ವೀಡಿಯೊ..| ವಿವಾಹದ ವೇಳೆ ಮಾರಕಾಸ್ತ್ರ ಹಿಡಿದು ಬೆದರಿಸಿ ಯುವತಿಯ ಅಪಹರಣಕ್ಕೆ ಯತ್ನ ; ದೃಶ್ಯ ಕ್ಯಾಮರಾದಲ್ಲಿ ಸೆರೆ

ಭೋಪಾಲ್‌ : ಮಧ್ಯಪ್ರದೇಶದ ಅಶೋಕ ನಗರದಲ್ಲಿ ವಿವಾಹದ ವೇಳೆ ಕತ್ತಿ ಬೀಸುತ್ತ 22 ವರ್ಷದ ಯುವತಿಯೊಬ್ಬಳನ್ನು ಸಿನಿಮೀಯ ರೀತಿಯಲ್ಲಿ ಅಪಹರಿಸಲು ಯತ್ನಿಸಿದ ಘಟನೆ ನಡೆದಿದೆ.
ಗುರುವಾರ ಸಂಜೆ 6 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಅದರ ವೀಡಿಯೊ ವೈರಲ್‌ ಆಗಿದೆ. ಯುವತಿ ಅತ್ಯಾಚಾರ ಸಂತ್ರಸ್ತೆಯಾಗಿದ್ದು, ಅವಳ ಮದುವೆ ಮತ್ತೊಬ್ಬನ ಜೊತೆ ನಡೆಯುತ್ತಿದ್ದಾಗ ಅತ್ಯಾಚಾರ ಆರೋಪಿ ಹಾಗೂ ಆತನ ಸಹಚರರು ಮಾರಕಾಸ್ತ್ರ ಹಿಡಿದು ದಾಳಿ ನಡೆಸಿ ಆಕೆಯನ್ನು ಅಪಹರಿಸಲು ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಪ್ರಮುಖ ಆರೋಪಿ ಕಾಲು ಅಲಿಯಾಸ್‌‍ ಸಲೀಂ ಖಾನ್‌ ಎಂಬಾತ ಸಹಚರರಾದ ಜೋಧಾ, ಸಮೀರ್‌ ಮತ್ತು ಶಾರುಖ್‌ ಜೊತೆಗೆ ಯುವತಿಯ ಮನೆಗೆ ನುಗ್ಗಿದ್ದಾರೆ. ಆಕೆ ಪ್ರತಿಭಟಿಸಿದಾಗ ಆಕೆಯ ಮನೆಯವರ ಮೇಲೆ ಹಲ್ಲೆ ನಡೆಸಿ, ಆಕೆಯ ತಂದೆಯ ಕಾಲು ಹಾಗೂ ಸಹೋದರನ ಕೈಯನ್ನು ಮುರಿದಿದ್ದಾರೆ. ಆಕೆಯ ತಾಯಿಗೂ ಅಮಾನುಷವಾಗಿ ಥಳಿಸಲಾಗಿದೆ.

ಪ್ರಮುಖ ಆರೋಪಿ ಕಾಲು ಅಲಿಯಾಸ್‌‍ ಸಲೀಂ ಖಾನ್‌ ಎಂಬಾತ ಯುವತಿಯ ಮೇಲೆ ಅತ್ಯಾಚಾರ ಎಸಗಿದ್ದ ಎಂಬ ವಿಚಾರ ಬೆಳಕಿಗೆ ಬಂದಿದೆ. ಆತ ವೀಡಿಯೊ ಮೂಲಕ ಹೆಸದರಿಸುತ್ತಿದ್ದ. ನಂತರ ಯುವತಿ ಬೇರೊಬ್ಬ ವ್ಯಕ್ತಿಯನ್ನು ಮದುವೆಯಾಗುತ್ತಿದ್ದಾಗ ಆಕೆಯ ಕುಟುಂಬದ ಮೇಲೆ ಹಲ್ಲೆ ನಡೆಸಿದ್ದಾನೆ.
ದಾಳಿಕೋರರು ಕತ್ತಿ ಮತ್ತು ಕಬ್ಬಿಣದ ಸರಳುಗಳನ್ನು ಬೀಸುತ್ತಾ ಮಹಿಳೆಯನ್ನು ಆಕೆಯ ಮನೆಯಿಂದ ಹೊರಗೆ ಎಳೆದೊಯ್ದಿರುವುದು ವೀಡಿಯೊದಲ್ಲಿ ಕಂಡುಬಂದಿದೆ. ಮನೆಯವರು ಮತ್ತು ಯುವತಿ ಸಹಾಯಕ್ಕಾಗಿ ಕೂಗುತ್ತಿದ್ದಂತೆಯೇ ಅಕ್ಕಪಕ್ಕದವರು ಜಮಾಯಿಸಿದರು. ಆರಂಭದಲ್ಲಿ, ಆರೋಪಿಗಳು ಅವರಿಗೆ ಬೆದರಿಕೆ ಹಾಕಿದರು. ಆದರೆ ಜನರ ಗುಂಪು ಹೆಚ್ಚಾಗುತ್ತಿದ್ದಂತೆಯೇ ಸ್ಥಳದಿಂದ ಪರಾರಿಯಾದರು. ಹೋಗುವಾಗ ಜನರಿಗೆ ಹೆದರಿ ಯುವತಿಯನ್ನು ಬಿಟ್ಟು ಪರಾರಿಯಾಗಿದ್ದಾರೆ.

ಪ್ರಮುಖ ಸುದ್ದಿ :-   ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್‌, ಏಕದಿನ ಸರಣಿಗೆ ಭಾರತದ ಕ್ರಿಕೆಟ್‌ ತಂಡ ಪ್ರಕಟ

ಆರೋಪಿಗಳು ಯುವತಿಯ ಕುಟುಂಬ ಮತ್ತು ಅವಳು ನಿಶ್ಚಿತಾರ್ಥ ಮಾಡಿಕೊಂಡ ವರನ ಕುಟುಂಬಕ್ಕೆ ಬೆದರಿಕೆ ಹಾಕಿದ್ದಾರೆ. ಪ್ರಕರಣ ದಾಖಲಿಸಿಕೊಳ್ಳಲು ಪೊಲೀಸರು ಆರಂಭದಲ್ಲಿ ಹಿಂದೇಟು ಹಾಕಿದ್ದರು. ಆದರೆ ಪ್ರತಿಭಟನೆಯ ನಂತರ ಪೊಲೀಸರು ಯುವತಿ ಮತ್ತು ಆಕೆಯ ತಂದೆ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣಗಳನ್ನು ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ.
ಎಫ್‌ಐಆರ್ ಅನ್ನು ಸೆಕ್ಷನ್ 376 (ಅತ್ಯಾಚಾರ) ಮತ್ತು 363 (ಅಪಹರಣ ಯತ್ನ) ಅಡಿಯಲ್ಲಿ ದಾಖಲಿಸಲಾಗಿದೆ, ಎರಡನೇ ಎಫ್‌ಐಆರ್ ಅನ್ನು ಸೆಕ್ಷನ್ 323 (ಸ್ವಯಂಪ್ರೇರಿತವಾಗಿ ನೋವುಂಟು ಮಾಡುವುದು), 294 (ಅಶ್ಲೀಲ ಭಾಷೆ ಬಳಸುವುದು) ಮತ್ತು 506 (ಅಪರಾಧ ಬೆದರಿಕೆ) ಅಡಿಯಲ್ಲಿ ದಾಖಲಾಗಿದೆ ಎಂದು ವರದಿಯಾಗಿದೆ.

ಪ್ರಮುಖ ಸುದ್ದಿ :-   ಹಲ್ಲಿಲ್ಲದ ಹಾವಿನಿಂದ ಬಯಲಾದ ಗಂಡನ ಕೊಲೆ ಕೃತ್ಯ ; ಪತ್ನಿ-ಪ್ರಿಯಕರನಿಗೆ ಮರಣದಂಡನೆ ಶಿಕ್ಷೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement