ಇದು ವಿಶ್ವದ ಅತ್ಯಂತ ದುಬಾರಿ ಕೀಟ ; ಇದರ ಬೆಲೆ ಐಷಾರಾಮಿ ಕಾರಿನ ಬೆಲೆಗೆ ಸಮ…! ಇಷ್ಟೊಂದು ದುಬಾರಿ ಯಾಕೆಂದರೆ…

ಒಂದು ಕೀಟದ ಬೆಲೆ ₹ 75 ಲಕ್ಷ ರೂ.ವರೆಗೆ ಇದೆ ಎಂದು ತಿಳಿದಿದೆಯೇ? ವಿಶ್ವದ ಅತ್ಯಂತ ದುಬಾರಿ ಕೀಟಗಳಲ್ಲಿ ಸಾರಂಗ ಜೀರುಂಡೆಗಳು (stag beetles) ಕೂಡ ಒಂದು.
ಅದರ ವಿಶೇಷತೆ ಏನು? ಸಾರಂಗ ಜೀರುಂಡೆ ಇಷ್ಟೊಂದು ದುಬಾರಿಯಾಗಲು ಕಾರಣವೇನು.? ಯಾಕೆಂದರೆ ಇದು ಸಾಕಷ್ಟು ಅಪರೂಪ, ಮತ್ತು ಅದೃಷ್ಟ ತರುತ್ತದೆ ಎಂದು ನಂಬಲಾಗಿದೆ. ಸಾರಂಗ ಜೀರುಂಡೆ (stag beetles)ಯನ್ನು ಇಟ್ಟುಕೊಳ್ಳುವುದರಿಂದ ಬೇಗನೆ ಶ್ರೀಮಂತರಾಗಬಹುದು ಎಂದು ಕೆಲವರು ಭಾವಿಸುತ್ತಾರೆ. ಇದು ವಿಲಕ್ಷಣವಾಗಿ ತೋರುತ್ತದೆಯಾದರೂ, ಪ್ರಪಂಚದಾದ್ಯಂತ ಜನರು ಈ ಜೀರುಂಡೆ ಖರೀದಿಸಲು ಅತಿಯಾದ ಹಣ ನೀಡಲು ಸಿದ್ಧರಾಗುತ್ತಾರೆ. ಕೆಲವು ವರ್ಷಗಳ ಹಿಂದೆ, ಜಪಾನಿನ ತಳಿಗಾರ ತನ್ನ ಜೀರುಂಡೆಯನ್ನು 89,000 ಅಮೆರಿಕನ್‌ ಡಾಲರ್‌ಗಳಿಗೆ ಮಾರಾಟ ಮಾಡಿದನು, ಅಂದರೆ ಭಾರತೀಯ ಹಣ ಸುಮಾರು 70 ಲಕ್ಷ ರೂ..

ಈ ಜೀರುಂಡೆಯ ವಿಶೇಷತೆ ಏನು?..?
ಸಾರಂಗ ಜೀರುಂಡೆಗಳು ಅಪರೂಪದ ಕೀಟಗಳಾಗಿದ್ದು, ಬೇಗನೆ ತಮ್ಮನ್ನು ಮಿಲಿಯನೇರ್ ಆಗಿ ಮಾಡಬಹುದು ಎಂದು ಹಲವರು ನಂಬುತ್ತಾರೆ. ಈ ಕಾರಣದಿಂದಲೇ ಇದು ಅತ್ಯಂತ ದುಬಾರಿ ಕೀಟ ಎನಿಸಿದೆ. ಇದರ ವಿತ್ತೀಯ ಮೌಲ್ಯವು ತುಂಬಾ ಹೆಚ್ಚಿದ್ದು, ಆಡಿ ಅಥವಾ ಬಿಎಂಡಬ್ಲ್ಯೂ (BMW) ನಂತಹ ಐಷಾರಾಮಿ ಕಾರಿನೊಂದಿಗೆ ಇದರ ಬೆಲೆಯನ್ನು ಬಹುತೇಕ ಹೋಲಿಕೆ ಮಾಡಬಹುದು. ಇದು ವಿಶ್ವದ ಅತ್ಯಂತ ದುಬಾರಿ ಕೀಟಗಳಲ್ಲಿ ಒಂದಾಗಿದ್ದು, ಇದರ ಬೆಲೆ ಸುಮಾರು 75 ಲಕ್ಷ ರೂ.ಗಳ ವರೆಗಗೂ ಇರುತ್ತದೆ. ಈ ಕೀಟವು ಕೇವಲ ಎರಡರಿಂದ ಮೂರು ಇಂಚುಗಳಷ್ಟು ಗಾತ್ರವನ್ನು ಹೊಂದಿದೆ. ಅವುಗಳನ್ನು ಔಷಧೀಯ ಉದ್ದೇಶಗಳಿಗಾಗಿಯೂ ಬಳಸಲಾಗುತ್ತದೆ.

ಪ್ರಮುಖ ಸುದ್ದಿ :-   2027ರ ಉತ್ತರ ಪ್ರದೇಶ ಚುನಾವಣೆ | ಯೋಗಿ-ಅಖಿಲೇಶ ಜನಪ್ರಿಯತೆ-ಕಾರ್ಯಕ್ಷಮತೆ ; ನ್ಯೂಸ್18 ಸಮೀಕ್ಷೆಯಲ್ಲಿ ಕಂಡುಬಂದಿದ್ದೇನು ?

ಜೀರುಂಡೆಯ ಹೆಸರು ಅದಕ್ಕೆ ಬರಲು ಒಂದು ಕಾರಣವಿದೆ. ಗಂಡು ಕೀಟದ ಮೇಲೆ ಕಂಡುಬರುವ ವಿಶಿಷ್ಟ ದವಡೆಗಳು ಸಾರಂಗಗಳ ಕೊಂಬನ್ನು ಹೋಲುವುದರಿಂದ ಈ ಹೆಸರು ಬಂದಿದೆ. ಈ ಕೀಟಗಳ ಸಂಪೂರ್ಣ ದ್ರವ ಆಹಾರ ಅವಲಂಬಿಸಿವೆ. ಮರದ ರಸದಂತಹ ಸಿಹಿಯಾದ ದ್ರವಗಳನ್ನು ಸೇವಿಸುತ್ತವೆ. ಕೊಳೆಯುತ್ತಿರುವ ಹಣ್ಣುಗಳಿಂದ ದ್ರವವನ್ನು ಸಹ ಕುಡಿಯುತ್ತದೆ. ಸಾರಂಗ ಜೀರುಂಡೆಗಳಿಗೆ ಶೀತವನ್ನು ತಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಹೀಗಾಗಿ ಉಷ್ಣವಲಯದ ಸ್ಥಳಗಳಿಗೆ ಈ ಕೀಟಗಳು ಆದ್ಯತೆ ನೀಡುತ್ತವೆ. ಅವುಗಳು ನೈಸರ್ಗಿಕವಾಗಿ ಕಾಡುಪ್ರದೇಶಗಳಲ್ಲಿ ವಾಸಿಸುತ್ತವೆ, ಅಲ್ಲದೆ, ಮುಳ್ಳುಗಿಡಗಳು, ಸಾಂಪ್ರದಾಯಿಕ ತೋಟಗಳು ಮತ್ತು ನಗರ ಪ್ರದೇಶಗಳ ಉದ್ಯಾನಗಳಂತಹ ಸ್ಥಳಗಳಲ್ಲಿಯೂ ಸಹ ಕಂಡುಬರುತ್ತವೆ. ಸತ್ತ ಮರವು ಹೇರಳವಾಗಿದ್ದರೆ ಹೆಚ್ಚು ಕಾಣಸಿಗುತ್ತದೆ. ಜೀರುಂಡೆಯ ಲಾರ್ವಾಗಳು ಹಳೆಯ ಮರಗಳು ಮತ್ತು ಕೊಳೆಯುತ್ತಿರುವ ಮರದ ಮೇಲೆ ಅವಲಂಬಿತವಾಗಿದೆ. ಈ ಕೀಟಗಳು ಸತ್ತ ಮರವನ್ನು ಪ್ರೀತಿಸುತ್ತವೆ ಮತ್ತು ಸತ್ತ ಮರದ ಮೇಲ್ಮೈಗಳನ್ನು ಕೆರೆಯಲು ತಮ್ಮ ಚೂಪಾದ ದವಡೆಗಳನ್ನು ಬಳಸುತ್ತವೆ.

ಗಂಡು-ಹೆಣ್ಣು ಸಾರಂಗ ಜೀರುಂಡೆಯನ್ನು ಗುರುತಿಸುವುದು ಹೇಗೆ..?
ಗಂಡು ಸಾರಂಗ ಜೀರುಂಡೆಗಳು ದೊಡ್ಡ ಗಾತ್ರದ ದವಡೆಗಳನ್ನು ಹೊಂದಿರುತ್ತವೆ. ಇವುಗಳನ್ನು ಹೆಣ್ಣನ್ನು ಗೆಲ್ಲಲು ಪ್ರತಿಸ್ಪರ್ಧಿ ಗಂಡು ಜೀರುಂಡೆ ಜೊತೆ ಸೆಣಸಾಡಲು ಬಳಸುತ್ತವೆ. ಮತ್ತೊಂದೆಡೆ, ಹೆಣ್ಣು ಕೀಟುಗಳು ಗಂಡಿಗಿಂತ ಚಿಕ್ಕದಾಗಿರುತ್ತವೆ. ಗಂಡು ಕೀಟಗಳಿಗೆ ಹೋಲಿಸಿದರೆ ಹೆಣ್ಣು ತುಲನಾತ್ಮಕವಾಗಿ ಹೆಚ್ಚು ಶಕ್ತಿಯುತವಾದ ಆದರೆ ಚಿಕ್ಕ ದವಡೆಗಳನ್ನು ಹೊಂದಿರುತ್ತವೆ. ಲಾರ್ವಾ ರೂಪದಲ್ಲಿ, ಹೆಣ್ಣು ಜೀರುಂಡೆಯನ್ನು ಅದರ ಕೆನೆ ಬಣ್ಣ ಮತ್ತು ಚರ್ಮದ ಮೂಲಕ ಗೋಚರಿಸುವ ಕೊಬ್ಬಿನ ಅಂಡಾಶಯದಿಂದ ಗುರುತಿಸಬಹುದು. ಹೆಣ್ಣುಗಳು ಸಾಮಾನ್ಯವಾಗಿ ನೆಲದ ಮೇಲೆ ಕಾಣಿಸಿಕೊಳ್ಳುತ್ತವೆ, ಯಾವಾಗಲೂ ತಮ್ಮ ಮೊಟ್ಟೆಗಳನ್ನು ಇಡಲು ಸ್ಥಳವನ್ನು ಹುಡುಕುತ್ತವೆ.

ಪ್ರಮುಖ ಸುದ್ದಿ :-   ಒಂದೇ ಕುಟುಂಬದ ಐವರು ಸಾವು ; ಹಿಂದಿನ ರಾತ್ರಿ ನೂಡಲ್ಸ್‌ ಸೇವಿಸಿದ್ದ ಕುಟುಂಬ

ಆಯಷ್ಯ ಮತ್ತು ಆಹಾರ…
ಲಂಡನ್ ಮೂಲದ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂ ಪ್ರಕಾರ, ಈ ಕೀಟಗಳು 2-6 ಗ್ರಾಂ ತೂಕವಿರುತ್ತವೆ ಮತ್ತು ಸರಾಸರಿ 3-7 ವರ್ಷಗಳ ಜೀವಿತಾವಧಿಯನ್ನು ಹೊಂದಿರುತ್ತವೆ. ಗಂಡು 35-75 ಮಿಮೀ ಉದ್ದವಿದ್ದರೆ, ಹೆಣ್ಣು 30-50 ಮಿಮೀ ಉದ್ದವಿರುತ್ತದೆ. ಕೆಲವು ಸಂಶೋಧಕರು ಸಾರಂಗ ಜೀರುಂಡೆ ಭೂಮಿಯ ಮೇಲೆ ಕಂಡುಬರುವ ಅತಿದೊಡ್ಡ ಜೀರುಂಡೆ ಮತ್ತು ಇದು 8.5 ಸೆಂ.ಮೀ ವರೆಗೆ ಬೆಳೆಯುತ್ತದೆ ಎಂದು ಹೇಳಿದ್ದಾರೆ. ಈ ಕೀಟದಿಂದ ಅನೇಕ ಉಪಯುಕ್ತ ಔಷಧಗಳನ್ನು ಸಹ ತಯಾರಿಸಲಾಗುತ್ತದೆ.
.ವಯಸ್ಕ ಸಾರಂಗ ಜೀರುಂಡೆಗಳು ಪ್ರಾಥಮಿಕವಾಗಿ ಮರದ ರಸ ಮತ್ತು ಕೊಳೆಯುತ್ತಿರುವ ಹಣ್ಣಿನ ರಸದಂತಹ ಸಿಹಿ ದ್ರವಗಳನ್ನು ತಿನ್ನುತ್ತವೆ. ಅವುಗಳು ಮುಖ್ಯವಾಗಿ ತಮ್ಮ ಲಾರ್ವಾ ಹಂತದಲ್ಲಿ ತಾವು ಸಂಗ್ರಹಿಸಿದ ಶಕ್ತಿಯ ನಿಕ್ಷೇಪಗಳ ಮೇಲೆ ಅವಲಂಬಿತವಾಗಿವೆ, ಇದು ಈ ಜೀವಿಯ ವಯಸ್ಕ ಜೀವನದುದ್ದಕ್ಕೂ ಅವುಗಳನ್ನು ಉಳಿಸಿಕೊಳ್ಳುತ್ತದೆ.
ಸಾರಂಗ ಜೀರುಂಡೆಗಳ ಲಾರ್ವಾಗಳು ಸತ್ತ ಮರವನ್ನು ತಿನ್ನುತ್ತವೆ. ನಾರಿನ ಮೇಲ್ಮೈಯಿಂದ ಸ್ಪ್ಲಿಂಟರ್‌ಗಳನ್ನು ಕೆರೆದು ಹೊರತೆಗೆಯಲು ತಮ್ಮ ಚೂಪಾದ ದವಡೆಗಳನ್ನು ಬಳಸುತ್ತವೆ. ಅವು ಸತ್ತ ಮರವನ್ನು ತಿನ್ನುವುದರಿಂದ, ಸಾರಂಗ ಜೀರುಂಡೆಗಳು ಜೀವಂತ ಮರಗಳು ಅಥವಾ ಪೊದೆಗಳಿಗೆ ಅಪಾಯವನ್ನುಂಟು ಮಾಡುವುದಿಲ್ಲ. ಹೀಗಾಗಿ ಆರೋಗ್ಯಕರ ಸಸ್ಯವರ್ಗಕ್ಕೆ ಇವುಗಳಿಂದ ಹಾನಿಯಾಗುವುದಿಲ್ಲ.

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement