಿದ್ದಾರೆ, ನಾವು ಅವನನ್ನು ಹುಡುಕುತ್ತಿದ್ದೆವು, ಆದರೆ ಈಗ ನಾವು ಕಾಣೆಯಾದ ದೂರು ದಾಖಲಿಸುತ್ತಿದ್ದೇವೆ” ಎಂದು ಗುರುಚರಣ್ ಅವರ ತಂದೆ ಪೊಲೀಸರಿಗೆ ತಿಳಿಸಿದ್ದಾರೆ.

ಸೋಮವಾರ ರಾತ್ರಿ ಪಾಲಂ ಪ್ರದೇಶದಲ್ಲಿ ಅಳವಡಿಸಲಾಗಿದ್ದ ಭದ್ರತಾ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯಾವಳಿಯಲ್ಲಿ 50 ವರ್ಷದ ವ್ಯಕ್ತಿ ರಸ್ತೆ ದಾಟುತ್ತಿರುವುದು ಕಂಡುಬಂದಿದೆ. “ಸೋಮವಾರ ರಾತ್ರಿ 8:30 ಕ್ಕೆ ಅವರ ವಿಮಾನ ನಿಗದಿಯಾಗಿತ್ತು. ಆದರೆ ಅವರು ರಾತ್ರಿ 9.14 ರ ಸುಮಾರಿಗೆ ಪಾಲಂನ ಟ್ರಾಫಿಕ್ ಛೇದಕದಲ್ಲಿ ಕಾಣಿಸಿಕೊಂಡರು” ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸುತ್ತಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ..| ಒಂದೇ ಮತಗಟ್ಟೆಯಲ್ಲಿ 8 ಸಲ ಮತದಾನ ಮಾಡಿದ ಯುವಕ ; ವೀಡಿಯೋ ವೈರಲ್ ಆದ ನಂತರ ಬಂಧನ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement