ವೀಡಿಯೊ..| ಸಾಗರ : ಬಾಳೆಹಳ್ಳಿಯಲ್ಲಿ ಮನೆಯಂಗಳಕ್ಕೇ ಬಂದು ವಿಹರಿಸಿದ ಕಾಡೆಮ್ಮೆಗಳ ಹಿಂಡು ; ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಸಾಗರ: ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ವರದಹಳ್ಳಿ ಸಮೀಪದ ಬಾಳೆಹಳ್ಳಿಯಲ್ಲಿ ಮನೆಯ ಅಂಗಳಕ್ಕೇ ಕಾಡೆಮ್ಮೆಗಳ ಹಿಂಡು ಸೋಮವಾರ ಬೆಳಗಿನ ಜಾವ ಆಗಮಿಸಿದ್ದವು.
ಸಾಗರ ತಾಲೂಕಿನ ಕರ್ಕಿಕೊಪ್ಪದ ಬಾಳೆಹಳ್ಳಿಯ ರವೀಂದ್ರಮೂರ್ತಿ ಅವರ ಮನೆ ಅಂಗಳದಲ್ಲಿ ಸೋಮವಾರ ಬೆಳಿಗ್ಗೆ ೪:೩೦ರ ಸುಮಾರಿಗೆ ಕಾಡೆಮ್ಮೆಗಳ ಗುಂಪು ಕಾಣಿಸಿಕೊಂಡಿವೆ. ಗುಂಪಿನಲ್ಲಿ ದೊಡ್ಡದು-ಸಣ್ಣದು ಸೇರಿ ಸುಮಾರು ೮-೧೦- ಕಾಡೆಮ್ಮೆ-ಕಾಡುಕೋಣಗಳು ಇದ್ದವು. ಈ ಗುಂಪು ಗುಂಪು ಮನೆಯ ಸಿಸಿಟಿ ದೃಶ್ಯಾವಳಿಗಳಲ್ಲಿ ಸೆರೆಯಾಗಿದೆ.
ಈ ಕಾಡೆಮ್ಮೆಗಳು ಮನೆಯ ಮುಂದಿನ ವಿಶಾಲವಾದ ಅಂಗಳಲ್ಲಿ ತಾಸುಗಟ್ಟಲೆ ವಿಹರಿಸಿವೆ. ವಿಶ್ರಾಂತಿ ಪಡೆದುಕೊಂಡು ಸೂರ್ಯ ಉದಸಯಿಸುವಷ್ಟರಲ್ಲಿ ಅಲ್ಲಿಂದ ತೆರಳಿವೆ. ಹಿಂಡಿನಲ್ಲಿ ಕಾಣಿಸಿಕೊಂಡ ಕಾಡೆಮ್ಮೆಗಳ ಗುಂಪಿನಲ್ಲಿ ಮರಿಗಳೂ ಇವೆ ಎಂದು ಮನೆಯ ಸಚಿನ್‌ ಬಿ.ಆರ್‌. ತಿಳಿಸಿದ್ದಾರೆ. ಅದರಲ್ಲಿ ನಾಲ್ಕೈದು ವಯಸ್ಕ ಕಾಡೆಮ್ಮೆಗಳಾದರೆ, ನಾಲ್ಕೈದು ಮರಿಗಳಾಗಿವೆ.

ಕಾಡೆಮ್ಮೆಗಳ ಗುಂಪು ಮನೆಯ ಸಮೀಪ ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ಈ ಹಿಂದೆಯೂ ಅನೇಕ ಸಲ ಬಂದಿದ್ದವು. ಅವು ಹೆಚ್ಚಾಗಿ ರಾತ್ರಿ ಸಮಯದಲ್ಲಿ ಆಗಮಿಸುತ್ತವೆ. ತೋಟಕ್ಕೆ ಹೋಗಿ ಮೇಯ್ದ ನಂತರ ಬೆಳಗಾಗುವಷ್ಟರಲ್ಲಿ ಮತ್ತೆ ಕಾಡು ಸೇರಿಕೊಳ್ಳುತ್ತವೆ. ಕೆಲವೊಮ್ಮೆ ರಾತ್ರಿ ಸಮಯದಲ್ಲಿ ಬೈಕ್‌ಗಳಿಗೂ ಎದುರಾಗುತ್ತವೆ. ಈವರೆಗೆ ಯಾರಿಗೂ ತೊಂದರೆ ಮಾಡಿಲ್ಲ. ಆದರೆ ಈ ಸಲ ಅವುಗಳು ನಮ್ಮ ಮನೆಯ ಅಂಗಳಕ್ಕೆ ಬಂದು ಇಲ್ಲಿಯೇ ತಾಸಿಗೂ ಹೆಚ್ಚು ಕಾಲ ವಿಶ್ರಾಂತಿ ಪಡೆದಿದೆ. ಅಂಗಳದಲ್ಲಿ ಬೆಳೆದ ಹುಲ್ಲು ಹಾಗೂ ದಾಸವಾಳ ಗಿಡಗಳನ್ನು ತಿಂದಿವೆ.

ತೋಟಕ್ಕೆ ಹೋಗಿ ಮೇಯ್ದ ನಂತರ ವಿಶ್ರಾಂತಿಗಾಗಿ ಮನೆಯ ಅಂಗಳಕ್ಕೆ ಬಂದು ಇಲ್ಲಿ ವಿಹರಿಸಿವೆ. ಇಷ್ಟೊಂದು ದೊಡ್ಡ ಹಿಂಡು ಬರುವುದು ಅಪರೂಪ. ಈ ಹಿಂದೆಯೂ ಹಗಲಿನಲ್ಲಿ ಹಿಂಡು ಮನೆಯ ಸಮೀಪ ಬಂದಿತ್ತು. ಆದರೆ ಆ ಹಿಂಡು ಇಷ್ಟು ದೊಡ್ಡದಾಗಿರಲಿಲ್ಲ. ಒಮ್ಮೆ ಒಂಟಿ ಕಾಡುಕೋಣ ಮನೆಯ ಅಂಗಳಕ್ಕೇ ಬಂದಿತ್ತು ಎಂದು ಮನೆಯ ಸಚಿನ್‌.ಬಿ.ಆರ್‌.ತಿಳಿಸಿದ್ದಾರೆ.
ಅವುಗಳ ಆಕಾರ ನೋಡಿದರೆ ಭಯವಾಗುತ್ತದೆ. ಅವುಗಳಿಗೆ ಯಾವ ಬೇಲಿಯೂ ನಿಲ್ಲುವುದಿಲ್ಲ. ಮಳೆಗಾಲದಲ್ಲಿ ಅವು ಕಾಲಿಟ್ಟ ಕಡೆ ಹೆಜ್ಜೆ ಮೂಡುತ್ತದೆ, ಧರೆ ಪ್ರದೇಶವಾಗಿದ್ದರೆ ಮಣ್ಣು ಕುಸಿಯುತ್ತದೆ ಎಂದು ಅವರು ಹೇಳಿದರು.

ಪ್ರಮುಖ ಸುದ್ದಿ :-   ಭಾರಿ ಮಳೆ ಮುನ್ಸೂಚನೆ ; ಕರ್ನಾಟಕದ ಐದು ಜಿಲ್ಲೆಗಳಿಗೆ ಇಂದು ರೆಡ್‌ ಅಲರ್ಟ್‌

5 / 5. 6

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement