ಬೆಂಗಳೂರಿನ ಹಲವೆಡೆ ಜೋರಾಗಿ ಮಳೆ

ಬೆಂಗಳೂರು: ಬಿಸಿಲಿನಿಂದ ಕಂಗೆಟ್ಟ ರಾಜಧಾನಿ ಬೆಂಗಳೂರು ಜನತೆಗೆ ಮಳೆರಾಯ ಬುಧವಾರ ಕೊಂಚ ತಂಪೆರೆದಿದ್ದಾನೆ. ನಗರದ ಮೆಜೆಸ್ಟಿಕ್ ಸೇರಿದಂತೆ ಹಲವೆಡೆ ಮಳೆಯಾಗಿದ್ದು ಬಿಸಿಲಿನಿಂದ ಬೇಸತ್ತಿದ್ದ ಜನ ಕೊಂಚ ರಿಲೀಫ್ ಆಗಿದ್ದಾರೆ. ಸುಮಾರು 5 ತಿಂಗಳ ಬಳಿಕ ಬೆಂಗಳೂರಿನಲ್ಲಿ ಜೋರಾಗಿ ಮಳೆಯಾಗಿದೆ.
ಗುರುವಾರ ಸಂಜೆ 6 ಗಂಟೆ ಸುಮಾರಿಗೆ ಆರಂಭವಾದ ಮಳೆಯು ತುಸು ಕಾಲ ಜೋರಾಗಿ ಸುರಿಯಿತು. ಆ ಬಳಿಕ ಹಗುರವಾಗಿ ಸುರಿಯುತ್ತಿದೆ.
ಬೆಂಗಳೂರು ನಗರದ ಕುಮಾರಸ್ವಾಮಿ ಲೇಔಟ್, ವಿಜಯನಗರ, ಟಿನ್ ಫ್ಯಾಕ್ಟರಿ, ಕೆ.ಆರ್‌ಪುರಂ, ವೈಟ್ ಫೀಲ್ಡ್, ವಸಂತಪುರ, ಕಲ್ಯಾಣ ನಗರ, ಬಾನಸವಾಡಿ, ಕೂಡ್ಲು ಗೇಟ್‌, ಯಲಹಂಕ, ನಗರದ ಮಧ್ಯಭಾಗವಾದ ಹಲಸೂರು, ಎಂಜಿ ರಸ್ತೆ, ಕಬ್ಬನ್‌ಪಾರ್ಕ್‌, ಗಾಂಧಿ ನಗರ, ಮೆಜೆಸ್ಟಿಕ್‌ ಸುತ್ತಮುತ್ತ, ಮೈಸೂರು ರಸ್ತೆ, ಹೆಬ್ಬಾಳ, ಬಾಪೂಜಿ ನಗರ, ಬನಶಂಕರಿ, ಜೆಪಿ ನಗರ, ಲಾಲ್‌ಬಾಗ್‌ ಸುತ್ತಮುತ್ತ, ವಿಜಯನಗರ, ರಾಜಾಜಿನಗರ, ಯಶವಂತಪುರ ಸೇರಿದಂತೆ ಹಲವೆಡೆ ಗುಡುಗು, ಗಾಳಿ ಸಹಿತ ಮಳೆಯಾಗಿದೆ.
ಅಲ್ಲದೆ, ಮೈಸೂರು, ಮಂಡ್ಯ, ರಾಮನಗರ, ಬೆಂಗಳೂರು ನಗರ, ಕೋಲಾರ ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದ್ದು, ಈ ಭಾಗಗಳಲ್ಲಿ 30-40 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಪ್ರಮುಖ ಸುದ್ದಿ :-   ಸವದತ್ತಿ : ಜಾತ್ರೆಯಲ್ಲಿ ಪ್ರಸಾದ ಸೇವಿಸಿದ 46 ಮಂದಿ ಅಸ್ವಸ್ಥ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement