ಪ್ಯಾರಿಸ್ ಒಲಿಂಪಿಕ್ಸ್ 2024 : ಭಾರತದ 117 ಕ್ರೀಡಾಪಟುಗಳ ಪಟ್ಟಿ ಬಿಡುಗಡೆ ; ಅಭಾ ಖತುವಾಗೆ ಇಲ್ಲ ಅವಕಾಶ

ನವದೆಹಲಿ: ಜುಲೈ 26 ರಿಂದ ಪ್ರಾರಂಭವಾಗುವ ಮುಂಬರುವ ಪ್ಯಾರಿಸ್ ಒಲಿಂಪಿಕ್ಸ್‌ಗೆ ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ​​(IOA) 117 ಕ್ರೀಡಾಪಟುಗಳು ಮತ್ತು 140 ಸಹಾಯಕ ಸಿಬ್ಬಂದಿ ಸದಸ್ಯರ ಪಟ್ಟಿಯನ್ನು ಬಿಡುಗಡೆ ಮಾಡಿದೆ. 140 ಸಹಾಯಕ ಸಿಬ್ಬಂದಿಗಳಲ್ಲಿ 72 ಸದಸ್ಯರನ್ನು ಸರ್ಕಾರದ ವೆಚ್ಚದಲ್ಲಿ ಅನುಮೋದಿಸಲಾಗಿದೆ.
ವಿಶ್ವ ಶ್ರೇಯಾಂಕದ ಮೂಲಕ ಗೇಮ್ಸ್‌ಗೆ ಅರ್ಹತೆ ಪಡೆದ ಶಾಟ್‌ಪುಟ್ ಆಟಗಾರ್ತಿ ಅಭಾ ಖತುವಾ ಪಟ್ಟಿಯಲ್ಲಿಲ್ಲ ಮತ್ತು ಯಾವುದೇ ವಿವರಣೆಯಿಲ್ಲದೆ ಅವರನ್ನು ಪಟ್ಟಿಯಿಂದ ಕೈಬಿಡಲಾಗಿದೆ.
ಅಥ್ಲೆಟಿಕ್ಸ್ ತಂಡದಲ್ಲಿ 29 (11 ಮಹಿಳೆಯರು ಮತ್ತು 18 ಪುರುಷರು) ದೇಶವನ್ನು ಪ್ರತಿನಿಧಿಸುತ್ತಿದ್ದು, ಶೂಟಿಂಗ್ (21) ಮತ್ತು ಹಾಕಿ (19 ಆಟಗಾರರು), ಏಳು ಬ್ಯಾಡ್ಮಿಂಟನ್ ಆಟಗಾರರು ತಂಡದ ಭಾಗವಾಗಿದ್ದಾರೆ ಮತ್ತು 8 ಟೇಬಲ್ ಟೆನಿಸ್ ಆಟಗಾರರು ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲಿದ್ದಾರೆ.
ಭಾರತವು 20 ಕ್ರೀಡಾ ವಿಭಾಗಗಳಲ್ಲಿ ಭಾಗವಹಿಸಲಿದ್ದು, ಈಕ್ವೆಸ್ಟ್ರಿಯನ್, ಜೂಡೋ, ರೋಯಿಂಗ್ ಮತ್ತು ವೇಟ್‌ಲಿಫ್ಟಿಂಗ್‌ನಲ್ಲಿ ಒಬ್ಬ ಆಟಗಾರನು ಭಾಗವಹಿಸುತ್ತಾರೆ. ಇದಲ್ಲದೆ, ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಟೋಕಿಯೊ ಓಲ್ಮಿಪಿಕ್ಸ್‌ಗಿಂತ ಎರಡು ಕಡಿಮೆ ಕ್ರೀಡಾಪಟುಗಳಿದ್ದಾರೆ. 119 ಅಥ್ಲೀಟ್‌ಗಳು ಭಾಗವಹಿಸಿದ್ದ ಟೋಕಿಯೊ ಓಲ್ಮಿಪಿಕ್ಸ್‌ ನಲ್ಲಿ ಭಾರತ ಒಟ್ಟು ಏಳು ಪದಕಗಳನ್ನು ಗೆದ್ದಿತ್ತು.

ಪ್ರಮುಖ ಸುದ್ದಿ :-   ವೀಡಿಯೊಗಳು..| ಇರಾನಿನ 6 ವಾಯುನೆಲೆಗಳ ಮೇಲೆ ಇಸ್ರೇಲ್‌ ದಾಳಿ ; 15 ವಿಮಾನಗಳು ನಾಶ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement