ವೀಡಿಯೊ..| ವೇದಿಕೆ ಮೇಲೆಯೇ ಮಂಡಿಯೂರಿ ಮಹಿಳೆ ಪಾದಕ್ಕೆ ನಮಸ್ಕರಿಸಿದ ಪ್ರಧಾನಿ ಮೋದಿ ; ಈ ಮಹಿಳೆ ಯಾರು..?

ಪ್ರಧಾನಿ ನರೇಂದ್ರ ಮೋದಿ (Narendra Modi) ಒಡಿಶಾದಲ್ಲಿ ಲೋಕಸಭಾ ಚುನಾವಣಾ(Lok Sabha Election) ಪ್ರಚಾರದ ಸಂದರ್ಭದಲ್ಲಿ ವೇದಿಕೆ ಮೇಲೆ ಮಹಿಳೆಯೊಬ್ಬರಿಗೆ ಮಂಡಿಯೂರಿ ನಮಸ್ಕರಿಸಿದ ವೀಡಿಯೊ ಈಗ ಎಲ್ಲೆಡೆ ವೈರಲ್ ಆಗಿದೆ.
ಒಡಿಶಾದಲ್ಲಿ ನಡೆದ ಚುನಾವಣಾ ಸಭೆಯಲ್ಲಿ 66 ವರ್ಷದ ಮಹಿಳಾ ಕುಶಲಕರ್ಮಿ ಕಮಲಾ ಮೊಹರಾನಾ ಅವರ ಪಾದಗಳನ್ನು ಮುಟ್ಟಿ ಮೋದಿ ನಮಸ್ಕರಿಸಿದ್ದಾರೆ. ಮೋದಿ ಮಂಡಿಯೂರಿ ನಮಸ್ಕರಿಸಿದ ಈ ಮಹಿಳೆ ಯಾರು ಎಂಬ ಪ್ರಶ್ನೆ ಮೂಡಿದೆ. ಕಮಲಾ ಮೊಹರಾನಾ ಅವರು ಅಪ್ರತಿಮ ಸಾಧಕಿ. ಅವರು ತ್ಯಾಜ್ಯದಿಂದ ವಿವಿಧ ವಿಶಿಷ್ಟ ವಸ್ತುಗಳನ್ನು ತಯಾರಿಸುವಲ್ಲಿ ಸಿದ್ಧಹಸ್ತರು.
ಖೈರಪುರ ಗ್ರಾಮದಲ್ಲಿ ಮಹಿಳೆಯರು ತ್ಯಾಜ್ಯ ವಸ್ತುಗಳನ್ನು ಸುಂದರ ಅಲಂಕಾರಿಕ ವಸ್ತುಗಳನ್ನಾಗಿ ಪರಿವರ್ತಿಸುವ ಸ್ವ-ಸಹಾಯ ಗುಂಪಿನ ನೇತೃತ್ವವನ್ನು ಕಮಲಾ ಅವರು ವಹಿಸಿದ್ದಾರೆ. “ನಾನು ಮೋದಿಯವರ ಪಾದಗಳನ್ನು ಮುಟ್ಟಲು ಪ್ರಯತ್ನಿಸಿದೆ. ಆದರೆ ಪ್ರಧಾನಿ ಇದ್ದಕ್ಕಿದ್ದಂತೆ ನನ್ನ ಮುಂದೆ ತಲೆಬಾಗಿ ನನ್ನ ಪಾದಗಳನ್ನು ಮುಟ್ಟಿದರು. ನನ್ನ ಜೀವನದಲ್ಲಿ ನಾನು ಎಂದಿಗೂ ಮರೆಯುವುದಿಲ್ಲ,” ಎಂದು ಅವರು ಭಾವುಕರಾಗಿ ಹೇಳಿದ್ದಾರೆ.

ಒಡಿಶಾದ ಕೆಂದ್ರಪಾರದಲ್ಲಿ ನಡೆದ ಕಾರ್ಯಕ್ರಮದ ವೇದಿಕೆಯಲ್ಲಿ ಕಮಲಾ ಅವರು ಇದ್ದಾರೆ ಎಂದು ಗೊತ್ತಾಗುತ್ತಿದ್ದಂತೆ ಪ್ರಧಾನಿ ಮೋದಿ ಅವರೊಂದಿಗೆ ಮಾತನಾಡಿದರು. ನಂತರ ಜನಸಮೂಹದ ಮುಂದೆ ಕಮಲಾ ಅವರು ಮೋದಿಯವರ ಕಾಲಿಗೆರಲು ಬಂದಿದ್ದಾರೆ. ಕಮಲಾ ಅವರನ್ನು ತಡೆದ ಮೋದಿ, ತಾವೇ ಕಮಲಾ ಅವರ ಕಾಲಿಗೆರಗಿ ಆಶೀರ್ವಾದ ಪಡೆದರು.
ಕಮಲಾ ಎಂಟು ವರ್ಷಗಳ ಹಿಂದೆ ಪ್ಲಾಸ್ಟಿಕ್, ಪಾಲಿಥಿನ್ ಸೇರಿದಂತೆ ತ್ಯಾಜ್ಯ ವಸ್ತುಗಳಿಂದ ಬುಟ್ಟಿಗಳು, ಪೆನ್ ಸ್ಟ್ಯಾಂಡ್‌ಗಳು, ಹೂವಿನ ಕುಂಡಗಳು ಮತ್ತು ಗೋಡೆಯ ಹ್ಯಾಂಗಿಂಗ್‌ಗಳಂತಹ ವಿವಿಧ ವಸ್ತುಗಳನ್ನು ತಯಾರಿಸಲು ಪ್ರಾರಂಭಿಸಿದರು. ‘ವೇಸ್ಟ್ ಟು ವೆಲ್ತ್’ ಜೊತೆಗೆ ಮಹಿಳಾ ಸಬಲೀಕರಣಕ್ಕಾಗಿ ಅವರು ಕೆಲಸ ಮಾಡುತ್ತಾರೆ.
ಕಳೆದ ವರ್ಷ ಪ್ರಧಾನಿ ಮೋದಿಯವರ ಮನ್ ಕಿ ಬಾತ್ ಕಾರ್ಯಕ್ರಮದಲ್ಲೂ ಅವರನ್ನು ಉಲ್ಲೇಖಿಸಲಾಗಿತ್ತು. ಇತ್ತೀಚೆಗೆ ಕಮಲಾ ಅವರು ಪ್ರಧಾನಿ ಮೋದಿಯವರಿಗೆ ವಸ್ತ್ರದಿಂದ ತಯಾರಿಸಿದ ರಾಖಿಯನ್ನೂ ಕಳುಹಿಸಿದ್ದರು.

ಕೆಂದ್ರಾಪಾರ ನಗರದ ಗುಲ್ನಗರದಲ್ಲಿ ವಾಸವಿರುವ ಕಮಲಾ, ಸ್ವ ಸಹಾಯ ಸಂಘ ನಡೆಸುತ್ತಿದ್ದಾರೆ. ತಾಜ್ಯವಸ್ತುಗಳಿಂದ ಹಲವು ಉತ್ಪನ್ನಗಳನ್ನು ಕಮಲ ಮಹರನಾ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ.
ಕಮಲಾ ಅವರು ಪ್ಲಾಸ್ಟಿಕ್ ಸೇರಿದಂತೆ ಹಲವು ತ್ಯಾಜ್ಯ ವಸ್ತುಗಳಿಂದ ಉತ್ಪನ್ನ ಮಾಡಿ ಹಲವು ಮಹಿಳೆಯರಿಗೆ ಉದ್ಯೋಗವನ್ನು ಒದಗಿಸಿದ್ದಾರೆ. ಇದೀಗ ಸಮಾವೇಶದಲ್ಲಿ ಕಮಲಾ ಮೋದಿ ಭೇಟಿಯಾಗಿದ್ದಾರೆ. ಈ ವೇಳೆ ಮೋದಿ ಕಮಲಾ ಕಾಲಿಗೆರಗಿದ ವಿಡಿಯೋ ಭಾರಿ ವೈರಲ್ ಆಗಿದೆ.
ಪರಿಸರ ಸುಸ್ಥಿರತೆಗೆ ಕಮಲಾ ಅವರ ಸಮರ್ಪಣೆ ಮತ್ತು ತ್ಯಾಜ್ಯ ನಿರ್ವಹಣೆಗೆ ಅವರ ಸೃಜನಶೀಲ ವಿಧಾನವು ಅವರ ಮೆಚ್ಚುಗೆಯನ್ನು ಗಳಿಸಿದೆ ಹಾಗೂ ಅವರಿಗೆ ಮನ್ನಣೆ ತಂದುಕೊಟ್ಟಿದೆ.

5 / 5. 4

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement