ವೀಡಿಯೊ..| ರಾಜಸ್ಥಾನದಲ್ಲಿ ತಾಪಮಾನ ಈಗ ನಿಗಿನಿಗಿ ಕೆಂಡ : ಬಿಕಾನೇರ್‌ ಮರಳಿನಲ್ಲಿ ಹಪ್ಪಳ ಹುರಿದ ಬಿಎಸ್​ಎಫ್​ ಯೋಧ…!

ಉತ್ತರ ಭಾರತದ ಹಲವಾರು ಪ್ರದೇಶಗಳಲ್ಲಿ ಗರಿಷ್ಠ ತಾಪಮಾನವು 47 ಡಿಗ್ರಿ ಸೆಲ್ಸಿಯಸ್ ದಾಟಿ ಶಾಖದ ಅಲೆಗೆ ಕಾರಣವಾಗುತ್ತಿದ್ದು, ದೆಹಲಿ, ಪಂಜಾಬ್, ಉತ್ತರ ಪ್ರದೇಶ, ಹರಿಯಾಣ ಮತ್ತು ರಾಜಸ್ಥಾನದ ಕೆಲವು ಭಾಗಗಳ ವಾಯುವ್ಯ ಬಯಲು ಪ್ರದೇಶಗಳಿಗೆ ಬಿಸಿಗಾಳಿ ಬೀಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ‘ರೆಡ್ ಅಲರ್ಟ್’ ನೀಡಿದೆ. ಹವಾಮಾನ ಇಲಾಖೆಯು ಮೇ 25 ರವರೆಗೆ ಈ ರಾಜ್ಯಗಳಲ್ಲಿ ಬಿಸಿಗಾಳಿಯಿಂದ ತೀವ್ರತರವಾದ ಶಾಖದ ಅಲೆ ಪರಿಸ್ಥಿತಿಗೆ ಕಾರಣವಾಗಬಹುದು ಎಂದು ಮುನ್ಸೂಚನೆ ನೀಡಿದೆ.
ಈ ನಡುವೆ ಗಡಿ ಭದ್ರತಾ ಪಡೆ ಶೇರ್ ಮಾಡಿರುವ ವೀಡಿಯೊವೊದು ವೈರಲ್ ಆಗಿದೆ. ವೀಡಿಯೋದಲ್ಲಿ ರಾಜಸ್ಥಾನದ ಬಿಕಾನೇರ್‌ನಲ್ಲಿ ಬಿಎಸ್‌ಎಫ್ ಜವಾನ್ ಬಿಸಿಯಾದ ಮರಳಿನಲ್ಲಿ ‘ಹಪ್ಪಳ’ ಹುರಿಯುತ್ತಿರುವುದನ್ನು ಕಾಣಬಹುದು, ಈ ಪ್ರದೇಶದಲ್ಲಿ ತಾಪಮಾನ ತೀವ್ರವಾಗಿ ಹೆಚ್ಚಳವಾಗಿದ್ದು, ಸುಮಾರು 47 ° ಡಿಗ್ರಿ ಸೆಲ್ಸಿಯಸ್‌ ತಾಪಮಾನವಿದ್ದು, ಸುಡುವ ಶಾಖವಿದೆ.

ಬಿಕಾನೇರ್ ತೀವ್ರ ಶಾಖದ ಅಲೆಯಿಂದ ತತ್ತರಿಸುತ್ತಿದೆ ಮತ್ತು ತಾಪಮಾನವು 45 ಡಿಗ್ರಿ ಸೆಲ್ಸಿಯಸ್ ದಾಟಿದೆ. ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಪ್ರಕಾರ, ಬುಧವಾರದಂದು ಗರಿಷ್ಠ ತಾಪಮಾನ 46.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ವೀಡಿಯೊದಲ್ಲಿ ಬಿಎಸ್‌ಎಫ್ ಜವಾನನೊಬ್ಬ ಬಿಸಿಲಿನಿಂದ ರಕ್ಷಿಸಿಕೊಳ್ಳಲು ಟೋಪಿ, ಸನ್‌ಗ್ಲಾಸ್ ಮತ್ತು ಮುಖಕ್ಕೆ ಬಟ್ಟೆ ಮುಚ್ಚಿಕೊಂಡು ಬಿಸಿಯಾದ ಮರಳಿನಲ್ಲಿ ‘ಹಪ್ಪಳ’ ಹುರಿಯುತ್ತಿರುವುದನ್ನು(ಸುಡುತ್ತಿರುವುದು) ಕಾಣಬಹುದು. ಆತ ‘ಹಪ್ಪಳ ತೆಗೆದುಕೊಂಡು ಅದನ್ನು ಬಿಸಿ ಮರಳಿನಲ್ಲಿ ಹಾಕಿ ಸುಡುತ್ತಿದ್ದಾನೆ. ಕೆಲವು ಸೆಕೆಂಡುಗಳ ನಂತರ, ಆತ ಅದನ್ನು ತೆಗೆದುಕೊಂಡು ಅದನ್ನು ಚೂರು ಚೂರು ಮಾಡುವ ಮೂಲಕ ಬಿಸಿಯಾದ ಮರಳಿನಲ್ಲಿ ಹಪ್ಪಳ ಹೇಗೆ ಸುಟ್ಟಿದೆ ಎಂಬುದನ್ನು ತೋರಿಸುತ್ತಾನೆ.

ವಿವಿಧ X ಖಾತೆಗಳು ವೈರಲ್ ವೀಡಿಯೊವನ್ನು ಪೋಸ್ಟ್ ಮಾಡಿವೆ. ಒಬ್ಬರು ವೀಡಿಯೊವನ್ನು ಹಂಚಿಕೊಂಡಿದ್ದಾರೆ ಮತ್ತು ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ: “ರಾಜಸ್ಥಾನದ ಬಿಕಾನೇರ್‌ನಲ್ಲಿ ತಾಪಮಾನವು 47 ° C ಗೆ ಏರುತ್ತದೆ. ಅಂತಾರಾಷ್ಟ್ರೀಯ ಗಡಿಯಲ್ಲಿನ ಮರಳು ಕುಲುಮೆಯಂತಾಗಿದೆ ಎಂದು ಭಾಸವಾಗುತ್ತದೆ, ಆದರೆ ತಾಯಿನಾಡಿಗೆ ಸೇವೆ ಸಲ್ಲಿಸುತ್ತಿರುವ ನಮ್ಮ ಸೈನಿಕರು ಬಲವಾಗಿ ನಿಂತಿದ್ದಾರೆ ಎಂದು ಅವರು ಅದರಲ್ಲಿ ಬರೆದಿದ್ದಾರೆ.
ವೀಡಿಯೊಗೆ ಪ್ರತಿಕ್ರಿಯಿಸಿದ ಬಳಕೆದಾರರು, “ರಾಜಸ್ಥಾನದ ಪಶ್ಚಿಮ ವಲಯದ ಗಂಗಾನಗರ, ಬಿಕಾನೇರ್, ಜೈಸಲ್ಮೇರ್, ಬಾರ್ಮರ್ ಬಿಎಸ್ಎಫ್‌ ಕಾರ್ಯನಿರ್ವಹಿಸುವ ಅತ್ಯಂತ ಬಿಸಿಯಾದ ಮತ್ತು ಕಠಿಣವಾದ ವಲಯವಾಗಿದೆ ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ನೀಟ್ ಅಣಕು ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದಿದ್ದಕ್ಕೆ 17 ವರ್ಷದ ಮಗಳನ್ನು ಹೊಡೆದು ಕೊಂದ ಶಿಕ್ಷಕ...!

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement