ಪುಣೆ ಪೋರ್ಷೆ ಕಾರು ಅಪಘಾತ ಪ್ರಕರಣ : ಅಪ್ರಾಪ್ತ ಆರೋಪಿಯ ಜಾಮೀನು ರದ್ದುಗೊಳಿಸಿದ ಬಾಲಾಪರಾಧಿ ನ್ಯಾಯಾಲಯ

ಪುಣೆ: ಇಲ್ಲಿ ಭಾನುವಾರ ಮದ್ಯದ ಅಮಲಿನಲ್ಲಿ 17 ವರ್ಷದ ಅಪ್ರಾಪ್ತ ವೇಗವಾಗಿ ಚಲಾಯಿಸುತ್ತಿದ್ದ ಐಷಾರಾಮಿ ಪೋರ್ಷೆ ಕಾರು (Porsche Car Accident) ಬೈಕ್​ಗೆ ಡಿಕ್ಕಿ ಹೊಡೆದು ಇಬ್ಬರು ಸಾಫ್ಟ್​ವೇರ್ ಇಂಜಿನಿಯರ್​ಗಳು ಸಾವಿಗೀಡಾದ ಪ್ರಕರಣದಲ್ಲಿ ಅಪ್ರಾಪ್ತ ಬಾಲಕನಿಗೆ ಜಾಮೀನು ನೀಡಿದ ಮೂರು ದಿನಗಳ ನಂತರ ಬಾಲ ನ್ಯಾಯಮಂಡಳಿಯು ಅದನ್ನು ರದ್ದುಗೊಳಿಸಿದೆ. ಹಾಗೂ ತನ್ನ ಆದೇಶವನ್ನು ಮಾರ್ಪಡಿಸಿ ಜೂನ್ 5 ರವರೆಗೆ ರಿಮಾಂಡ್ ಹೋಮ್‌ಗೆ ಕಳುಹಿಸಿದೆ.
ಬಾಲಾಪರಾಧಿಯನ್ನು ವಯಸ್ಕನಂತೆ ವಿಚಾರಣೆಗೆ ಒಳಪಡಿಸಬೇಕು ಮತ್ತು ರಿಮಾಂಡ್ ಹೋಮ್‌ಗೆ ಕಳುಹಿಸಲು ನಾವು ಬಾಲನ್ಯಾಯ ಮಂಡಳಿಯ ಮುಂದೆ ಪರಿಶೀಲನಾ ಅರ್ಜಿಯನ್ನು ಸಲ್ಲಿಸಿದ್ದೇವೆ ಎಂದು ಪುಣೆ ಪೊಲೀಸ್ ಕಮಿಷನರ್ ಅಮಿತೇಶಕುಮಾರ ತಿಳಿಸಿದ್ದರು.

“ಬಾಲಾಪರಾಧಿ ನ್ಯಾಯ ಮಂಡಳಿ ಆಪರೇಟಿವ್ ಆದೇಶವನ್ನು ನಮಗೆ ತಿಳಿಸಿದೆ. ಆರೋಪಿಯನ್ನು ಜೂನ್ 5ರ ವರೆಗೆ 15 ದಿನಗಳವರೆಗೆ ರಿಮಾಂಡ್ ಹೋಮ್‌ಗೆ ಕಳುಹಿಸಲಾಗಿದೆ. ವಯಸ್ಕನಾಗಿ ಆತನನ್ನು ವಿಚಾರಣೆಗೆ ಒಳಪಡಿಸುವ ಆದೇಶವನ್ನು ನಿರೀಕ್ಷಿಸಲಾಗುತ್ತಿದೆ” ಎಂದು ಉನ್ನತ ಪೋಲೀಸ್ ಅಧಿಕಾರಿ ಹೇಳಿದ್ದಾರೆ. ಮುಂದಿನ ತನಿಖೆಯ ನಂತರ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.
ಮದ್ಯ ಸೇವಿಸಿ ವಾಹನ ಚಲಾಯಿಸಿದ್ದಕ್ಕಾಗಿ ಸೆಕ್ಷನ್ 185ರ ಅಡಿಯಲ್ಲಿ ಹೊಸ ಪ್ರಕರಣವನ್ನು ದಾಖಲಿಸಿದ ನಂತರ ಹದಿಹರೆಯದವರನ್ನು ಬಾಲಾಪರಾಧಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

ಪ್ರಮುಖ ಸುದ್ದಿ :-   ಮಾದಕ ವಸ್ತು ಪ್ರಕರಣ : ನಟ ಶ್ರೀಕಾಂತ ಬಂಧನ

ಅಪಘಾತದಲ್ಲಿ ಮೃತರಾದವರು 24 ವರ್ಷದವರಾಗಿದ್ದು, ಇಬ್ಬರು ತಮ್ಮ ಸ್ನೇಹಿತರ ಜೊತೆ ಊಟಕ್ಕೆ ಹೋಗಿ ಹಿಂದಿರುಗುತ್ತಿದ್ದಾಗ ವೇಗವಾಗಿ ಬಂದ ಪೋರ್ಷೆ ಕಾರು ಅವರಿಗೆ ಡಿಕ್ಕಿ ಹೊಡೆದಿತ್ತು. ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದರು.
ಭಾನುವಾರ, ಮಂಡಳಿಯು ಅಪಘಾತವಾದ 15 ಗಂಟೆಗಳ ಒಳಗೆ 17 ವರ್ಷದ ಯುವಕನಿಗೆ ಜಾಮೀನು ನೀಡಿತ್ತು ಮತ್ತು ರಸ್ತೆ ಅಪಘಾತಗಳ ಬಗ್ಗೆ ಪ್ರಬಂಧ ಬರೆಯುವಂತೆ ಆತನಿಗೆ ಸೂಚಿಸಿತ್ತು, ವೈಯಕ್ತಿಕ ಬಾಂಡ್, ಜಾಮೀನು ಮತ್ತು ರಸ್ತೆ ಸುರಕ್ಷತೆಯ ಕುರಿತು 300 ಪದಗಳ ಪ್ರಬಂಧದ ಜತೆ, ಪುಣೆಯ ಪ್ರಮುಖ ಬಿಲ್ಡರ್‌ನ ಮಗನಾದ ಹುಡುಗನನ್ನು ಪ್ರಾದೇಶಿಕ ಸಾರಿಗೆ ಕಚೇರಿಗೆ ಭೇಟಿ ನೀಡಿ, ಎಲ್ಲಾ ನಿಯಮಗಳು ಮತ್ತು ನಿಬಂಧನೆಗಳನ್ನು ಅಧ್ಯಯನ ಮಾಡಬೇಕು ಮತ್ತು ಅದನ್ನು ಪ್ರಸ್ತುತಿ ಪಡಿಸಬೇಕು. ಆಲ್ಕೊಹಾಲ್ ಸೇವನೆಗಾಗಿ ಡಿ-ಅಡಿಕ್ಷನ್ ಕೌನ್ಸೆಲಿಂಗ್‌ಗೆ ಒಳಗಾಗಲು ಮತ್ತು ಮನೋವೈದ್ಯರನ್ನು ಸಂಪರ್ಕಿಸಲು ಸೂಚಿಸಿತ್ತು. ಇದು ರಾಷ್ಟ್ರವ್ಯಾಪಿ ಆಕ್ರೋಶಕ್ಕೆ ಕಾರಣವಾಯಿತು.

ಬೆಳಗಿನ ಜಾವ 2:15ರ ಸುಮಾರಿಗೆ ಈ ಅವಘಡ ಸಂಭವಿಸಿದ್ದು, 12ನೇ ತರಗತಿ ಫಲಿತಾಂಶದ ಸಂಭ್ರಮಾಚರಣೆಗಾಗಿ ಪುಣೆಯ ಎರಡು ಪಬ್‌ಗಳಲ್ಲಿ ತನ್ನ ಸ್ನೇಹಿತರೊಂದಿಗೆ ಮದ್ಯ ಸೇವಿಸಿದ ನಂತರ ವಾಹನ ಚಲಾಯಿಸಿದ್ದ.
ಅಪ್ರಾಪ್ತನಿಗೆ 17 ವರ್ಷ ಮತ್ತು 8 ತಿಂಗಳ ವಯಸ್ಸಾಗಿದೆ. ಇದು ವಾಹನ ಚಲಾಯಿಸಲು ಕಾನೂನುಬದ್ಧ ವಯಸ್ಸಿಗಿಂತ ನಾಲ್ಕು ತಿಂಗಳು ಕಡಿಮೆಯಾಗಿದೆ. ಅಲ್ಲದೆ, ಮಹಾರಾಷ್ಟ್ರದಲ್ಲಿ ಕಾನೂನುಬದ್ಧ ಕುಡಿಯುವ ವಯಸ್ಸು 25 ವರ್ಷಗಳಾಗಿದೆ.
ಅಪಘಾತ ಮಾಡಿದ ಬಾಲಕ ಆ ದಿನ ಪಬ್​ನಲ್ಲಿ 90 ನಿಮಿಷದಲ್ಲಿ 48,000 ರೂ. ಖರ್ಚು ಮಾಡಿದ್ದ. ಆತನ ತಂದೆ ವಿಶಾಲ ಅಗರ್​ವಾಲ್ ತನ್ನ ಮಗನಿಗೆ 2.5 ಕೋಟಿ ರೂ. ಮೌಲ್ಯದ ಪೋರ್ಷೆ ಕಾರನ್ನು ಉಡುಗೊರೆಯಾಗಿ ನೀಡಿದ್ದ. ಆದರೆ, ಅವರು 1,758 ನೋಂದಣಿ ಶುಲ್ಕವನ್ನು ಪಾವತಿಸದೆ ಬಿಟ್ಟಿದ್ದಾರೆ.ಇದರ ನಡುವೆ ಆ ಬಾಲಾಪರಾಧಿಯ ತಂದೆ ವಿಶಾಲ ಅಗರ್ವಾಲ್ ಅವರನ್ನು ಬುಧವಾರ ಪುಣೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಲಯ ಅವರನ್ನು ಮೇ 24ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿದೆ.

ಪ್ರಮುಖ ಸುದ್ದಿ :-   ವೀಡಿಯೊಗಳು..| ಇರಾನಿನ 6 ವಾಯುನೆಲೆಗಳ ಮೇಲೆ ಇಸ್ರೇಲ್‌ ದಾಳಿ ; 15 ವಿಮಾನಗಳು ನಾಶ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement