ಬಿಜೆಪಿ ನಾಯಕ ಬಿಎಲ್ ಸಂತೋಷ ಬಂಧನಕ್ಕೆ ತೆಲಂಗಾಣ ಮಾಜಿ ಸಿಎಂ ಕೆಸಿಆರ್ ಪ್ಲಾನ್‌ ಬಯಲು…!? ಇದಕ್ಕೆ ಕಾರಣ..?

ಹೈದರಾಬಾದ್: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರನ್ನು ಬಂಧಿಸುವ ಮೂಲಕ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ದೆಹಲಿ ಅಬಕಾರಿ ಹಗರಣದಲ್ಲಿ ಆರೋಪಿಯಾಗಿರುವ ತಮ್ಮ ಪುತ್ರಿ ಕೆ. ಕವಿತಾ ಅವರನ್ನು ಆರೋಪ ಮುಕ್ತಗೊಳಿಸಲು ತೆಲಂಗಾಣದ ಮಾಜಿ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ (ಕೆಸಿಆರ್) ಸಂಚು ರೂಪಿಸಿದ್ದರು ಎಂದು ತೆಲಂಗಾಣದ ಮಾಜಿ ಪೊಲೀಸ್ ಅಧಿಕಾರಿಯೊಬ್ಬರು ಗಂಭೀರ ಆರೋಪ ಮಾಡಿದ್ದಾರೆ.
ಕೇಂದ್ರ ಸರ್ಕಾರದ ಅಧೀನದಲ್ಲಿ ಕಾರ್ಯ ನಿರ್ವಹಿಸುವ ಜಾರಿ ನಿರ್ದೇಶನಾಲಯ (ಇ.ಡಿ.)ವು ಕವಿತಾ ಅವರ ವಿರುದ್ಧ ಪ್ರಕರಣ ದಾಖಲಿಸಿದೆ. ಬಿ.ಎಲ್. ಸಂತೋಷ ಬಿಜೆಪಿಯ ಪ್ರಭಾವಶಾಲಿ ನಾಯಕ. ಹೀಗಾಗಿ ತಮ್ಮ ಪುತ್ರಿ ಇ.ಡಿ. ಕೇಸ್ ನಿಂದ ಹೊರಬರುವಂತೆ ಮಾಡಬೇಕಾದರೆ ಕೇಂದ್ರದ ಮೇಲೆ ಒತ್ತಡ ಹಾಕಬೇಕು. ಹಾಗೆ ಮಾಡಬೇಕೆಂದರೆ ಕೇಂದ್ರವನ್ನು ತಮ್ಮ ಹತೋಟಿಗೆ ತರಬೇಕು ಎಂದು ನಿರ್ಧರಿಸಿದ್ದ ಕೆಸಿ ಚಂದ್ರಶೇಖರ ರಾವ್ ಅವರು, ಆ ವೇಳೆಗೆ ಹೈದರಾಬಾದಿಗೆ ಆಗಮಿಸಲಿದ್ದ ಬಿ.ಎಲ್. ಸಂತೋಷ ಅವರನ್ನು ಬಂಧಿಸಿ, ಆ ಮೂಲಕ ಕೇಂದ್ರದ ಮೇಲೆ ಒತ್ತಡ ಹಾಕಲು ಯೋಜನೆ ರೂಪಿಸಿದ್ದರು ಎಂದು ಹೈದರಾಬಾದ್ ಪೊಲೀಸ್ ಉಪಆಯಕ್ತರಾಗಿದ್ದ ಪಿ. ರಾಧಾಕೃಷ್ಣ ರಾವ್ ಹೇಳಿಕೆಯನ್ನು ನೀಡಿದ್ದಾರೆ ಎಂದು ಖಾಸಗಿ ಜಾಲತಾಣವೊಂದು ವರದಿ ಮಾಡಿದೆ.

ತೆಲಂಗಾಣ ರಾಜಕೀಯ ವಲಯದಲ್ಲಿ ಇತ್ತೀಚೆಗೆ ಬಿರುಗಾಳಿ ಎಬ್ಬಿಸಿರುವ ದೂರವಾಣಿ ಕದ್ದಾಲಿಕೆ ಪ್ರಕರಣದ ತನಿಖೆ ನಡೆಸುತ್ತಿರುವ ತನಿಖೆಯ ವೇಳೆ, ರಾಧಾಕೃಷ್ಣನ್ ಅವರು ತಮ್ಮ ಹೇಳಿಕೆಯನ್ನು ಆರು ಪುಟಗಳಲ್ಲಿ ಉಲ್ಲೇಖಿಸಿದ್ದಾರೆ ಎಂದು ಅದು ಹೇಳಿದೆ.
ಅಲ್ಲದೆ, ತಾವು ಪೊಲೀಸ್ ಉಪ ಆಯುಕ್ತರಾಗಿದ್ದಾಗ, ತಮಗೆ ಮುಖ್ಯಮಂತ್ರಿ ಹಾಗೂ ಅವರ ಆಪ್ತ ವಲಯದಿಂದ, ಸರ್ಕಾರದ ವಿರುದ್ಧ ಯಾರೂ ದನಿಯೆತ್ತಿದರೆ ಅದನ್ನು ಆರಂಭದಲ್ಲೇ ಮಟ್ಟ ಹಾಕಬೇಕು ಹಾಗೂ ಸರ್ಕಾರದ ವಿರುದ್ಧ ಯಾರೂ ಮುಷ್ಕರ, ಚಳುವಳಿಗಳು ಮಾಡದಂತೆ ಸೂಕ್ತ ವಾತಾರವಣ ನಿರ್ಮಿಸಬೇಕೆಂಬ ಮೌಖಿಕ ಸಲಹೆ ನೀಡಲಾಗಿತ್ತು ಎಂದು ತಮ್ಮ ತಪ್ಪೊಪ್ಪಿಗೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಖಾಸಗಿ ಜಾಲತಾಣದ ವರದಿ ಹೇಳಿದೆ.

ಪ್ರಮುಖ ಸುದ್ದಿ :-   8 ವರ್ಷಗಳ ಪ್ರೇಮದಲ್ಲಿ ಬಿರುಕು ; ಯುವತಿ ಆತ್ಮಹತ್ಯೆ, ಮೃತದೇಹಕ್ಕೆ ಪ್ರಿಯಕರ ಮಂಗಳಸೂತ್ರ ಕಟ್ಟಬೇಕು ಎಂದು ಕುಟುಂಬಸ್ಥರ ಪಟ್ಟು...

ಪಿ. ರಾಧಾಕೃಷ್ಣ ರಾವ್ ಅವರು ನೀಡಿರುವ ಹೇಳಿಕೆಯಲ್ಲಿ, “2023ರಲ್ಲಿ ನಡೆದಿದ್ದ ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಗೂ ಮೊದಲು, ಅಂದರೆ, ಅಕ್ಟೋಬರ್ ನಲ್ಲಿ ಕೆಸಿ ಚಂದ್ರಶೇಖರ ರಾವ್ ನೇತೃತ್ವದ ಪಕ್ಷವಾದ ಬಿಆರ್ ಎಸ್ ‌ (ಮೊದಲು ಅದನ್ನು ತೆಲಂಗಾಣ ರಾಷ್ಟ್ರೀಯ ಸಮಿತಿ ಎಂದು ಕರೆಯಲಾಗುತ್ತಿತ್ತು) ಕೆಲವು ನಾಯಕರನ್ನು ಬಿಜೆಪಿ ತನ್ನತ್ತ ಸೆಳೆಯುವ ಬಗ್ಗೆ ಊಹಾಪೋಹಗಳು ಎದ್ದಿದ್ದವು. ಆಗ, ತಂದುರ್ ಕ್ಷೇತ್ರದ ಬಿಆರ್ ಎಸ್ ಪಕ್ಷದ ಶಾಸಕರಾದ ಪಂಜುಗುಲ ರೋಹಿತ್ ರೆಡ್ಡಿಯವರು, ತಮ್ಮ ಬೆಂಬಲಿಗರೊಂದಿಗೆ ಬಿಜೆಪಿಗೆ ಸೇರುವ ಬಗ್ಗೆ ಕೆಸಿಆರ್ ಅವರಿಗೆ ಮಾಹಿತಿ ಲಭ್ಯವಾಗಿತ್ತು. ಇದು ಗೊತ್ತಾದ ಕೂಡಲೇ ಅವರು, ತೆಲಂಗಾಣದ ವಿಶೇಷ ಗುಪ್ತಚರ ಇಲಾಖೆಯ ಮುಖ್ಯಸ್ಥರಾಗಿದ್ದ ಟಿ. ಪ್ರಭಾಕರ ರಾವ್ ಅವರನ್ನು ಫೋನ್ ಟ್ಯಾಪಿಂಗ್ ಮಾಡುವ ಕೆಲಸದಲ್ಲಿ ತೊಡಗಿಸಿದ್ದರು. ವಿಶೇಷವಾಗಿ ತಮ್ಮ ಪಕ್ಷದ ನಾಯಕರನ್ನು ಸಂಪರ್ಕಿಸಲು ಪ್ರಯತ್ನ ನಡೆಸಿರುವ ಬಿಜೆಪಿ ನಾಯಕರ ಫೋನ್ ಗಳನ್ನು ಟ್ಯಾಪ್ ಮಾಡುವಂತೆ ಸೂಚಿಸಿದ್ದರು’’ ಎಂದು ರಾಧಾಕೃಷ್ಣನ್ ತಿಳಿಸಿದ್ದಾರೆ.

ತಮ್ಮ ಪಕ್ಷದ ಶಾಸಕರನ್ನು ಅಕ್ರಮವಾಗಿ ಸೆಳೆಯುತ್ತಿದೆ ಎಂದುಗಿ ಪ್ರಕರಣ ದಾಖಲಿಸಿದ ಕೆ ಚಂದ್ರಶೇಖರ ರಾವ್‌ ಸರ್ಕಾರ, “ವಿಶೇಷ ತನಿಖಾ ತಂಡವನ್ನು (ಎಸ್ಐಟಿ) ರಚಿಸಿ, ಈ ಬಗ್ಗೆ ತನಿಖೆಗೆ ಆದೇಶ ನೀಡಿತು. ಆ ತನಿಖಾ ವರದಿಯಲ್ಲಿ ಬಿ.ಎಲ್. ಸಂತೋಷ ಅವರನ್ನು ಪ್ರಮುಖ ಆರೋಪಿಯೆಂದು ಉಲ್ಲೇಖಿಸಲಾಗಿತ್ತು. ನಂತರ ಬಿ.ಎಲ್‌. ಸಂತೋಷ ಬಂಧನಕ್ಕೆ ವೇದಿಕೆ ಸಿದ್ಧಗೊಳಿಸಲಾಗಿತ್ತು. ಆದರೆ, ಸರ್ಕಾರದ ಈ ನಡೆಗೆ ಬಿಜೆಪಿಯು ತೆಲಂಗಾಣ ಹೈಕೋರ್ಟ್ ಮೆಟ್ಟಿಲೇರಿ ಸರ್ಕಾರದ ಬಂಧನ ಆದೇಶಕ್ಕೆ ತಡೆ ತಂದಿತು. ಹೀಗಾಗಿ ಮೊದಲೇ ಯೋಜಿಸಿದಂತೆ ಬಿ.ಎಲ್. ಸಂತೋಷ ಅವರನ್ನು ಬಂಧಿಸಲು ಸಾಧಯವಾಗಲಿಲ್ಲ’’ ಎಂದು ರಾಧಾಕೃಷ್ಣನ್ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಅಧ್ಯಾಯ; ಕಕ್ಷೆ ತಲುಪಿದ ಸ್ಕೈರೂಟ್‌ನ ಖಾಸಗಿ ರಾಕೆಟ್ ‘ವಿಕ್ರಂ-1’

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement