ಎಕ್ಸಿಟ್ ಪೋಲ್‌ ಗಳ ಅಂದಾಜು ಹುಸಿ ; ಮಹಾಪತನ ಕಂಡ ಷೇರು ಮಾರುಕಟ್ಟೆ : ₹31 ಲಕ್ಷ ಕೋಟಿ ಕಳೆದುಕೊಂಡ ಹೂಡಿಕೆದಾರರು

ನವದೆಹಲಿ : ಭಾರತೀಯ ಷೇರು ಮಾರುಕಟ್ಟೆಗಳು ಮತ ಎಣಿಕೆ ದಿನವಾ ಮಂಗಳವಾರ (ಜೂನ್‌ 4) 4,000 ಪಾಯಿಂಟ್‌ಗಳ ಕುಸಿತ ಕಂಡಿವೆ, ಹಿಂದಿನ ಅವಧಿಯಲ್ಲಿ ತೀವ್ರ ರ್ಯಾಲಿ ನಂತರ, ಆರಂಭಿಕ ಚುನಾವಣಾ ಫಲಿತಾಂಶಗಳು ಪ್ರಧಾನಿ ನರೇಂದ್ರ ಮೋದಿ ಅವರ ಭಾರತೀಯ ಜನತಾ ಪಾರ್ಟಿ ನೇತೃತ್ವದ ಮೈತ್ರಿಕೂಟ 272 ಕ್ಕೂ ಕಡಿಮೆ ಸ್ಥಾನಗಳು ಸಿಗುತ್ತಿವೆ ಎಂದು ತೋರಿಸುತ್ತಿದ್ದಂತೆಯೇ ಶೇರು ಮಾರುಕಟ್ಟೆಗಳು ಪಾತಾಳಕ್ಕೆ ಕುಸಿಯಿತು. ಈ ಕುಸಿತದಿಂದಾಗಿ ಹೂಡಿಕೆದಾರರ ಸಂಪತ್ತು ಒಂದೇ ದಿನ ₹31 ಲಕ್ಷ ಕೋಟಿ ಕರಗಿದೆ.
ಬಿಎಸ್‌ಇ ಸೆನ್ಸೆಕ್ಸ್ 5.74 ಶೇಕಡಾ ಅಥವಾ 4,389 ಪಾಯಿಂಟ್‌ಗಳು ಕುಸಿತ ಕಂಡು 72,079 ಕ್ಕೆ ಮುಕ್ತಾಯವಾಗಿದೆ. ಎನ್‌ಎಸ್‌ಇ ನಿಫ್ಟಿ 50 ಶೇಕಡಾ 5.93 ಅಥವಾ 1,379 ಪಾಯಿಂಟ್‌ಗಳು ಕುಸಿತಕಂಡು ಮುಕ್ತಾಯವಾಯಿತು. ಕೋವಿಡ್ ಸಾಂಕ್ರಾಮಿಕ ರೋಗ ಪ್ರಾರಂಭವಾದ ನಂತರ ಇದು ಭಾರತೀಯ ಮಾರುಕಟ್ಟೆಗಳಲ್ಲಿ ಒಂದೇ ದಿನದ ಅತಿದೊಡ್ಡ ಕುಸಿತವಾಗಿದೆ. 2020ರ ಮಾರ್ಚ್‌ 23ರಂದು ಕೋವಿಡ್‌ ಸಾಂಕ್ರಾಮಿಕ ಉಲ್ಬಣಗೊಂಡಿದ್ದರಿಂದ ಸರ್ಕಾರವು ಲಾಕ್‌ಡೌನ್‌ ಘೋಷಿಸಿತ್ತು. ಅಂದಿನ ವಹಿವಾಟಿನಲ್ಲಿ ಸೂಚ್ಯಂಕಗಳು ಶೇ 13ರಷ್ಟು ಕುಸಿತ ಕಂಡಿದ್ದವು. ನಾಲ್ಕು ವರ್ಷಗಳ ಬಳಿಕ ಈಗ ತೀವ್ರ ಇಳಿಕೆ ಕಂಡಿವೆ.

ಪ್ರಮುಖ ಸುದ್ದಿ :-   ಸೇನಾಧಿಕಾರಿ ಸೋಫಿಯಾ ಕುರೇಷಿ ಬಗ್ಗೆ ವಿವಾದಾತ್ಮಕ ಹೇಳಿಕೆ : ಮಧ್ಯಪ್ರದೇಶ ಸಚಿವನ ವಿರುದ್ಧ ಎಫ್ಐಆರ್ ದಾಖಲಿಸಲು ಹೈಕೋರ್ಟ್ ಆದೇಶ

ಬಿಜೆಪಿ ನೇತೃತ್ವದ ಮೈತ್ರಿಯು ಕೆಳಮನೆಯಲ್ಲಿ ಮೂರನೇ ಎರಡರಷ್ಟು ಬಹುಮತವನ್ನು ಪಡೆಯುವ ಸಾಧ್ಯತೆಯಿದೆ ಎಂದು ಎಕ್ಸಿಟ್ ಪೋಲ್‌ಗಳು ಅಂದಾಜಿಸಿದ ನಂತರ ಸೋಮವಾರ ಆದ ಎಲ್ಲ ಲಾಭವನ್ನು ಈ ತೀವ್ರ ಕುಸಿತವು ಅಳಿಸಿಹಾಕಿದೆ.
ಆರಂಭಿಕ ಟ್ರೆಂಡ್‌ಗಳ ಪ್ರಕಾರ, ಎನ್‌ಡಿಎ ಪ್ರಸ್ತುತ 294 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಇಂಡಿಯಾ ಮೈತ್ರಿಕೂಟವು 232 ಸ್ಥಾನಗಳಲ್ಲಿ ಮುಂದಿದೆ. ಸರ್ಕಾರ ರಚಿಸಲು 543 ಸ್ಥಾನಗಳ ಲೋಕಸಭೆಯಲ್ಲಿ ಯಾವುದೇ ಪಕ್ಷ ಅಥವಾ ಮೈತ್ರಿಕೂಟ 272ರ ಗಡಿ ದಾಟಬೇಕು.
ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ಬ್ಯಾಂಕ್ ಷೇರುಗಳು 7.8% ಕುಸಿಯಿತು, ರಿಯಾಲ್ಟಿ 9.1% ಕುಸಿಯಿತು, ಮೂಲಸೌಕರ್ಯ 10.5% ಕುಸಿಯಿತು, ತೈಲ ಮತ್ತು ಅನಿಲ ಷೇರುಗಳು 11.7% ನಷ್ಟು ಮತ್ತು ಸರ್ಕಾರಿ ಕಂಪನಿಗಳು ಮತ್ತು ಬ್ಯಾಂಕುಗಳು ಕ್ರಮವಾಗಿ 17% ಮತ್ತು 16% ನಷ್ಟು ಕುಸಿಯಿತು.

ಲೋಕಸಭಾ ಚುನಾವಣಾ ಫಲಿತಾಂಶವು ಉದ್ಯಮಿ ಗೌತಮ್‌ ಅದಾನಿ ಸಮೂಹದ ಮೇಲೂ ಪರಿಣಾಮ ಬೀರಿದ್ದು ಒಂದೇ ದಿನ ಕಂ‍ಪನಿಗಳ ಮಾರುಕಟ್ಟೆ ಮೌಲ್ಯವು ₹3.64 ಲಕ್ಷ ಕೋಟಿ ಕರಗಿದೆ. ಸೋಮವಾರದ ವಹಿವಾಟಿನಲ್ಲಿ ಕಂಪನಿಗಳ ಷೇರಿನ ಮೌಲ್ಯದಲ್ಲಿ ಶೇ 16ರಷ್ಟು ಏರಿಕೆಯಾಗಿದ್ದರಿಂದ ಮಾರುಕಟ್ಟೆ ಮೌಲ್ಯವು ₹19.42 ಲಕ್ಷ ಕೋಟಿ ದಾಟಿತ್ತು. ಮಂಗಳವಾರದ ಆರಂಭಿಕ ವಹಿವಾಟಿನಲ್ಲಿಯೇ ಷೇರಿನ ಮೌಲ್ಯ ಇಳಿಕೆ ಕಂಡವು. ಹತ್ತು ಕಂಪನಿಗಳ ಪೈಕಿ ಎಂಟು ಕಂಪನಿಗಳ ಷೇರಿನ ಮೌಲ್ಯವು ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಒಟ್ಟು ಎಂ-ಕ್ಯಾಪ್‌ ₹15.78 ಲಕ್ಷ ಕೋಟಿ ಆಗಿದೆ. ಅದಾನಿ ಪೋರ್ಟ್ಸ್‌ ಷೇರಿನ ಮೌಲ್ಯದಲ್ಲಿ ಶೇ 21.26ರಷ್ಟು ಕುಸಿದಿದೆ. ಅದಾನಿ ಎನರ್ಜಿ ಸೆಲ್ಯೂಷನ್ಸ್‌ ಶೇ 20 ಅದಾನಿ ಎಂಟರ್‌ಪ್ರೈಸಸ್‌ ಶೇ 19.35 ಅದಾನಿ ಗ್ರೀನ್‌ ಎನರ್ಜಿ ಷೇರಿನ ಮೌಲ್ಯದಲ್ಲಿ ಶೇ 19.20ರಷ್ಟು ಇಳಿಕೆಯಾಗಿದೆ. ಅದಾನಿ ಟೋಟಲ್‌ ಗ್ಯಾಸ್‌ ಶೇ 18.88 ಎನ್‌ಡಿಟಿವಿ ಶೇ 18.52 ಅದಾನಿ ಪವರ್‌ ಶೇ 17.27 ಅಂಬುಜಾ ಸಿಮೆಂಟ್ಸ್‌ ಶೇ 16.88 ಎಸಿಸಿ ಶೇ 14.71 ಹಾಗೂ ಅದಾನಿ ವಿಲ್ಮರ್‌ ಷೇರಿನ ಮೌಲ್ಯದಲ್ಲಿ ಶೇ 9.98ರಷ್ಟು ಕುಸಿದಿದೆ.

ಪ್ರಮುಖ ಸುದ್ದಿ :-   ಏಪ್ರಿಲ್ 23 ರಂದು ಪಾಕಿಸ್ತಾನ ಬಂಧಿಸಿದ್ದ ಬಿಎಸ್‌ಎಫ್ ಯೋಧ ಬಿಡುಗಡೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement