ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಬೆಂಗಳೂರಲ್ಲಿ ಅಪಾರ್ಟ್ಮೆಂಟ್‌ ನಿಂದ ಬಿದ್ದು ಸಾವು ; ಆತ್ಮಹತ್ಯೆ ಶಂಕೆ

ಬೆಂಗಳೂರು: ಕ್ರಿಕೆಟಿಗ, ಟೀಂ ಇಂಡಿಯಾ (Team India) ಮಾಜಿ ಆಟಗಾರ ಕರ್ನಾಟಕದ ವೇಗಿ ಡೇವಿಡ್‌ ಜಾನ್ಸನ್‌ (52) ಅಪಾರ್ಟ್ಮೆಂಟ್‌ನಿಂದ ಬಿದ್ದು ಸಾವಿಗೀಡಾಗಿದ್ದು, ಅವರು ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಮಾಜಿ ಕ್ರಿಕೆಟಿಗ ಡೇವಿಡ್ ಜಾನ್ಸನ್ ಕೊತ್ತನೂರು ಬಳಿ ಇರುವ ಎಸ್‌ಎಲ್‌ವಿ ಪ್ಯಾರಡೈಸ್‌ ಅಪಾರ್ಟ್ಮೆಂಟ್‌ನಲ್ಲಿ 4ನೇ ಮಹಡಿಯಿಂದ ಜಿಗಿದಿದ್ದಾರೆ ಎನ್ನಲಾಗಿದ್ದು, ತಕ್ಷಣವೇ ಅವರನ್ನ ಆಸ್ಪತ್ರೆಗೆ ದಾಖಲಿಸಿದ್ದಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಡೇವಿಡ್ ಜಾನ್ಸನ್ ಅವರು ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡಿರುವುದಕ್ಕೆ ನಿಖರ ಕಾರಣ ತಿಳಿದಿಲ್ಲವಾದರೂ ಮೇಲ್ನೋಟಕ್ಕೆ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ.

ಸ್ಥಳಕ್ಕೆ ಕೊತ್ತನೂರು ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ.
1971ರ ಅಕ್ಟೋಬರ್ 16ರಂದು ಅರಸೀಕೆರೆಯಲ್ಲಿ ಜನಿಸಿದ್ದ ಡೇವಿಡ್ ಜೂಡ್ ಜಾನ್ಸನ್ (David Jude Johnson) ಟೀಂ ಇಂಡಿಯಾ ಪರವಾಗಿ ಆಡಿದ್ದಾರೆ. ಅಲ್ಲದೇ ರಣಜಿಯಲ್ಲಿ ಬೆಳಗಾವಿ ಪ್ಯಾಂಥರ್ಸ್, ಕರ್ನಾಟಕ ತಂಡದ ಪರವಾಗಿಯೂ ಆಡಿದ್ದಾರೆ. ರಣಜಿಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದಾರೆ. ಡೇವಿಡ್‌ ಜಾನ್ಸನ್ ಭಾರತದ ಕ್ರಿಕೆಟ್‌ ತಂಡದ 2 ಟೆಸ್ಟ್ ಪಂದ್ಯ ಆಡಿದ್ದು, 3 ವಿಕೆಟ್ ಪಡೆದಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 39 ಪಂದ್ಯಗಳನ್ನಾಡಿದ್ದು 3,579 ರನ್ ಗಳಿಸಿ, 125 ವಿಕೆಟ್ ಪಡೆದಿದ್ದಾರೆ. ಲಿಸ್ಟ್-ಎ ಕ್ರಿಕೆಟ್‌ನಲ್ಲಿ 33 ಪಂದ್ಯಗಳನ್ನಾಡಿ 1,293 ರನ್ ಗಳಿಸಿ, 41 ವಿಕೆಟ್ ಪಡೆದ ಸಾಧನೆಯನ್ನು ಮಾಡಿದ್ದರು.

ಪ್ರಮುಖ ಸುದ್ದಿ :-   ಇಂದು ಸಿಎಂ ಆಗಿ ಡಿಕೆ ಶಿವಕುಮಾರ ಪ್ರಮಾಣ ವಚನ: ಪರಮೇಶ್ವರ ಡಿಸಿಎಂ ; 13 ಶಾಸಕರಿಗೆ ಸಚಿವ ಸ್ಥಾನ ; ಪಟ್ಟಿ ಇಲ್ಲಿದೆ

ರಣಜಿ ತಂಡದಲ್ಲಿ ಕರ್ನಾಟಕ ಪರ 90ರ ಕಾಲಘಟ್ಟದಲ್ಲಿ ಅತಿವೇಗದ ಬೌಲಿಂಗ್ ಮಾಡುತ್ತಿದ್ದ ಜಾನ್ಸನ್, 1995-96ರಲ್ಲಿ ಕೇರಳದ ವಿರುದ್ಧದ ಪಂದ್ಯದಲ್ಲಿ ಹತ್ತು ವಿಕೆಟ್​ ಕಿತ್ತ ಸಾಧನೆ ಮಾಡಿದ್ದರು. 90ರ ಕಾಲಘಟ್ಟದಲ್ಲಿ ವೇಗದ ಬೌಲಿಂಗ್‌ಗೆ ಹೆಸರುವಾಸಿಯಾಗಿದ್ದರು. ಆಸೀಸ್​ ವಿರುದ್ಧದ ಪಂದ್ಯದಲ್ಲಿ ಗಂಟೆಗೆ 157.8 ಕಿಮೀ ವೇಗದಲ್ಲಿ ಬೌಲ್‌ ಮಾಡಿ ಗಮನ ಸೆಳೆದಿದ್ದರು ಎಂದು ಹೇಳಲಾಗಿದೆ. ತಮ್ಮ ಮನೆಯ ಸಮೀಪದಲ್ಲಿ ಕ್ರಿಕೆಟ್ ಅಕಾಡೆಮಿ ನಡೆಸುತ್ತಿದ್ದದ್ದರು.
ದೇವಿಡ್‌ ಜಾನ್ಸನ್‌ ನಿಧನಕ್ಕೆ ಬಾರತದ ಅಗ್ರಮಾನ್ಯ ಬೌಲರ್‌ ಅನಿಲ ಕುಂಬ್ಳೆ, ಡಿ.ಗಣೇಶ ಮೊದಲಾದವರು ಸಂತಾಪ ಸೂಚಿಸಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement