ಕೆಲಸ ಒತ್ತಡಕ್ಕೆ ಬಳಲಿ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿತೇ ʼರೊಬೊಟ್‌ʼ..? : ತನಿಖೆಗೆ ಆದೇಶಿಸಿದ ದಕ್ಷಿಣ ಕೊರಿಯಾ…!

ಸಿಯೋಲ್: ದಕ್ಷಿಣ ಕೊರಿಯಾದ ಪಟ್ಟಣವೊಂದರ ನಗರಸಭೆಯ ಕೆಲಸಗಳಲ್ಲಿ ಸಿವಿಲ್ ಸರ್ವೆಂಟ್ ಆಗಿ ಕೆಲಸ ಮಾಡುತ್ತಿದ್ದ ರೊಬೊಟ್‌ ಒಂದು ಮಹಡಿ ಮೇಲಿಂದ ತಾನೇ ಕೆಳಗೆ ಬಿದ್ದು ನಿಷ್ಕ್ರಿಯೆಗೊಂಡಿದ್ದು, ಇದು ಆತ್ಮಹತ್ಯೆ ಮಾಡಿಕೊಂಡಿದೆಯೇ ಎಂದು ತಿಳಿಯುವ ಬಗ್ಗೆ ಅಲ್ಲಿನ ಆಡಳಿತ ತನಿಖೆಗೆ ಆದೇಶಿಸಿದೆ.
ಅಚ್ಚರಿಯ ಘಟನೆಯಲ್ಲಿ ದಕ್ಷಿಣ ಕೊರಿಯಾದ ಗುಮಿ ಸಿಟಿ ಕೌನ್ಸಿಲ್‌ಗಾಗಿ ಕೆಲಸ ಮಾಡುತ್ತಿದ್ದ ʼಸಿವಿಲ್ ಸರ್ವೆಂಟ್ ರೋಬೋಟ್ʼ ಮಹಡಿ ಮೇಲಿಂದ ತಾನೇ ಕೆಳಗೆ ಬಿದ್ದು ನಿಷ್ಕ್ರಿಯಗೊಂಡಿದೆ. ಹಲವರು ʼಆತ್ಮಹತ್ಯೆʼ ಎಂದು ಕರೆದ ನಂತರ ಇದು ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ. ಕಳೆದ ಗುರುವಾರ ಸಂಜೆ 4 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.
ದಕ್ಷಿಣ ಕೊರಿಯಾದ ಗುಮಿ ಸಿಟಿ ಕೌನ್ಸಿಲ್‌ ಕಟ್ಟಡದ ಮೊದಲ ಮತ್ತು ಎರಡನೇ ಮಹಡಿಗಳ ನಡುವಿನ ಮೆಟ್ಟಿಲುಗಳ ಕೆಳಭಾಗದಲ್ಲಿ ಈ ರೊಬೊಟ್‌ ರಾಶಿಯಾಗಿ ಬಿದ್ದಿತ್ತು. ರೋಬೋಟ್ ಇದಕ್ಕಿದ್ದಂತೆ ಕೆಳಗೆ ಬೀಳುವ ಮೊದಲು, “ಏನೋ ಆದಂತೆ ಒಂದು ಸ್ಥಳದಲ್ಲಿ ಸುತ್ತುತ್ತ” ವಿಚಿತ್ರವಾಗಿ ವರ್ತಿಸುತ್ತಿತ್ತು ಎಂದು ಈ ಘಟನೆಯನ್ನು ಕಂಡ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಸಿಟಿ ಕೌನ್ಸಿಲ್ ಅಧಿಕಾರಿಗಳು ಇದಕ್ಕೆ ಪ್ರತಿಕ್ರಿಯಿಸಿ, ಛಿದ್ರಗೊಂಡ ರೊಬೊಟ್‌ ತುಣುಕುಗಳನ್ನು ವಿಶ್ಲೇಷಣೆಗಾಗಿ ಸಂಗ್ರಹಿಸಲಾಗಿದೆ ಎಂದು ತಿಳಿಸಿದ್ದಾರೆ. ಅದು ಇದ್ದಕ್ಕಿದ್ದಂತೆ ಕೆಳಗೆ ನೆಗೆದು ಬೀಳಲು ಕಾರಣ ಅಸ್ಪಷ್ಟವಾಗಿದೆ, ಆದರೆ ಘಟನೆಯು ರೊಬೊಟ್‌ನ ಕೆಲಸದ ಹೊರೆ ಮತ್ತು ಅದರ ಪರಿಣಾಮಗಳ ಬಗ್ಗೆ ಪ್ರಶ್ನೆಗಳನ್ನು ಎತ್ತಿದೆ.

ಪ್ರಮುಖ ಸುದ್ದಿ :-   ವೀಡಿಯೊ..| ಒಳಗೆ ನುಗ್ಗಿ ಹೊಡೀತಿದ್ದಾರೆ, ದೇವರೇ ನಮ್ಮನ್ನು ಕಾಪಾಡಬೇಕು : ಭಾರತದ ದಾಳಿ ನಂತ್ರ ಸಂಸತ್ತಿಲ್ಲಿ ಕಣ್ಣೀರಿಟ್ಟ ಪಾಕ್‌ ಸಂಸದ-ವೀಕ್ಷಿಸಿ

ಆಗಸ್ಟ್ 2023ರಲ್ಲಿ ಕಚೇರಿ ಕೆಲಸ ಕಾರ್ಯಗಳಿಗೆ ರೊಬೊಟ್‌ ನಿಯೋಜನೆ ಮಾಡಲಾಗಿತ್ತು. ದಾಖಲೆಗಳನ್ನು ತಲುಪಿಸುವುದು ಮತ್ತು ನಗರದಲ್ಲಿ ಪ್ರಚಾರ ಮಾಡುವುದರಿಂದ ಹಿಡಿದು ನಿವಾಸಿಗಳಿಗೆ ಮಾಹಿತಿಯನ್ನು ಒದಗಿಸುವ ವರೆಗೆ, ರೊಬೊಟ್‌ ತನ್ನದೇ ಆದ ನಾಗರಿಕ ಸೇವಾ ಅಧಿಕಾರಿ ಕಾರ್ಡ್‌ನೊಂದಿಗೆ ಪೂರ್ಣವಾಗಿ ಸಿಟಿ ಹಾಲ್‌ನಲ್ಲಿ ಕೆಲಸ ಮಾಡುತ್ತಿತ್ತು. ರೊಬೊಟ್‌ ಪ್ರತಿದಿನ ಬೆಳಿಗ್ಗೆ 9 ರಿಂದ ಸಂಜೆ 6 ರವರೆಗೆ ಕೆಲಸ ಮಾಡುತ್ತಿತ್ತು, ಅದು ಎಲಿವೇಟರ್‌ಗಳನ್ನು ಬಳಸಿಕೊಂಡು ಮಹಡಿಗಳ ನಡುವೆ ದಣಿವರಿಯಿಲ್ಲದೆ ಚಲಿಸುತ್ತಿತ್ತು. ಸಾಮಾನ್ಯವಾಗಿ ರೊಬೊಟ್‌ಗಳು ಯಾವುದೋ ಒಂದು ಮಹಡಿಗೆ ಸೀಮಿತವಾಗಿರುತ್ತವೆ. ಆದರೆ ಈ ರೊಬೊಟ್‌ ಹಲವು ಮಹಡಿಗಳನ್ನು ಏರುವ ಹಾಗೂ ಇಳಿಯುವ ಸಾಮರ್ಥ್ಯ ಹೊಂದಿತ್ತು. ಲಿಫ್ಟ್‌ ಅಥವಾ ಎಲಿವೇಟರ್‌ ಬಳಸಿ ಮಹಡಿಯಿಂದ ಮಹಡಿಗೆ ಸುಲಲಿತವಾಗಿ ಓಡಾಡುತ್ತಿತ್ತು. ಸಾಮಾನ್ಯ ಮನುಷ್ಯನಂತೆಯೇ ಈ ರೊಬೊಟ್‌ ಕೂಡಾ ತನಗೆ ವಹಿಸಿದ ಕೆಲಸ ಕಾರ್ಯಗಳನ್ನುಮಾಡುತ್ತಿತ್ತು.

ಅತಿಯಾದ ಕಾರ್ಯ ಒತ್ತಡದಿಂದ ಅದು ಬಳಲಿರಬಹುದು. ಮೇಲಿಂದ ಬೀಳುವ ಮೊದಲು ತಾನಿರುವ ಸ್ಥಳದಲ್ಲೇ ಹಲವು ಸುತ್ತು ಗಿರಕಿ ಹೊಡೆದು ವಿಚಿತ್ರವಾಗಿ ವರ್ತಿಸಿ ನಂತರ ಮಹಡಿ ಮೇಲಿಂದ ಕೆಳಕ್ಕೆ ಜಿಗಿದಿದೆ. ರೊಬೊಟ್‌ನ ಇಂಥ ವರ್ತನೆ ಕುರಿತು ತನಿಖೆ ನಡೆಸಬೇಕು ಎಂದು ಪ್ರತ್ಯಕ್ಷದರ್ಶಿಗಳು ಒತ್ತಾಯಿಸಿದ್ದಾರೆ ಎಂದು ಡೈಲಿ ಮೇಲ್ ವರದಿ ಮಾಡಿದೆ. ಅತಿಯಾದ ಕಾರ್ಯ ಒತ್ತಡದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದೇ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಈ    ರೊಬೊಟ್‌ ಅನ್ನು  ಬೇರ್ ರೋಬೋಟ್ ಎಂಬ ಸಂಸ್ಥೆ ಅಭಿವೃದ್ಧಿಪಡಿಸಿದೆ. ಇದು ಗುಮಿಯ ಸ್ಥಳೀಯ ಆಡಳಿತದ ಅಧಿಕೃತ ಭಾಗವೇ ಆಗಿತ್ತು. ಕೆಳಗೆ ಬಿದ್ದಾಗ ರೊಬೊ ಬಿಡಿಭಾಗಗಳು ಚಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಅವುಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಡೀ ಜಗತ್ತಿನಲ್ಲಿ ಅತಿ ಹೆಚ್ಚು ರೊಬೊ ಬಳಸುತ್ತಿರುವ ದೇಶದಲ್ಲಿ ದಕ್ಷಿಣ ಕೊರಿಯಾ ಅಗ್ರಸ್ಥಾನದಲ್ಲಿ ನಿಲ್ಲುತ್ತದೆ. ವಿಭಿನ್ನ ಬಗೆಯ ರೊಬೊಗಳು ಇಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಪ್ರತಿ ಹತ್ತು ನೌಕರರಿಗೆ ಒಂದು ರೊಬೊ ಇಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ಅಂತಾರಾಷ್ಟ್ರೀಯ ರೊಬೊಟಿಕ್ಸ್‌ ಒಕ್ಕೂಟ ಹೇಳಿದೆ.

ಪ್ರಮುಖ ಸುದ್ದಿ :-   ನೂತನ ಪೋಪ್ ಆಗಿ ಆಯ್ಕೆಯಾದ ರಾಬರ್ಟ್ ಪ್ರೇವೋಸ್ಟ್

 

5 / 5. 4

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement