ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ವೇಳೆ ಉದ್ಧವ್ ಠಾಕ್ರೆ ʼಎಂವಿಎ ಸಿಎಂ ಅಭ್ಯರ್ಥಿʼ ಮಾಡುವ ಸಲಹೆ ಒಪ್ಪದ ಶರದ್‌ ಪವಾರ್

ಮುಂಬೈ : ಮಹಾರಾಷ್ಟ್ರದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಪಕ್ಷದ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರನ್ನು ಮಹಾ ವಿಕಾಸ್ ಅಘಾಡಿ (ಎಂವಿಎ) ಯ ಮುಖ್ಯಮಂತ್ರಿ ಮುಖವಾಗಿ ಬಿಂಬಿಸಬೇಕು ಎಂದು ಶಿವಸೇನೆ (ಯುಬಿಟಿ) ಒತ್ತಾಯಿಸುತ್ತಲೇ ಇದ್ದರೂ, ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್ ಶನಿವಾರ ಒಬ್ಬ ವ್ಯಕ್ತಿಯನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸುವ ಸಲಹೆಯನ್ನು ತಿರಸ್ಕರಿಸಿದ್ದಾರೆ.
ಕೊಲ್ಲಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪವಾರ್, “ನಮ್ಮ ಮೈತ್ರಿಯೇ ನಮ್ಮ ಸಾಮೂಹಿಕ ಮುಖವಾಗಿದೆ. ಒಬ್ಬ ವ್ಯಕ್ತಿ ನಮ್ಮ ಮುಖ್ಯಮಂತ್ರಿ ಮುಖವಾಗಲು ಸಾಧ್ಯವಿಲ್ಲ. ಸಾಮೂಹಿಕ ನಾಯಕತ್ವವೇ ನಮ್ಮ ಸೂತ್ರ’’ ಎಂದು ಹೇಳಿದ್ದಾರೆ. ಉದ್ಧವ್‌ ಠಾಕ್ರೆ ಅವರನ್ನು ಮಹಾ ವಿಕಾಸ್ ಅಘಾಡಿ ಮೈತ್ರಿಕೂಟದ ಮುಖ್ಯಮಂತ್ರಿ ಮುಖ ಎಂದು ಬಿಂಬಿಸಬೇಕೆಂಬ ಶಿವಸೇನಾ ಸಂಸದ ಸಂಜಯ್ ರಾವತ್ ಅವರ ಒತ್ತಾಯದ ಬಗ್ಗೆ ಕೇಳಿದಾಗ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ” ಮಹಾ ವಿಕಾಸ್ ಅಘಾಡಿ ಮೈತ್ರಿಕೂಟದ ಮೂರು ಪಕ್ಷದವರು ಈ ವಿಷಯದಲ್ಲಿ ನಿರ್ಧಾರ ತೆಗೆದುಕೊಳ್ಳುತ್ತಾರೆ” ಎಂದು ಅವರು ಹೇಳಿದರು.

ಮಹಾ ವಿಕಾಸ್ ಅಘಾಡಿಯಲ್ಲಿ ಎಡ ಪಕ್ಷಗಳು ಮತ್ತು ಪ್ರಧಾನಿ ನರೇಂದ್ರ ಮೋದಿಯವರನ್ನು ವಿರೋಧಿಸುವ ಪಕ್ಷಗಳನ್ನು ಸೇರಿಸಿಕೊಳ್ಳುವಂತೆ ಕರೆ ನೀಡಿದ ಪವಾರ್, “ಇತ್ತೀಚಿನ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ, ಭಾರತೀಯ ರೈತರು ಮತ್ತು ಕಾರ್ಮಿಕರ ಪಕ್ಷ, ಎಎಪಿ (AAP) ಮತ್ತು ಕಮ್ಯುನಿಸ್ಟ್ ಪಕ್ಷಗಳು ನಮಗೆ ಸಹಾಯ ಮಾಡಿದವು. ಮಹಾ ವಿಕಾಸ್ ಅಘಾಡಿ(MVA)ಯಲ್ಲಿ ಮೂರು ಪಕ್ಷಗಳಿದ್ದರೂ, ಮೋದಿ ಅವರನ್ನು ವಿರೋಧಿಸುವವರೆಲ್ಲರೂ ಎಂವಿಎ ಭಾಗವಾಗಬೇಕು. ಮುಖ್ಯಮಂತ್ರಿ ಸ್ಥಾನಕ್ಕೆ ಸಂಬಂಧಿಸಿದಂತೆ ಏನೇ ನಿರ್ಧಾರ ತೆಗೆದುಕೊಳ್ಳಬೇಕಿದ್ದರೂ ಚರ್ಚೆ ನಡೆಸಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡ ನಂತರ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದರು.

ಪ್ರಮುಖ ಸುದ್ದಿ :-   ಏಪ್ರಿಲ್ 23 ರಂದು ಪಾಕಿಸ್ತಾನ ಬಂಧಿಸಿದ್ದ ಬಿಎಸ್‌ಎಫ್ ಯೋಧ ಬಿಡುಗಡೆ

ಏತನ್ಮಧ್ಯೆ, ರಾವತ್‌ ಅವರು ಶನಿವಾರ ಮತ್ತೊಮ್ಮೆ ಎಂವಿಎ ಮೈತ್ರಿಕೂಟಕ್ಕೆ ಮುಖ್ಯಮಂತ್ರಿ ಅಭ್ಯರ್ಥಿ ಯಾರೆಂದು ಬಹಿರಂಗಪಡಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ. “ಮುಖ್ಯಮಂತ್ರಿ ಮುಖವಿಲ್ಲದೆ ಮಹಾರಾಷ್ಟ್ರದಲ್ಲಿ ಚುನಾವಣೆಗೆ ಹೋಗುವುದು ಮಹಾ ವಿಕಾಸ್ ಅಘಾಡಿ(MVA)ಗೆ ಅಪಾಯಕಾರಿ. ವಿಶೇಷವಾಗಿ ನಿರ್ಣಾಯಕ ಕೋವಿಡ್ -19 ಅವಧಿಯಲ್ಲಿ ಉದ್ಧವ್ ಠಾಕ್ರೆ ರಾಜ್ಯವನ್ನು ನಿಭಾಯಿಸಿದ ರೀತಿಯನ್ನು ಮಹಾರಾಷ್ಟ್ರ ನೋಡಿದೆ. ಉದ್ಧವ್ ಠಾಕ್ರೆಯವರ ಜನಪ್ರಿಯತೆಯಿಂದಾಗಿ ಜನರು ಎಂವಿಎಗೆ ಮತ ಹಾಕಿದ್ದಾರೆ… ಮುಖ್ಯಮಂತ್ರಿ ಮುಖವಿಲ್ಲದ ಮೈತ್ರಿ ಚುನಾವಣೆಯಲ್ಲಿ ಗೆಲ್ಲಲು ಸಹಾಯ ಮಾಡುವುದಿಲ್ಲ ಎಂದು ರಾವತ್ ಈ ಹಿಂದೆ ಹೇಳಿದ್ದರು.

ಶನಿವಾರ, ರಾವತ್‌ ಅವರು ಇಂಡಿಯಾ ಮೈತ್ರಿಕೂಟದಲ್ಲಿ ಪ್ರಧಾನಿ ಮುಖ ಇಲ್ಲದೇ ಇರುವುದನ್ನು ಪ್ರಸ್ತಾಪಿಸದರು.. “ಇಂಡಿಯಾ ಮೈತ್ರಿಕೂಟವು ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಿದ್ದರೆ, ನಮಗೆ ಇನ್ನೂ 25-30 ಸ್ಥಾನಗಳು ಹೆಚ್ಚಿಗೆ ಸಿಗುತ್ತಿದ್ದವು… ಜನರಿಗೆ ತಾವು ಯಾರಿಗೆ ಮತ ಹಾಕುತ್ತಿದ್ದೇವೆಂಬುದು ಅವರಿಗೆ ತಿಳಿದಿರಬೇಕು. ಜನರು ಇಂದಿರಾ ಗಾಂಧಿ ಮತ್ತು ನರೇಂದ್ರ ಮೋದಿಯವರಿಗೆ ಮತ ಹಾಕಿದ್ದಾರೆ. ಅವರು ಪ್ರಧಾನಿ ಮುಖವನ್ನು ತಿಳಿದುಕೊಳ್ಳಲು ಬಯಸುತ್ತಾರೆ. ನಮ್ಮ ಮುಖ್ಯಮಂತ್ರಿ ಯಾರಾಗಬೇಕು ಎಂಬ ವಿಷಯದಲ್ಲಿ ಭಿನ್ನಾಭಿಪ್ರಾಯವಿಲ್ಲ. ಒಗ್ಗಟ್ಟಿನಿಂದ ಚುನಾವಣೆ ಎದುರಿಸಲು ತೀರ್ಮಾನಿಸಿದ್ದೇವೆ. ನಾವು 175 ರಿಂದ 180 ವಿಧಾನಸಭಾ ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಅವರು ಹೇಳಿದರು.

ಪ್ರಮುಖ ಸುದ್ದಿ :-   ಸಿಬಿಎಸ್‌ಇ 12ನೇ ತರಗತಿ ಪರೀಕ್ಷೆ : ಶೇ.95.6 ಅಂಕ ಗಳಿಸಿ ಅದ್ಭುತ ಸಾಧನೆ ಮಾಡಿದ ಆಸಿಡ್ ದಾಳಿಯಲ್ಲಿ ದೃಷ್ಟಿ ಕಳೆದುಕೊಂಡ ವಿದ್ಯಾರ್ಥಿನಿ..

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement