ಮೋದಿ 3.0 ಸಚಿವ ಸಂಪುಟದ ಸಂಭಾವ್ಯ ಹೆಸರುಗಳು ; ರಾಜನಾಥ ಸಿಂಗ್‌ ರಿಂದ ಚಿರಾಗ ಪಾಸ್ವಾನ್ ವರೆಗೆ : ಪಕ್ಷವಾರು, ರಾಜ್ಯವಾರು ಪಟ್ಟಿ

ನವದೆಹಲಿ: ನರೇಂದ್ರ ಮೋದಿ ಅವರು ರಾಷ್ಟ್ರಪತಿ ಭವನದಲ್ಲಿ ಇಂದು ಭಾನುವಾರ ಸಂಜೆ 7:15 ಕ್ಕೆ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಮೊದಲು ತಮ್ಮ ಸಂಭಾವ್ಯ ಕ್ಯಾಬಿನೆಟ್ ಸಚಿವರು ಮತ್ತು ಸಂಸದರನ್ನು ಭೇಟಿಯಾಗಲಿದ್ದಾರೆ. ರಾಜನಾಥ ಸಿಂಗ್ ಮತ್ತು ನಿತಿನ್ ಗಡ್ಕರಿ ಸೇರಿದಂತೆ ಮೋದಿ 3.0 ಕ್ಯಾಬಿನೆಟ್‌ನಲ್ಲಿ ಸಚಿವರಾಗುವವರು ಈಗಾಗಲೇ ಕರೆಗಳನ್ನು ಸ್ವೀಕರಿಸಲು ಪ್ರಾರಂಭಿಸಿದ್ದಾರೆ.
ನರೇಂದ್ರ ಮೋದಿಯವರೊಂದಿಗೆ ಪ್ರಮಾಣ ವಚನ ಸ್ವೀಕರಿಸಲಿರುವ ಎಲ್ಲಾ ಸಂಸದರನ್ನು ಮೋದಿ ಅವರ ನಿವಾಸಕ್ಕೆ ಬೆಳಿಗ್ಗೆ 11:30 ಕ್ಕೆ ಚಹಾ ಕುಡಿಯಲು ಆಹ್ವಾನಿಸಲಾಗಿದೆ.ಮೂಲಗಳ ಪ್ರಕಾರ, ಕಳೆದ ಸರ್ಕಾರದ ಸಚಿವ ಸಂಪುಟದ 10 ಸಚಿವರು ಮುಂದುವರಿಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಮಿತ್ ಶಾ ರಾಜನಾಥ ಸಿಂಗ್, ನಿತಿನ್ ಗಡ್ಕರಿ, ಎಸ್ ಜೈಶಂಕರ, ನಿರ್ಮಲಾ ಸೀತಾರಾಮನ್, ಧರ್ಮೇಂದ್ರ ಪ್ರಧಾನ, ಪಿಯೂಷ್ ಗೋಯಲ್, ಹರ್ದೀಪ್ ಸಿಂಗ್ ಪುರಿ ಮತ್ತು ಅಶ್ವಿನಿ ವೈಷ್ಣವ ಅವರು ಕೇಂದ್ರ ಸಚಿವರಾಗಿ ಮುಂದುವರಿಯಲಿದ್ದು, ಅನುರಾಗ್ ಠಾಕೂರ್ ಅವರನ್ನು ಕೈಬಿಡಲಾಗಿದೆ. ಬಿಜೆಪಿಯ ಹಿರಿಯ ನಾಯಕ ರಾಜನಾಥ್ ಸಿಂಗ್ ಅವರು ಕೇಂದ್ರ ರಕ್ಷಣಾ ಸಚಿವರಾಗಿ ಮುಂದುವರಿಯುವ ಸಾಧ್ಯತೆಯಿದೆ.
ಬಿಜೆಪಿಯು ಎನ್‌ಡಿಎ ಸರ್ಕಾರದ ಕ್ಯಾಬಿನೆಟ್‌ಗೆ ಹೊಸ ಮುಖಗಳನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ. ಏಕೆಂದರೆ ಹಿಂದಿನ ಮೋದಿ ಸರ್ಕಾರದಲ್ಲಿ ಸಚಿವರಾಗಿದ್ದ ಸುಮಾರು 20 ಅಭ್ಯರ್ಥಿಗಳು ಲೋಕಸಭೆ ಚುನಾವಣೆಯಲ್ಲಿ ಸೋತಿದ್ದಾರೆ.

ಪ್ರಧಾನಿ ಮೋದಿಯವರ ಟೀ ಪಾರ್ಟಿಯಲ್ಲಿ ಭಾಗವಹಿಸಿದ ಸಂಭಾವ್ಯ ಸಚಿವರ ರಾಜ್ಯವಾರು ಪಟ್ಟಿ…
ಗುಜರಾತ್
ಅಮಿತ್ ಶಾ (ಬಿಜೆಪಿ)
ಎಸ್. ಜೈಶಂಕರ (ಬಿಜೆಪಿ)
ಮನ್ಸುಖ್ ಮಾಂಡವಿಯಾ (ಬಿಜೆಪಿ)
ಸಿ.ಆರ್. ಪಾಟೀಲ (ಬಿಜೆಪಿ)
ನಿಮುಬೆನ್ ಬಾಂಭಾನಿಯಾ (ಬಿಜೆಪಿ)
ಒಡಿಶಾ
ಅಶ್ವಿನಿ ವೈಷ್ಣವ (ಬಿಜೆಪಿ)
ಧರ್ಮೇಂದ್ರ ಪ್ರಧಾನ (ಬಿಜೆಪಿ)
ಜುಯಲ್ ಓರಂ (ಬಿಜೆಪಿ)
ಕರ್ನಾಟಕ
ನಿರ್ಮಲಾ ಸೀತಾರಾಮನ್ (ಬಿಜೆಪಿ)
ಎಚ್. ಡಿ. ಕುಮಾರಸ್ವಾಮಿ (ಜೆಡಿಎಸ್)
ಪ್ರಹ್ಲಾದ ಜೋಶಿ (ಬಿಜೆಪಿ)
ಶೋಭಾ ಕರಂದ್ಲಾಜೆ (ಬಿಜೆಪಿ)
ವಿ ಸೋಮಣ್ಣ (ಬಿಜೆಪಿ)
ಮಹಾರಾಷ್ಟ್ರ
ಪಿಯೂಷ್ ಗೋಯಲ್ (ಬಿಜೆಪಿ)
ನಿತಿನ್ ಗಡ್ಕರಿ (ಬಿಜೆಪಿ)
ಪ್ರತಾಪ ರಾವ್ ಜಾಧವ್ (ಶಿವಸೇನೆ)
ರಕ್ಷಾ ಖಡ್ಸೆ (ಬಿಜೆಪಿ)
ರಾಮ್ ದಾಸ್ ಅಠವಳೆ (ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ)
ಗೋವಾ
ಶ್ರೀಪಾದ ನಾಯಕ್ (ಬಿಜೆಪಿ)
ಜಮ್ಮು ಮತ್ತು ಕಾಶ್ಮೀರ
ಜಿತೇಂದ್ರ ಸಿಂಗ್ (ಬಿಜೆಪಿ)
ಹಿಮಾಚಲ 
ಜೆ.ಪಿ. ನಡ್ಡಾ (ಬಿಜೆಪಿ)
ಮಧ್ಯಪ್ರದೇಶ
ಶಿವರಾಜ ಸಿಂಗ್ ಚೌಹಾಣ (ಬಿಜೆಪಿ)
ಜ್ಯೋತಿರಾದಿತ್ಯ ಸಿಂಧಿಯಾ (ಬಿಜೆಪಿ)
ಸಾವಿತ್ರಿ ಠಾಕೂರ್ (ಬಿಜೆಪಿ)
ವೀರೇಂದ್ರ ಕುಮಾರ (ಬಿಜೆಪಿ)
ಉತ್ತರ ಪ್ರದೇಶ
ರಾಜನಾಥ ಸಿಂಗ್ (ಬಿಜೆಪಿ)
ಹರ್ದೀಪ್ ಸಿಂಗ್ ಪುರಿ (ಬಿಜೆಪಿ)
ಜಯಂತ ಚೌಧರಿ (RLD)
ಜಿತಿನ್ ಪ್ರಸಾದ (ಬಿಜೆಪಿ)
ಪಂಕಜ ಚೌಧರಿ (ಬಿಜೆಪಿ)
ಬಿ.ಎಲ್. ವರ್ಮಾ (ಬಿಜೆಪಿ)
ಅನುಪ್ರಿಯಾ ಪಟೇಲ್ (ಅಪ್ನಾ ದಳ-ಸೋನಿಲಾಲ್)
ಕಮಲೇಶ ಪಾಸ್ವಾನ್ (ಬಿಜೆಪಿ)
ಎಸ್‌.ಪಿ, ಸಿಂಗ್ ಬಘೇಲ್ (ಬಿಜೆಪಿ)
ಬಿಹಾರ
ಚಿರಾಗ್ ಪಾಸ್ವಾನ್ (ಲೋಕ ಜನಶಕ್ತಿ ಪಕ್ಷ-ರಾಮ ವಿಲಾಸ)
ಗಿರಿರಾಜ್ ಸಿಂಗ್ (ಬಿಜೆಪಿ)
ಜಿತನ್ ರಾಮ್ ಮಾಂಝಿ (ಹಿಂದೂಸ್ತಾನಿ ಅವಾಮ್ ಮೋರ್ಚಾ)
ರಾಮನಾಥ ಠಾಕೂರ್ (ಜೆಡಿಯು)
ಲಲ್ಲನ್‌ ಸಿಂಗ್ (ಜೆಡಿಯು)
ನಿತ್ಯಾನಂದ ರೈ
ರಾಜಭೂಷಣ
ಸತೀಶ್ ದುಬೆ

ಅರುಣಾಚಲ
ಕಿರಣ್ ರಿಜಿಜು (ಬಿಜೆಪಿ)
ರಾಜಸ್ಥಾನ
ಗಜೇಂದ್ರ ಸಿಂಗ್ ಶೇಖಾವತ್ (ಬಿಜೆಪಿ)
ಅರ್ಜುನ ರಾಮ ಮೇಘವಾಲ್ (ಬಿಜೆಪಿ)
ಭೂಪೇಂದರ ಯಾದವ್ (ಬಿಜೆಪಿ)
ಭಗೀರಥ ಚೌಧರಿ (ಬಿಜೆಪಿ)
ಹರಿಯಾಣ
ಮನೋಹರಲಾಲ ಖಟ್ಟರ್ (ಬಿಜೆಪಿ)
ರಾವ್ ಇಂದರ್ಜೀತ್ ಸಿಂಗ್ (ಬಿಜೆಪಿ)
ಕೇರಳ
ಸುರೇಶ್ ಗೋಪಿ (ಬಿಜೆಪಿ)
ತೆಲಂಗಾಣ
ಜಿ ಕಿಶನ್ ರೆಡ್ಡಿ (ಬಿಜೆಪಿ)
ಬಂಡಿ ಸಂಜಯ (ಬಿಜೆಪಿ)
ತಮಿಳುನಾಡು
ಎಲ್ ಮುರುಗನ್ ಅಥವಾ ಅಣ್ಣಾಮಲೈ  (ಬಿಜೆಪಿ)
ಜಾರ್ಖಂಡ್
ಚಂದ್ರಶೇಖರ್ ಚೌಧರಿ (ಎಜೆಎಸ್‌ಯು)
ಅನ್ನಪೂರ್ಣ ದೇವಿ (ಬಿಜೆಪಿ)
ಆಂಧ್ರಪ್ರದೇಶ
ಡಾ. ಚಂದ್ರಶೇಖರ್ ಪೆಮ್ಮಸಾನಿ (ಟಿಡಿಪಿ)
ರಾಮ್ ಮೋಹನ್ ನಾಯ್ಡು ಕಿಂಜರಾಪು (ಟಿಡಿಪಿ)
ಶ್ರೀನಿವಾಸ ವರ್ಮ (ಬಿಜೆಪಿ)
ಪಶ್ಚಿಮ ಬಂಗಾಳ
ಶಂತನು ಠಾಕೂರ್
ಸುಕಾಂತ ಮಜುಂದಾರ್
ಪಂಜಾಬ್
ರವನೀತ್ ಸಿಂಗ್ ಬಿಟ್ಟು
ಅಸ್ಸಾಂ
ಸರ್ಬಾನಂದ ಸೋನೋವಾಲ್ (ಬಿಜೆಪಿ)
ಪಬಿತ್ರಾ ಮಾರ್ಗರಿಟಾ
ಉತ್ತರಾಖಂಡ
ಅಜಯ ತಮ್ತಾ
ದೆಹಲಿ
ಹರ್ಷ್ ಮಲ್ಹೋತ್ರಾ

ಪ್ರಮುಖ ಸುದ್ದಿ :-   ಬಿಜೆಪಿಯ ಭರ್ತೃಹರಿ ಮಹತಾಬ್ ಲೋಕಸಭೆಯ ಹಂಗಾಮಿ ಸ್ಪೀಕರ್

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement