ಮ್ಯಾನ್ಮಾರ್‌ ನಿಂದ ಭಾರತದ ಮಿಜೋರಾಂಗೆ ಅಡಕೆ ಕಳ್ಳಸಾಗಣೆ ; ಸಿಬಿಐ ತನಿಖೆಗೆ ಗುವಾಹತಿ ಹೈಕೋರ್ಟ್ ಆದೇಶ

ಐಜ್ವಾಲ್ :  ಮ್ಯಾನ್ಮಾರ್‌(ಬರ್ಮಾ)ನಿಂದ ಮಿಜೋರಾಂಗೆ ಅಡಕೆ ಕಳ್ಳಸಾಗಣೆ ನಡೆಯುತ್ತಿರುವ ಆರೋಪದ ಬಗ್ಗೆ ತನಿಖೆ ನಡೆಸುವಂತೆ ಗುವಾಹತಿ ಹೈಕೋರ್ಟ್‌ನ ಐಜ್ವಾಲ್ ಪೀಠವು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ನಿರ್ದೇಶನ ನೀಡಿದೆ ಎಂದು ನ್ಯಾಯಾಲಯದ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.
ರುವಾಟ್‌ಫೆಲಾ ನು ಎಂದು ಜನಪ್ರಿಯವಾಗಿರುವ ಸಾಮಾಜಿಕ ಕಾರ್ಯಕರ್ತ ವನ್ರಾಮ್‌ ಚುವಾಂಗಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಗುವಾಹತಿ ಹೈಕೋರ್ಟ್‌ನ ಐಜ್ವಾಲ್ ಪೀಠವು ಇತ್ತೀಚಿಗೆ ಈ ಆದೇಶವನ್ನು ನೀಡಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಆದೇಶದಲ್ಲಿ, ನ್ಯಾಯಮೂರ್ತಿ ಜೋಥಾನ್‌ಖುಮಾ ಮತ್ತು ನ್ಯಾಯಮೂರ್ತಿ ಮರ್ಲಿ ವ್ಯಾಂಕುಂಗ್ ಅವರನ್ನೊಳಗೊಂಡ ಪೀಠವು ಈ ಅಪರಾಧವು ವಾಣಿಜ್ಯ ವಹಿವಾಟುಗಳಿಗೆ ಸಂಬಂಧಿಸಿದೆ ಎಂದು ಹೇಳಿದೆ.

ಹೈಕೋರ್ಟ್ ಪೀಠವು, ರಾಜ್ಯ ಪೊಲೀಸರು ಅದರ ಅಂತರರಾಷ್ಟ್ರೀಯ ವ್ಯಾಪ್ತಿಯ ಕಾರಣದಿಂದ ಈ ವಿಷಯವನ್ನು ಕೂಲಂಕಷವಾಗಿ ತನಿಖೆ ಮಾಡುವ ಬಗ್ಗೆ ಅಸಮರ್ಥತೆಯನ್ನು ವ್ಯಕ್ತಪಡಿಸಿದ್ದಾರೆ ಎಂಬುದನ್ನು ಗಮನಿಸಿದೆ. ಹೀಗಾಗಿ ಅಂತಾರಾಷ್ಟ್ರೀಯ ಕಳ್ಳಸಾಗಣೆ ಆರೋಪಗಳ ಬಗ್ಗೆ ನಿಷ್ಪಕ್ಷಪಾತ ತನಿಖೆಯನ್ನು ಖಚಿತಪಡಿಸಿಕೊಳ್ಳಲು ಸಿಬಿಐ ತನಿಖೆ ಅಗತ್ಯ ಎಂದೂ ನ್ಯಾಯಾಲಯವು ಗಮನಿಸಿದೆ. ತನಿಖೆಯನ್ನು ತಾರ್ಕಿಕ ಅಂತ್ಯಕ್ಕೆ ಒಯ್ಯುವಂತೆ ಸಿಬಿಐಗೆ ನ್ಯಾಯಾಲಯ ಸೂಚನೆ ನೀಡಿದೆ. ಈ ಕ್ರಮವು ಅಡಿಕೆ ಕಳ್ಳಸಾಗಣೆ ದಂಧೆಯ ತನಿಖೆಯಲ್ಲಿ ಪಾರದರ್ಶಕತೆ ತರುವ ನಿರೀಕ್ಷೆಯಿದೆ.
ಮ್ಯಾನ್ಮಾರ್‌ನಿಂದ ಚಂಫೈ ಜಿಲ್ಲೆಯ ಮೂಲಕ ಭಾರತಕ್ಕೆ ಹೆಚ್ಚಿನ ಪ್ರಮಾಣದ ಅಡಿಕೆಗಳನ್ನು ಕಳ್ಳಸಾಗಣೆ ಮಾಡಲಾಗುತ್ತಿದೆ, ಇದರಿಂದಾಗಿ ಸರ್ಕಾರಕ್ಕೆ ಗಮನಾರ್ಹ ಆದಾಯ ನಷ್ಟವಾಗುತ್ತಿದೆ ಎಂದು ಪಿಐಎಲ್ ಆರೋಪಿಸಿತ್ತು.

ಪ್ರಮುಖ ಸುದ್ದಿ :-   ವೀಡಿಯೊಗಳು..| ಇರಾನಿನ 6 ವಾಯುನೆಲೆಗಳ ಮೇಲೆ ಇಸ್ರೇಲ್‌ ದಾಳಿ ; 15 ವಿಮಾನಗಳು ನಾಶ

ನ್ಯಾಯಾಲಯದ ಆದೇಶವು ಕಳ್ಳಸಾಗಣೆ ಚಟುವಟಿಕೆಗಳನ್ನು ತಡೆಯುವ ಮತ್ತು ಇದಕ್ಕೆ ಕಾರಣರಾದವರನ್ನು ನ್ಯಾಯದ ಕಟಕಟೆಗೆ ತರುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಿದೆ.
ಅದರ ಪ್ರಕಾರ, ಸಿಬಿಐ ಈ ವಿಷಯವನ್ನು ತನಿಖೆ ಮಾಡುತ್ತದೆ ಮತ್ತು ಅಗತ್ಯವಿದ್ದರೆ ಪ್ರಕರಣವನ್ನು ದಾಖಲಿಸುತ್ತದೆ ಮತ್ತು ಅದನ್ನು ಅದರ ತಾರ್ಕಿಕ ತೀರ್ಮಾನದ ವರೆಗೆ ಒಯ್ಯುತ್ತದೆ ಎಂದು ನ್ಯಾಯಾಲಯ ಹೇಳಿದೆ.
ಒಣ ಅಡಿಕೆ ಕಳ್ಳಸಾಗಣೆಯನ್ನು ತಡೆಯಲು ಮಿಜೋರಾಂ ಸರ್ಕಾರ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ ಎಂದು ರುವಾತ್ಫೆಲಾ ನು ಅವರು ಹೈಕೋರ್ಟ್‌ನ ಐಜ್ವಾಲ್ ಪೀಠದಲ್ಲಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಆರೋಪಿಸಿದ್ದಾರೆ.
ಕಳೆದ ಕೆಲವು ವರ್ಷಗಳಿಂದ, ಮಿಜೋರಾಂಗೆ ಬರುವ ಬರ್ಮಾದ ಅಡಿಕೆ ಕಳ್ಳಸಾಗಣೆ ರಾಜಕೀಯ ಸಮಸ್ಯೆಯಾಗಿ ಮಾರ್ಪಟ್ಟಿದೆ, ರಾಜಕಾರಣಿಗಳು ಮತ್ತು ಉನ್ನತ ಮಟ್ಟದ ಅಧಿಕಾರಿಗಳು ಮತ್ತು ಕಳ್ಳಸಾಗಾಣಿಕೆದಾರರ ನಡುವೆ ಇದರಲ್ಲಿ ಸಂಬಂಧವಿದೆ ಎಂಬ ಆರೋಪಗಳಿವೆ.

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement