ಬೆಳಗಾವಿ: ನೀರಿನ ಸಂಪಿಗೆ ಬಿದ್ದು ಎರಡೂವರೆ ವರ್ಷದ ಮಗು ಸಾವು

ಬೆಳಗಾವಿ: ಆಟವಾಡುತ್ತಿದ್ದ ಎರಡೂವರೆ ವರ್ಷದ ಮಗು ಸಂಪಿಗೆ ಬಿದ್ದು ಮೃತಪಟ್ಟಿರುವ ಘಟನೆ ಬೆಳಗಾವಿ ನಗರದ ಕಂಗ್ರಾಳ ಗಲ್ಲಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಮೃತಪಟ್ಟ ಮಗುವನ್ನು ಸಾಯೀಶಾ ಸಂದೀಪ ಬಡವನಾಚೆ ಎಂದು ಗುರುತಿಸಲಾಗಿದೆ. ಮನೆಯವರುನೀರು ತುಂಬಿದೆಯೇ ಎಂದು ನೋಡಲು ನೀರಿನ ಸಂಪಿನ ಮುಚ್ಚಳ ತೆರೆದಿದ್ದರು. ಈ ಸಂದರ್ಭದಲ್ಲಿ ಪಕ್ಕದಲ್ಲೇ ಆಟವಾಡುತ್ತಿದ್ದ ಮಗು ಸಂಪಿನೊಳಗೆ ಬಿದ್ದಿದೆ. ಇದನ್ನು ತಕ್ಷಣಕ್ಕೆ ಮನೆಯವರು ಗಮನಿಸಿಲ್ಲ. ನಂತರ ಮಗು ಕಾಣದಿದ್ದಾಗ ಗಾಬರಿಯಾಗಿ ಎಲ್ಲೆಡೆ ಹುಡುಕಾಡಿದ್ದಾರೆ. ಆದರೂ ಸುಳಿವು ಸಿಕ್ಕಿರಲಿಲ್ಲ. ಸಂಜೆಯ ವೇಳೆಗೆ ಸಂಪಿನಲ್ಲಿ ಮಗು ಬಿದ್ದಿದ್ದು ಗೊತ್ತಾಗಿದೆ. ಪೋಷಕರು ಕೂಡಲೇ ಮಗುವನ್ನು ಆಸ್ಪತ್ರೆಗೆ ಕೊಂಡೊಯ್ದದ್ದರು ಸಹಾ ಫಲಕಾರಿಯಾಗಲಿಲ್ಲ. ಖಡೇ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

5 / 5. 1

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ನಿಧನ

ನಿಮ್ಮ ಕಾಮೆಂಟ್ ಬರೆಯಿರಿ

advertisement