ಚುನಾವಣಾ ಅಫಿಡವಿಟ್‌ನಲ್ಲಿ ಆಸ್ತಿ ಘೋಷಿಸಿಕೊಂಡ ಪ್ರಧಾನಿ ಮೋದಿ ; ಕಾರಿಲ್ಲ, ಮನೆಯಿಲ್ಲ : ಮೋದಿ ಬಳಿ ಇರುವ ಹಣ ಎಷ್ಟು ಗೊತ್ತೆ..?

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಒಟ್ಟು ₹ 3 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ, ಆದರೆ ಅವರು ಯಾವುದೇ ಜಮೀನು, ಮನೆ ಅಥವಾ ಕಾರು ಹೊಂದಿಲ್ಲ ಎಂದು ಅವರು ತಮ್ಮ ಚುನಾವಣಾ ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.
ವಾರಾಣಸಿ ಕ್ಷೇತ್ರದಿಂದ ಪ್ರಧಾನಿ ಮಂಗಳವಾರ ನಾಮಪತ್ರ ಸಲ್ಲಿಸಿದರು. ಅವರು ತಮ್ಮ ಚುನಾವಣಾ ಅಫಿಡವಿಟ್‌ನಲ್ಲಿ, ಒಟ್ಟು ₹ 3.02 ಕೋಟಿ ಮೌಲ್ಯದ ಆಸ್ತಿಯನ್ನು ಘೋಷಿಸಿದ್ದಾರೆ, ಅದರಲ್ಲಿ ಬಹುಪಾಲು ₹ 2.86 ಕೋಟಿ ಮೌಲ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸ್ಥಿರ ಠೇವಣಿ ಮಾಡಲಾಗಿದೆ. ಅವರ ಕೈಯಲ್ಲಿ ಒಟ್ಟು ₹ 52,920 ನಗದು ಮತ್ತು ಗಾಂಧಿನಗರ ಮತ್ತು ವಾರಾಣಸಿಯ ಎರಡು ಬ್ಯಾಂಕ್ ಖಾತೆಗಳಲ್ಲಿ ₹ 80,304 ಇದೆ.

ಪ್ರಧಾನಿ ಅವರು ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರಗಳಲ್ಲಿ ₹ 9.12 ಲಕ್ಷ ಹೂಡಿಕೆ ಮಾಡಿದ್ದಾರೆ ಮತ್ತು ₹ 2.68 ಲಕ್ಷ ಮೌಲ್ಯದ ನಾಲ್ಕು ಚಿನ್ನದ ಉಂಗುರಗಳನ್ನು ಹೊಂದಿದ್ದಾರೆ. ಅವರ ಆದಾಯ 2018-19ರಲ್ಲಿ ₹ 11.14 ಲಕ್ಷದಿಂದ 2022-23ರಲ್ಲಿ ₹ 23.56 ಲಕ್ಷಕ್ಕೆ ಏರಿದೆ.
2023-24ನೇ ಹಣಕಾಸು ವರ್ಷಕ್ಕೆ ಆದಾಯ ತೆರಿಗೆಯಾಗಿ 3.33 ಲಕ್ಷ ರೂಪಾಯಿ ಕಡಿತಗೊಳಿಸಲಾಗಿದೆ ಎಂದು ಮೋದಿ ಬಹಿರಂಗಪಡಿಸಿದ್ದಾರೆ.
ಮೋದಿ ಎರಡು ಮೂಲಗಳಿಂದ ಆದಾಯವನ್ನು ಘೋಷಿಸಿದ್ದಾರೆ. ಪ್ರಧಾನ ಮಂತ್ರಿ ಕಚೇರಿಯಿಂದ ಸಂಬಳ ಮತ್ತು ಬಡ್ಡಿಯಿಂದ ಬರುವ ಆದಾಯ ಘೋಷಿಸಿದ್ದಾರೆ. 2022-23ರ ಹಣಕಾಸು ವರ್ಷದಲ್ಲಿ ಅವರ ಆದಾಯ ತೆರಿಗೆ ರಿಟರ್ನ್ (ITR) ಪ್ರಕಾರ ಅವರ ಒಟ್ಟು ಆದಾಯ 23.56 ಲಕ್ಷ ರೂ. ಆಗಿದೆ.

ಪ್ರಮುಖ ಸುದ್ದಿ :-   ಕ್ರಿಕೆಟರ್‌ ಯುಜ್ವೇಂದ್ರ ಚಾಹಲ್- ಧನಶ್ರೀ ವರ್ಮಾ ವಿಚ್ಛೇದನ ಈಗ ಅಧಿಕೃತ

ಶಿಕ್ಷಣ ವಿಭಾಗದಲ್ಲಿ, 1978ರಲ್ಲಿ ದೆಹಲಿ ವಿಶ್ವವಿದ್ಯಾನಿಲಯದಿಂದ ಬಿ.ಎ. ಪದವಿ ಮತ್ತು 1983ರಲ್ಲಿ ಗುಜರಾತ್ ವಿಶ್ವವಿದ್ಯಾನಿಲಯದಿಂದ ಎಂ.ಎ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರುವುದಾಗಿ ಪ್ರಧಾನಿ ಹೇಳಿದ್ದಾರೆ. ಅವರ ವಿರುದ್ಧ ಯಾವುದೇ ಕ್ರಿಮಿನಲ್ ಪ್ರಕರಣಗಳು ಬಾಕಿ ಉಳಿದಿಲ್ಲ ಎಂದು ಹೇಳಿದ್ದಾರೆ.
ವಾರಾಣಸಿ ಕ್ಷೇತ್ರದಿಂದ ಮೂರನೇ ಬಾರಿಗೆ ಸಂಸದರಾಗಿ ಆಯ್ಕೆಯಾಗಲು ಬಯಸುತ್ತಿರುವ ಇಂದು ಮಂಗಳವಾರ ನಾಮಪತ್ರ ಸಲ್ಲಿಸಿದ್ದಾರೆ.
ವಾರಣಸಿಯಲ್ಲಿ ಜೂನ್ 1 ರಂದು ಏಳನೇ ಹಂತದ ಲೋಕಸಭಾ ಚುನಾವಣೆಯಲ್ಲಿ ಮತದಾನ ನಡೆಯಲಿದೆ.

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement