ಐಪಿಎಲ್(IPL)ನಲ್ಲಿ ಗುಜರಾತ್ ಟೈಟಾನ್ಸ್ ತಂಡದ ನಾಯಕತ್ವ ತೊರೆದು ಮುಂಬೈ ಇಂಡಿಯನ್ಸ್ ತಂಡಕ್ಕೆ ಬಂದು ನಾಯಕರಾದ ಹಾರ್ದಿಕ್ ಪಾಂಡ್ಯ ಅವರಿಗೆ ಒಂದರ ಮೇಲೊಂದು ಹಿನ್ನಡೆಯಾಗುತ್ತಿದೆ. ಮುಂಬೈ ಇಂಡಿಯನ್ಸ್ ತಂಡ ಸೇರಿದ ನಂತರ ಅವರು ಮೈದಾನದಲ್ಲೇ ಅಭಿಮಾನಿಗಳ ಕೋಪಕ್ಕೆ ಗುರಿಯಾಗಿದ್ದರು. ಪಾಂಡ್ಯ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ಹೀನಾಯ ಪ್ರದರ್ಶನ ಕಂಡಿತು. ಐಪಿಎಲ್ 2024 ರ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿಯಿತು. ಅಲ್ಲದೆ, ಐಪಿಎಲ್ನಲ್ಲಿ ಅವರ ಪ್ರದರ್ಶನ ಕೂಡ ಕಳಪೆಯಾಗಿತ್ತು.
ಒಂದರ ಮೇಲೊಂದು ಆಘಾತ ಎದುರಿಸುತ್ತಿರುವ ಪಾಂಡ್ಯ ಅವರ ದಾಂಪತ್ಯದಲ್ಲಿ ಬಿರುಕ ಮೂಡಿದೆ ಎಂಬ ಬಗ್ಗೆ ಊಹಾಪೋಹಗಳು ಉಂಟಾಗಿವೆ. ಸಾಮಾಜಿಕ ಮಾಧ್ಯಮದಲ್ಲಿನ ಒಂದು ಪೋಸ್ಟ್ ಈ ಊಹಾಪೋಹಗಳಿಗೆ ಕಾರಣವಾಗಿದೆ.
ಹಾರ್ದಿಕ್ ಪಾಂಡ್ಯ ಪತ್ನಿ ನತಾಶಾ ಸ್ಟಾಂಕೋವಿಕ್ ಅವರು ಇನ್ಸ್ಟಾಗ್ರಾಂ ಖಾತೆಯಲ್ಲಿ ತಮ್ಮ ಹೆಸರಿನ ಮುಂದೆ ಬಳಸುತ್ತಿದ್ದ ‘ಪಾಂಡ್ಯ’ ಉಪನಾಮವನ್ನು ತೆಗೆದುಹಾಕಿರುವುದು ಹಾಗೂ ಇಬ್ಬರೂ ಒಟ್ಟಿಗೆ ಇರುವ ಕೆಲವು ಚಿತ್ರಗಳನ್ನು ಅಳಿಸಿಹಾಕಿರುವುದು ಪಾಂಡ್ಯ ದಾಂಪತ್ಯದಲ್ಲಿ ಬಿರುಕು ಉಂಟಾಗಿರುವ ಬಗ್ಗೆ ಅನುಮಾನ ಹೆಚ್ಚಲು ಕಾರಣವಾಗಿದೆ.
“ನತಾಶಾ ಮತ್ತು ಹಾರ್ದಿಕ್ ಬೇರ್ಪಟ್ಟರೆ?” ಎಂಬ ಶೀರ್ಷಿಕೆಯ ರೆಡ್ಡಿಟ್ ಪೋಸ್ಟ್ ಮಾಡಿದ ನಂತರ ಈ ಊಹಾಪೋಹ ಇನ್ನಷ್ಟು ಜೋರಾಗಿದೆ. ಸರ್ಬಿಯಾದ ರೂಪದರ್ಶಿ ಮತ್ತು ನಟಿ ನತಾಶಾ ಸ್ಟಾಂಕೋವಿಕ್ ಅವರು ಮೇ 31, 2020 ರಂದು ಹಾರ್ದಿಕ್ ಪಾಂಡ್ಯ ಅವರನ್ನು ವಿವಾಹವಾಗಿದ್ದರು. ಅದೇ ವರ್ಷ ಜುಲೈ 30 ರಂದು ಈ ದಂಪತಿಗೆ ಗಂಡು ಮಗು ಜನಿಸಿತು. ಮಗುವಿಗೆ ‘ಅಗಸ್ತ್ಯ’ ಎಂದು ಹೆಸರಿಟ್ಟಿದ್ದಾರೆ. 2024 ಐಪಿಎಲ್ನಲ್ಲಿ ಹಾರ್ದಿಕ್ ಪಾಂಡ್ಯ ಕಳಪೆ ಪ್ರದರ್ಶನ ನೀಡಿದ್ದಕ್ಕೆ, ನತಾಶಾ ಅವರೂ ಕೂಡ ನಿಂದನೆಗೆ ಒಳಗಾಗಿದ್ದರು. ಆಕೆಯನ್ನು ನಿಂದಿಸುವ ಪೋಸ್ಟ್ಗಳನ್ನು ಹಾಕಲಾಯಿತು.
ರೆಡ್ಡಿಟ್ ನಲ್ಲಿ ಒಬ್ಬರು ಪೋಸ್ಟ್ ಮಾಡಿದ್ದು, “ಇದು ಕೇವಲ ಊಹಾಪೋಹ. ಆದರೆ ಇಬ್ಬರೂ (ಇನ್ಸ್ಟಾಗ್ರಾಮ್ ನಲ್ಲಿ) ಪರಸ್ಪರ ಪೋಸ್ಟ್ ಮಾಡುತ್ತಿಲ್ಲ. ಈ ಹಿಂದೆ, ನತಾಶಾ ತನ್ನ ಇನ್ಸ್ಟಾಗ್ರಾಮ್ನಲ್ಲಿ ನತಾಶಾ ಸ್ಟಾಂಕೋವಿಕ್ ಪಾಂಡ್ಯ ಎಂದು ಬರೆದುಕೊಂಡಿದ್ದರು, ಆದರೆ ಈಗ ನತಾಶಾ ಅವರು ʼಪಾಂಡ್ಯʼ ಹೆಸರನ್ನು ಸಂಪೂರ್ಣವಾಗಿ ತೆಗೆದುಹಾಕಿದ್ದಾರೆ ಎಂದು ಪೋಸ್ಟ್ ಮಾಡಿದ್ದಾರೆ.
“ಮಾರ್ಚ್ 4 ರಂದು ನತಾಶಾ ಅವರ ಜನ್ಮದಿನವಾಗಿತ್ತು, ಮತ್ತು ಆ ದಿನ ಹಾರ್ದಿಕ್ ಅವರಿಂದ ಯಾವುದೇ ಪೋಸ್ಟ್ ಇರಲಿಲ್ಲ; ಅವರು ಅಗಸ್ತ್ಯ ಅವರೊಂದಿಗೆ ಇದ್ದ ಪೋಸ್ಟ್ ಅನ್ನು ಹೊರತುಪಡಿಸಿ ತನ್ನ ಮತ್ತು ಹಾರ್ದಿಕ್ ಅವರ ಇತ್ತೀಚಿನ ಎಲ್ಲ ಪೋಸ್ಟ್ಗಳನ್ನು ತೆಗೆದುಹಾಕಿದ್ದಾರೆ. ಅಲ್ಲದೆ, ಅವರು ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ ಅವರಿಬ್ಬರ ನಡುವೆ ಏನಾದರೂ ತಪ್ಪಾಗಿದೆಯೇ ಎಂದು ಪೋಸ್ಟ್ನಲ್ಲಿ ಉಲ್ಲೇಖಿಸಲಾಗಿದೆ.
ವದಂತಿಗಳು ಮುಂದುವರೆದಿದ್ದರೂ, ಹಾರ್ದಿಕ್ ಪಾಂಡ್ಯ ಅಥವಾ ನಟಾಶಾ ಸ್ಟಾಂಕೋವಿಕ್ ಇಬ್ಬರೂ ತಮ್ಮ ದಾಂಪತ್ಯದ ಬಗ್ಗೆ ಅಧಿಕೃತವಾಗಿ ಪ್ರತಿಕ್ರಿಯಿಸಿಲ್ಲ
ನಿಮ್ಮ ಕಾಮೆಂಟ್ ಬರೆಯಿರಿ