ವೀಡಿಯೊ..| ಬೀದರ : ಬಸ್‌ ಸೀಟಿಗಾಗಿ ಬಟ್ಟೆ ಎಳೆದಾಡಿ ಚಪ್ಪಲಿಯಿಂದ ಹೊಡೆದಾಡಿಕೊಂಡ ಮಹಿಳೆಯರು…!

ಬಸ್ ಸೀಟಿಗಾಗಿ ಇಬ್ಬರು ಮಹಿಳೆಯರು ಪರಸ್ಪರ ಚಪ್ಪಲಿಯಿಂದ ಹೊಡೆದಾಡಿಕೊಂಡ ಘಟನೆ ಬೀದರ ಜಿಲ್ಲೆಯಲ್ಲಿ ನಡೆದಿದೆ ಎಂದು ವರದಿಯಾಗಿದೆ. ಚಪ್ಪಲಿಯಿಂದ ಹೊಡೆದಾಡಿಕೊಂಡ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.
ಬೀದರಿನಿಂದ ಕಲಬುರಗಿಗೆ ಹೋಗುವ ಬಸ್ಸಿನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಸರ್ಕಾರದ ಶಕ್ತಿ ಯೋಜನೆ ಅಡಿ ಉಚಿತ ಟಿಕೆಟ್ ಪಡೆದಿದ್ದ ಇಬ್ಬರು ಮಹಿಳೆಯರು ಪರಸ್ಪರ ಕಿತ್ತಾಡಿಕೊಂಡಿದ್ದಾರೆ. ಬಸ್‌ ಸೀಟಿನ ಸಂಬಂಧ ಜಗಳವಾಗಿ ಅದು ವಿಕೋಪಕ್ಕೆ ಹೋಗಿ ಚಪ್ಪಲಿಯಲ್ಲಿ ಹೊಡೆದಾಡಿಕೊಂಡಿದ್ದಾರೆ ಎನ್ನಲಾಗಿದೆ.

ತಾನು ಕರ್ಚೀಫ್ ಹಾಕಿದ್ದ ಸೀಟಿನಲ್ಲಿ ಮತ್ತೊಬ್ಬಳು ಬಂದು ಕುಳಿತಿದ್ದಕ್ಕೆ ಸಿಟ್ಟಾದ ಮಹಿಳೆ ಆಕೆಗೆ ಏಳಲು ಹೇಳಿದ್ದಾಳೆ. ಆದರೆ ಕೂತಿದ್ದ ಮಹಿಳೆ ಇದಕ್ಕೆ ಒಪ್ಪಿಲ್ಲ. ಇದರಿಂದ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದಿದೆ. ನಂತರ ಅವಾಚ್ಯ ಶಬ್ದಗಳು ಬಾಯಿಂದ ಬಂದಿವೆ, ಪರಸ್ಪರರ ಬಟ್ಟೆ ಹಿಡಿದು ಎಳೆದಾಡಿಕೊಂಡಿದ್ದಾರೆ. ನಂತರ ಚಪ್ಪಲಿಯಲ್ಲಿ ಬಡಿದಾಡಿಕೊಂಡಿದ್ದಾರೆ. ಕೂದಲು ಹಿಡಿದುಕೊಂಡು ಎಳೆದಾಡಿದ್ದಾರೆ. ಕೂಗಾಡುವುದು, ಅರಚಾಡುವುದು ವೀಡಿಯೊ ಕ್ಲಿಪ್‌ನಲ್ಲಿ ಕೇಳಿಸುತ್ತದೆ.

https://twitter.com/i/status/1790626505535705149

ಜೊತೆಗಿದ್ದ ಹಲವರು ಇವರ ಜಗಳ ಬಿಡಿಸಲು ಯತ್ನಿಸಿದರೂ ಕೆಲ ಹೊತ್ತು ಅದು ಮುಂದುವರಿದಿತ್ತು. ನಂತರ ಪ್ರಯಾಣಿಕರು ಮಧ್ಯ ಪ್ರವೇಶಿಸಿ ಜಗಳ ಬಿಡಿಸಿ ಪರಿಸ್ಥಿತಿ‌ ಶಾಂತಗೊಳಿಸಿದ್ದಾರೆ.
ಈ ಘಟನೆಯನ್ನು ಪ್ರಯಾಣಿಕರೊಬ್ಬರು ವೀಡಿಯೊ ಮಾಡಿಕೊಂಡಿದ್ದು, ಸೋಶಿಯಲ್‌ ಮೀಡಿಯಾದಲ್ಲಿ ಅಪ್‌ ಲೋಡ್‌ ಮಾಡಿದ್ದಾರೆ. ಸರ್ಕಾರಿ ಬಸ್ಸುಗಳಲ್ಲಿ ಮಹಿಳೆಯರ ಉಚಿತ ಪ್ರಯಾಣದ ಶಕ್ತಿ ಯೋಜನೆಯ ಜಾರಿಯ ಬಳಿಕ ಇಂಥ ಹಲವಾರು ಹೊಡೆದಾಟಗಳು, ಬಡುದಾಟಗಳು ವರದಿಯಾಗುತ್ತಿವೆ.

ಪ್ರಮುಖ ಸುದ್ದಿ :-   ಪ್ರವೀಣ ನೆಟ್ಟಾರು ಹತ್ಯೆ ಪ್ರಕರಣ ; 16 ಕಡೆಗಳಲ್ಲಿ ಎನ್ಐಎ ದಾಳಿ

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement