ಭಾರೀ ಮಳೆಗೆ ಶಿರಸಿ- ಕುಮಟಾ ಹೆದ್ದಾರಿ ಬಂದ್‌

ಶಿರಸಿ: ಉತ್ತರಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಹಲವೆಡೆ ಸಂಪರ್ಕ ಕಡಿತಗೊಂಡಿದೆ. ಭಾರೀ ಮಳೆಯಿಂದಾಗಿ ಈಗ ಉತ್ತರ ಕನ್ನಡ ಜಿಲ್ಲೆಯ ಶಿರಸಿ-ಕುಮಟಾ- ಹೆದ್ದಾರಿಯಲ್ಲಿ ಸಂಚಾರ ಸ್ಥಗಿತಗೊಂಡಿದೆ.
ಚಂಡಿಕಾ ಹೊಳೆಯಲ್ಲಿ ಪ್ರವಾಹ ಬಂದಿದ್ದು,  ಕುಮಟಾ ತಾಲೂಕಿನ ಕತಗಾಲ ಸಮೀಪ ಅಳಕೋಡ ಬಳಿ  ರಸ್ತೆ ಮೇಲೆ ನಾಲ್ಕೈದು ಅಡಿಗಳಷ್ಟು ನೀರು ಹರಿಯುತ್ತಿರುವುದರಿಂದ ರಸ್ತೆ ಬಂದ್ ಮಾಡಲಾಗಿದೆ. ಹೀಗಾಗಿ ರಸ್ತೆ ಇಕ್ಕೆಲಗಳಲ್ಲಿ ವಾಹನಗಳು ನಿಂತಿವೆ. ರಸ್ತೆಯಲ್ಲಿ ವಾಹನ ಸಂಚಾರ ಆರಂಭವಾಗುವುದು ಮಳೆಯ ಮೇಲೆ ಅವಲಂಬಿಸಿದೆ.
ರಸ್ತೆ ಬಂದ್‌ ಆದ ಮಾಹಿತಿ ಸಿಕ್ಕಿ ನಂತರದಲ್ಲಿ ಶಿರಸಿಯಿಂದ ಕುಮಟಾ ಕಡೆ ತೆರಳುವ ವಾಹನಗಳು ಹಾಗೂ ಕುಮಟಾದಿಂದ ಶಿರಸಿಗೆ ಬರುವ ವಾಹನಗಳು ಸಿದ್ದಾಪುರ-ದೊಡ್ಮನೆ ಮಾರ್ಗವಾಗಿ ತೆರಳುತ್ತಿವೆ.

5 / 5. 3

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಚಿನ್ನ ಕಳ್ಳಸಾಗಣೆ ಪ್ರಕರಣ : ರನ್ಯಾ ರಾವ್‌ ಗೆ ಸೇರಿದ 34 ಕೋಟಿ ರೂ ಮೌಲ್ಯದ ಆಸ್ತಿ ಜಪ್ತಿ

ನಿಮ್ಮ ಕಾಮೆಂಟ್ ಬರೆಯಿರಿ

advertisement