ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂಬುದು ಮೊದಲೇ ಗೊತ್ತಿರುವ ಸಂಗತಿ: ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ

ಬೆಂಗಳೂರು : ಈ ಬಾರಿ ಕೇಂದ್ರದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎನ್ನುವ ವಿಚಾರ ಮೊದಲೇ ಗೊತ್ತಿರುವ ಸಂಗತಿ. ನಾನು ಕಾಂಗ್ರೆಸ್​ ಶಾಸಕನಾದರೂ ನಿಜ ಹೇಳಬೇಕು ಎಂದು ಕೋಲಾರ ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ ಹೇಳಿದ್ದಾರೆ.
ಕೋಲಾರದಲ್ಲಿ ಸೋಮವಾರ ಎಕ್ಸಿಟ್​ ಪೋಲ್​ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಈ ಬಾರಿ ಬಿಜೆಪಿ ಬರಲಿದೆ. 2029ಕ್ಕೆ ಕೇಂದ್ರದಲ್ಲಿ ಕಾಂಗ್ರೆಸ್‌ ಸರ್ಕಾರ ಬರಲಿದೆ. ಮುಂದಿನ ಚುನಾವಣೆ ನಮ್ಮ ಗುರಿ. ಅದಕ್ಕೆ ಬೇಕಾದ ಪೂರ್ವ ತಯಾರಿ ನಡೆಯುತ್ತಿದೆ” ಎಂದು ತಿಳಿಸಿದರು.
ಎಲ್ಲರಂತೆ ಕೇಂದ್ರದಲ್ಲಿ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ನಾನು ಸುಳ್ಳು ಹೇಳುವುದಿಲ್ಲ. ಈ ಬಾರಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರ ಹಿಡಿಯುವ ಸಾಧ್ಯತೆ ಹೆಚ್ಚಿದೆ ಎಂಬುದು ಮೊದಲೇ ಗೊತ್ತಿದ್ದ ವಿಚಾರ, ಆದರೆ ರಾಜ್ಯದಲ್ಲಿ 50-50 ಫಲಿತಾಂಶ ​​ಬರಲಿದೆ. ಕೋಲಾರದಲ್ಲಿ 29 ಸಾವಿರ ಮತಗಳಿಂದ ಕಾಂಗ್ರೆಸ್ ಗೆಲ್ಲಲಿದೆ ಎಂದು ಹೇಳಿದರು.
ಮಾಜಿ ಸ್ಪೀಕರ್‌ ರಮೇಶಕುಮಾರ ತಮಗೆ ಪರಿಷತ್‌ ಸದಸ್ಯ ಸ್ಥಾನ ಬೇಕೆಂದು ಕೇಳಿಲ್ಲ, ಆದರೆ ನಾವು ಅವರಿ​ಗೆ ವಿಧಾನ ಪರಿಷತ್​ ಟಿಕೆಟ್ ಕೊಡಿ ಎಂದು ಕೇಳಿದ್ದೆವು. ಆದರೆ ಸಿಗಲಿಲ್ಲ. ಮುಂದೆ ಒಳ್ಳೆ ಅವಕಾಶ ಸಿಗಬಹುದು. ರಾಜ್ಯದಲ್ಲಿ ಸಚಿವ ಸ್ಥಾನ ಬದಲಾವಣೆಯಾದರೆ ಕೋಲಾರಕ್ಕೂ ಸಚಿವ ಸ್ಥಾನ ಸಿಗಲಿದೆ ಎಂದು ಅವರು ತಿಳಿಸಿದರು.

ಪ್ರಮುಖ ಸುದ್ದಿ :-   ಇನ್ಮುಂದೆ ಸ್ವಾಧೀನಾನುಭವ ಪ್ರಮಾಣಪತ್ರ ಪಡೆದರೆ ಮಾತ್ರ ಕಟ್ಟಡಗಳಿಗೆ ವಿದ್ಯುತ್‌, ನೀರಿನ ಸಂಪರ್ಕ; ಬಿಬಿಎಂಪಿ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement