ಕಾರವಾರ : ಶುಕ್ರವಾರ ಸುರಿದ ಭಾರೀ ಮಳೆಗೆ ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಸ್ಥಳವಾದ ಗೋಕರ್ಣದ ಹಲವು ಕಡೆ ನೀರು ತುಂಬಿದ್ದು, ಮಹಾಬಲೇಶ್ವರ ದೇಗುಲದ ಗರ್ಭಗುಡಿಯೂ ಜಲಾವೃತವಾಗಿ ಆತ್ಮಲಿಂಗ ಗಂಟೆಗಳ ಕಾಲ ರಾಡಿ ನೀರಿನಿಂದ ಮುಳುಗುವಂತಾಯಿತು ಎಂದು ವರದಿಯಾಗಿದೆ.
ಹೀಗಾಗಿ ಒಂದು ತಾಸಿಗೂ ಹೆಚ್ಚು ಕಾಲ ಭಕ್ತರಿಗೆ ಆತ್ಮಲಿಂಗದ ದರ್ಶನಕ್ಕೆ ಅವಕಾಶವನ್ನು ಸ್ಥಗಿತಗೊಳಿಸಲಾಗಿತ್ತು.ದೇವಸ್ಥಾನದ ಸಿಬ್ಬಂದಿ ಪರಿಶ್ರಮದಿಂದ ಗರ್ಭಗುಡಿಯಲ್ಲಿ ಸೇರಿದ್ದ ನೀರನ್ನು ಹೊರಹಾಕಲಾಯಿತು.
ಸಮುದ್ರದಲ್ಲಿ ಉಬ್ಬರ ಇದ್ದುದರಿಂದ ಸಂಗಮದ ನಾಲೆಯಿಂದ ಬಂದ ಮಳೆಯ ನೀರು ಸಮುದ್ರಕ್ಕೆ ಸೇರಲು ಅಡ್ಡಿಯಾಯಿತು. ಹೀಗಾಗಿ ಆ ನೀರು ಗರ್ಭಗುಡಿಯಿಂದ ತೀರ್ಥ ಹೊರಹೋಗುವ ಸೋಮಸೂತ್ರದ ಮೂಲಕ ಒಳನುಗ್ಗಿದ್ದರಿಂದ ಗರ್ಭಗುಡಿ ಕೆಲಕಾಲ ಜಲಾವೃತವಾಗಿತ್ತು. ನಂತರ ಸಿಬ್ಬಂದಿ ಹರಸಾಹಸಪಟ್ಟು ನೀರನ್ನೆಲ್ಲ ಹೊರಹಾಕಿದ್ದಾರೆ. ಪ್ರತಿ ವರ್ಷ ಮಳೆಗಾಲದಲ್ಲಿ ಕೆಲವು ಸಲ ಇಂತಹ ಸಮಸ್ಯೆಯಾಗುತ್ತಿದೆ.
ನಿಮ್ಮ ಕಾಮೆಂಟ್ ಬರೆಯಿರಿ