ವೀಡಿಯೊ : 7 ದರೋಡೆಕೋರರ ಗನ್‌ ಶಾಟ್‌ ಎದುರಿಸಿ ₹ 4 ಕೋಟಿ ಚಿನ್ನಾಭರಣ ದರೋಡೆ ವಿಫಲಗೊಳಿಸಿದ ಏಕೈಕ ಪೊಲೀಸ್‌ ಅಧಿಕಾರಿ-ವೀಕ್ಷಿಸಿ

ಕೋಲ್ಕತ್ತಾ : ಕಳೆದ ವಾರ ಪಶ್ಚಿಮ ಬಂಗಾಳದ ರಾಣಿಗಂಜ್‌ನ ಆಭರಣ ಮಳಿಗೆಯೊಂದರಲ್ಲಿ ಏಳು ಸದಸ್ಯರ ದರೋಡೆ ಗ್ಯಾಂಗ್ ನಡೆಸಿದ ₹ 4 ಕೋಟಿ ದರೋಡೆ ಯತ್ನವನ್ನು ಪೊಲೀಸ್ ಅಧಿಕಾರಿಯ ಧೈರ್ಯವು ವಿಫಲಗೊಳಿಸಿದೆ. ಅಂಗಡಿಯ ಹೊರಭಾಗದಲ್ಲಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಹಿಡಿದ ದೃಶ್ಯಗಳು ಸಬ್-ಇನ್ಸ್‌ಪೆಕ್ಟರ್ ಮೇಘನಾದ ಮೊಂಡಲ್ ಅವರು ಆಭರಣ ಅಂಗಡಿ ಸಮೀಪದ ವಿದ್ಯುತ್ ಕಂಬದ ಮರೆಯಲ್ಲಿ ನಿಂತು ದರೋಡೆಕೋರರೊಂದಿಗೆ ಮುಖಾಮುಖಿ ಗುಂಡಿನ ಕಾಳಗ ನಡೆಸಿದ್ದಾರೆ. ಘಟನೆಯ ದೃಶ್ಯಾವಳಿ ಸೆರೆಯಾಗಿರುವುದುನ್ನು ಪಶ್ಚಿಮ ಬಂಗಾಳ ಪೊಲೀಸರು ಎಕ್ಸ್‌ ನಲ್ಲಿ ಹಂಚಿಕೊಂಡಿದ್ದಾರೆ. ದರೋಡೆಕೋರರು ತಾವು ಲೂಟಿ ಮಾಡಿದ ಅರ್ಧಷ್ಟು ಚಿನ್ನಾಭರಣಗಳನ್ನು ಬಿಟ್ಟು ಓಡಿಹೋಗುವ ಮೊದಲು ಈ ಎನ್ಕೌಂಟರಿನಲ್ಲಿ ಕನಿಷ್ಠ 20 ಸುತ್ತು ಗುಂಡು ಹಾರಿಸಿದ್ದಾರೆ ಎಂದು ಅವರು ಹೇಳಿದ್ದಾರೆ. ಆರೋಪಿಗಳಲ್ಲಿ ಒಬ್ಬನನ್ನು ಬಂಧಿಸಲಾಗಿದ್ದು, ಉಳಿದವರಿಗಾಗಿ ಶೋಧ ನಡೆಯುತ್ತಿದೆ.
ಭಾನುವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ಏಳು ಮಂದಿ ಮುಸುಕುಧಾರಿ ದರೋಡೆಕೋರರು, ಪಿಸ್ತೂಲ್, ಮಷಿನ್ ಗನ್ ಮತ್ತು ರೈಫಲ್ ಹಿಡಿದು ಪ್ರಮುಖ ಆಭರಣ ಮಳಿಗೆಗೆ ನುಗ್ಗಿದ್ದಾರೆ. ಅವರು ಆಯುಧ ಸಮೇತ ಒಳನುಗ್ಗಿದ್ದರಿಂದ ಅಂಗಡಿ ಮಾಲೀಕರು ಮತ್ತು ಗ್ರಾಹಕರು ಭಯಭೀತರಾದರು. ಕೆಲವೇ ನಿಮಿಷಗಳಲ್ಲಿ ದರೋಡೆಕೋರರು ₹ 4 ಕೋಟಿಗೂ ಅಧಿಕ ಮೌಲ್ಯದ ಆಭರಣಗಳನ್ನು ದೋಚಿದ್ದಾರೆ.

ಆದರೆ ಪೊಲೀಸ್ ಔಟ್‌ಪೋಸ್ಟ್‌ನ ಪ್ರಭಾರ ಅಧಿಕಾರಿ ಮೇಘನಾದ ಮೊಂಡಲ್ ಅವರು ಕೆಲವು ವೈಯಕ್ತಿಕ ಕೆಲಸಗಳಿಗಾಗಿ ಘಟನಾ ಸ್ಥಳದ ಸಮೀಪದಲ್ಲಿಯೇ ಇದ್ದರು. ಅವರು ಸಮವಸ್ತ್ರದಲ್ಲಿ ಇರಲಿಲ್ಲ, ಸಾಮಾನ್ಯ ಡ್ರೆಸ್‌ನಲ್ಲಿ ಇದ್ದರು, ಆದರೆ ಸರ್ವಿಸ್ ರಿವಾಲ್ವರ್ ಅವರ ಬಳಿಯೇ ಇತ್ತು. ಜ್ಯುವೆಲ್ಲರಿ ಅಂಗಡಿಯ ಬಳಿ ಹೆದರಿಕೆಯ ವಾತಾವರಣ, ಭಯಭೀತ ಜನರನ್ನು ಗಮನಿಸಿದ ಪೊಲೀಸ್ ಅಧಿಕಾರಿ ಏನೂ ನಡೆದಿದೆ ಎಂದು ತಕ್ಷಣವೇ ಗ್ರಹಿಸಿದರು.
ಮೊಂಡಲ್ ಅಂಗಡಿಯ ಪಕ್ಕದ ವಿದ್ಯುತ್ ಕಂಬದ ಹಿಂದೆ ನಿಂತರು ಮತ್ತು ಅವರ ರಿವಾಲ್ವರ್ ಅನ್ಲಾಕ್ ಮಾಡಿ ಮುಂದಿನ ಎನ್‌ಕೌಂಟರ್‌ಗೆ ಸಜ್ಜಾದರು. ಈ ವೇಳೆ ಅಂಗಡಿಯ ಹೊರಗೆ ಕಾವಲು ಕಾಯುತ್ತಿದ್ದ ದರೋಡೆಕೋರರಲ್ಲಿ ಒಬ್ಬಾತ ಆತನನ್ನು ಗಮನಿಸಿ ಇತರರಿಗೆ ಎಚ್ಚರಿಕೆ ನೀಡಿದ ನಂತರ ಇವರತ್ತ ಗುಂಡು ಹಾರಿಸಿದ. ಮುಂದಿನ ಸುಮಾರು 30 ಸೆಕೆಂಡುಗಳ ಕಾಲ, ಪೊಲೀಸ್ ಅಧಿಕಾರಿಯು ದರೋಡೆಕೋರರಿಂದ ಗುಂಡುಗಳ ಸುರಿಮಳೆಯನ್ನು ಧೈರ್ಯದಿಂದ ಎದುರಿಸಿದರು. ಹಾಗೂ ದರೋಡೆಕೋರರತ್ತ ಗುಂಡು ಹಾರಿಸಿದರು. ಅವರು ಹಾರಿಸಿದ ಒಂದು ಗುಂಡು ದರೋಡೆಕೋರನಿಗೆ ತಗುಲಿತು ಮತ್ತು ಆತ ತಕ್ಷಣವೇ ನೆಲಕ್ಕೆ ಕುಸಿದು ಬಿದ್ದಿದ್ದಾನೆ. , ಅಷ್ಟೊತ್ತಿಗಾಗಲೇ ಇತರ ದರೋಡೆಕೋರರು ಒಂದೇ ಬದಿಗೆ ಸೇರಿಕೊಂಡು ಗುಂಡು ಹಾರಿಸಿದರು.

ಪ್ರಮುಖ ಸುದ್ದಿ :-   ಅಬಕಾರಿ ನೀತಿ ಹಗರಣ: ದೆಹಲಿ ಸಿಎಂ ಅರವಿಂದ ಕೇಜ್ರಿವಾಲಗೆ ಜಾಮೀನು

ಆದರೆ ಪೊಲೀಸ್‌ ಅಧಿಕಾರಿ ಮೊಂಡಲ್ ಧೈರ್ಯ ಕಳೆದುಕೊಳ್ಳಲಿಲ್ಲ ಹಾಗೂ ತಾವಿದ್ದ ವಿದ್ಯುತ್‌ ಕಂಬದ ಹಿಂಬದಿಯಿಂದ ಕದಲೂ ಇಲ್ಲ. ಏಕಾಂಗಿ ಅಧಿಕಾರಿಯ ಧೈರ್ಯದಿಂದ ಅವರತ್ತ ಗುಂಡು ಹಾರಿಸಿದರು. ಹಾಗೂ ಅವರು ಹಾರಿಸಿದ ಗುಂಡನ್ನು ಎದುರಿಸಿದರು. ಈ ವೇಳೆಗೆ ಗಾಯಗೊಂಡಿದ್ದ ತಮ್ಮ ಸಂಗಾತಿಗೆ ಬೈಕ್ ನಲ್ಲಿ ಕೂಡ್ರಿಸಿಕೊಂಡು ಸುಮಾರು ₹ 1.8 ಕೋಟಿ ಮೌಲ್ಯದ ಚಿನ್ನಾಭರಣಗಳೊಂದಿಗೆ ದರೋಡೆಕೋರರು ಪರಾರಿದರು. ಪಾರಾಗುವ ಯತ್ನದಲ್ಲಿ ತಮ್ಮ ಒಂದು ಬೈಕ್ ಹಾಗೂ ದರೋಡೆ ಮಾಡಿದ್ದ ಸುಮಾರು 2.5 ಕೋಟಿ ರೂಪಾಯಿ ಮೌಲ್ಯದ ಆಭರಣಗಳು, ಎರಡು ಮೂಟೆಗಳು ಮತ್ತು 42 ಸುತ್ತು ಗುಂಡುಗಳನ್ನು ಬಿಟ್ಟು ಜೀವತಪ್ಪಿಸಿಕೊಂಡು ಪರಾರಿಯಾದರು.
ಆದರೆ ಪೊಲೀಸ್ ಅಧಿಕಾರಿ ಅಷ್ಟಕ್ಕೇ ಸುಮ್ಮನಾಗಲಿಲ್ಲ. ಗುಂಡು ಹಾರಿಸುತ್ತಲೇ ಓಡಿಹೋಗುತ್ತಿದ್ದ ದರೋಡೆಕೋರರ ಹಿಂದೆ ಓಡಲು ಪ್ರಾರಂಭಿಸಿದರು. ಮೊಂಡಲ್ ಅವರು ದ್ವಿಚಕ್ರ ವಾಹನಗಳನ್ನು ಹಿಡಿಯಲು ಸಾಧ್ಯವಿಲ್ಲ ಎಂದು ತಿಳಿದಾಗ, ಅವರು ಸುತ್ತಮುತ್ತಲಿನ ಪೊಲೀಸ್ ಸಿಬ್ಬಂದಿಗೆ ಮಾಹಿತಿ ನೀಡಿದರು. ನೆರೆಯ ಜಾರ್ಖಂಡ್‌ಗೂ ಎಚ್ಚರಿಕೆ ರವಾನಿಸಲಾಯಿತು.

ಇದೇ ವೇಳೆ ದರೋಡೆಕೋರರು ಕಾರಿನ ಚಾಲಕನ ಮೇಲೆ ಗುಂಡು ಹಾರಿಸಿ ವಾಹನವನ್ನು ಅಪಹರಿಸಿದ್ದಾರೆ. ಗುಂಡಿನ ದಾಳಿಯಲ್ಲಿ ಚಾಲಕ ಮತ್ತು ಪಾದಚಾರಿ ಗಾಯಗೊಂಡಿದ್ದಾರೆ. ಈ ವೇಳೆ ಜಾರ್ಖಂಡ್ ಪೊಲೀಸರು ಕಾರ್ಯಾಚರಣೆಗಿಳಿದು ವಾಹನವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಮತ್ತು ಆರೋಪಿಗಳಲ್ಲಿ ಒಬ್ಬನಾದ ಸೂರಜ್ ಸಿಂಗ್‌ ಎಂಬಾತನನ್ನು ಕಸ್ಟಡಿಗೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಹೆಚ್ಚಿನ ತನಿಖೆ ನಂತರ ಮೊಂಡಲ ಅವರ ಗುಂಡೇಟು ತಗುಲಿ ಗಾಯಗೊಂಡಿದ್ದ ದರೋಡೆಕೋರ ಸೋನು ಸಿಂಗ್‌ ಎಂಬಾತನನ್ನು ಪೊಲೀಸರು ಬಿಹಾರದ ಸಿವಾನ್‌ನಲ್ಲಿ ಬಂಧಿಸಿದರು. ಬಂಗಾಳ ಪೊಲೀಸರ ಪ್ರಕಾರ, ಕಸ್ಟಡಿಯಲ್ಲಿರುವ ಇಬ್ಬರು ಆರೋಪಿಗಳನ್ನು ವಿಚಾರಣೆ ನಡೆಸಲಾಗುತ್ತಿದೆ. ಮತ್ತು ಶೀಘ್ರದಲ್ಲೇ ಇತರರನ್ನು ಪತ್ತೆಹಚ್ಚುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಲೂಟಿ ಮಾಡಿದ್ದ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗುವುದು ಎಂದು ಪೊಲೀಸರು ಭರವಸೆ ನೀಡಿದ್ದಾರೆ.
ಅವರ ಸರ್ವಿಸ್ ರಿವಾಲ್ವರ್ ಈಗ ಖಾಲಿಯಾಗಿದೆ. ಎನ್‌ಕೌಂಟರಿನಲ್ಲಿ ಅವರ ಬೈಕಿಗೆ ಬುಲೆಟ್ ಹೋಲ್ ಆಗಿದೆ. ಅವರು, ನಾನು ನನ್ನ ಕರ್ತವ್ಯವನ್ನು ಮಾಡಿದ್ದೇನೆ ಎಂದು ಹೇಳಿದ್ದಾರೆ. ಮೊಂಡಲ್ ಅವಧ ಸಾಹಸಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.

ಪ್ರಮುಖ ಸುದ್ದಿ :-   ಬಿಜೆಪಿಯ ಭರ್ತೃಹರಿ ಮಹತಾಬ್ ಲೋಕಸಭೆಯ ಹಂಗಾಮಿ ಸ್ಪೀಕರ್

5 / 5. 4

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement