ನವದೆಹಲಿ: ಹೆನ್ಲಿ ಪಾಸ್‌ಪೋರ್ಟ್ ಸೂಚ್ಯಂಕ ಬಿಡುಗಡೆ ಮಾಡಿದ ಇತ್ತೀಚಿನ ಶ್ರೇಯಾಂಕದ ಪ್ರಕಾರ, ಸಿಂಗಾಪುರದ ಪಾಸ್‌ಪೋರ್ಟ್ ಅನ್ನು ವಿಶ್ವದ ಅತ್ಯಂತ ಶಕ್ತಿಶಾಲಿ ಪಾಸ್‌ಪೋರ್ಟ್ ಎಂದು ಹೆಸರಿಸಲಾಗಿದೆ, ಫ್ರಾನ್ಸ್, ಇಟಲಿ, ಜರ್ಮನಿ, ಸ್ಪೇನ್, ಜಪಾನ್ ಈ ಐದು ದೇಶಗಳು ಎರಡನೇ ಸ್ಥಾನದಲ್ಲಿವೆ.
ಶ್ರೇಯಾಂಕವು ಇಂಟರ್ನ್ಯಾಷನಲ್ ಏರ್ ಟ್ರಾನ್ಸ್ಪೋರ್ಟ್ ಅಸೋಸಿಯೇಷನ್ (IATA) ದ ಡೇಟಾವನ್ನು ಆಧರಿಸಿದೆ. ಭಾರತದ ಪಾಸ್‌ಪೋರ್ಟ್ 82 ನೇ ಸ್ಥಾನದಲ್ಲಿ ಇರಿಸಲಾಗಿದೆ.
ಪಟ್ಟಿಯ ಪ್ರಕಾರ ವಿಶ್ವದ ಅತ್ಯಂತ ಶಕ್ತಿಶಾಲಿ ಪಾಸ್‌ಪೋರ್ಟ್ ಹೊಂದಿರುವ ಸಿಂಗಾಪುರದ ಪಾಸ್‌ಪೋರ್ಟ್ 195 ದೇಶಗಳಿಗೆ ವೀಸಾ ಮುಕ್ತ ಪ್ರವೇಶ ನೀಡುತ್ತದೆ. ಫ್ರಾನ್ಸ್, ಇಟಲಿ, ಜರ್ಮನಿ ಮತ್ತು ಸ್ಪೇನ್ ಜಪಾನ್‌ನೊಂದಿಗೆ ಎರಡನೇ ಸ್ಥಾನದಲ್ಲಿದ್ದು, ಈ ದೇಶಗಳ ಪಾಸ್‌ಪೋರ್ಟ್ ಹೊಂದಿರುವವರಿಗೆ 192 ದೇಶಗಳಿಗೆ ವೀಸಾ ಮುಕ್ತ ಪ್ರವೇಶವನ್ನು ನೀಡುತ್ತದೆ. ಮೂರನೇ ಸ್ಥಾನದಲ್ಲಿ, ಆಸ್ಟ್ರಿಯಾ, ಫಿನ್ಲ್ಯಾಂಡ್, ಐರ್ಲೆಂಡ್, ಲಕ್ಸೆಂಬರ್ಗ್, ನೆದರ್ಲ್ಯಾಂಡ್ಸ್, ದಕ್ಷಿಣ ಕೊರಿಯಾ ಮತ್ತು ಸ್ವೀಡನ್ ಇದ್ದು, ಈ ದೇಶಗಳ ಪಾಸ್‌ಪೋರ್ಟ್ ಹೊಂದಿರುವವರು 191 ದೇಶಗಳಿಗೆ ವೀಸಾ-ಮುಕ್ತ ಪ್ರವೇಶವನ್ನು ಹೊಂದಿದ್ದಾರೆ.
ನ್ಯೂಜಿಲೆಂಡ್, ನಾರ್ವೆ, ಬೆಲ್ಜಿಯಂ, ಡೆನ್ಮಾರ್ಕ್ ಮತ್ತು ಸ್ವಿಟ್ಜರ್ಲೆಂಡ್ ಜೊತೆಗೆ ಯುನೈಟೆಡ್ ಕಿಂಗ್‌ಡಮ್ ನಾಲ್ಕನೇ ಸ್ಥಾನದಲ್ಲಿದೆ. ಆಸ್ಟ್ರೇಲಿಯಾ ಮತ್ತು ಪೋರ್ಚುಗಲ್ 5 ನೇ ಸ್ಥಾನವನ್ನು ಹಂಚಿಕೊಂಡರೆ, ಅಮೆರಿಕ 186 ದೇಶಗಳಿಗೆ ವೀಸಾ ಮುಕ್ತ ಪ್ರವೇಶದೊಂದಿಗೆ ಎಂಟನೇ ಸ್ಥಾನಕ್ಕೆ ಇಳಿದಿದೆ.
ಭಾರತದ ಪಾಸ್‌ಪೋರ್ಟ್ ಈ ಪಟ್ಟಿಯಲ್ಲಿ 82 ನೇ ಸ್ಥಾನದಲ್ಲಿದೆ. ಭಾರತದ ಪಾಸ್‌ಪೋರ್ಟ್ ಇರುವವರು ಇಂಡೋನೇಷ್ಯಾ, ಮಲೇಷ್ಯಾ ಮತ್ತು ಥೈಲ್ಯಾಂಡ್‌ನಂತಹ ಜನಪ್ರಿಯ ಸ್ಥಳಗಳು ಸೇರಿದಂತೆ 58 ದೇಶಗಳಿಗೆ ವೀಸಾ ಇಲ್ಲದೆ ಪ್ರಯಾಣಿಸಲು ನಾಗರಿಕರಿಗೆ ಅವಕಾಶವಿದೆ. ಪಾಕಿಸ್ತಾನವು 100 ನೇ ಸ್ಥಾನದಲ್ಲಿದೆ, ಪಾಸ್‌ಪೋರ್ಟ್ ಹೊಂದಿರುವವರಿಗೆ 33 ದೇಶಗಳಿಗೆ ವೀಸಾ ಮುಕ್ತ ಪ್ರವೇಶವನ್ನು ಒದಗಿಸುತ್ತದೆ. ಪಟ್ಟಿಯ ಕೆಳಭಾಗದಲ್ಲಿ ಅಫ್ಘಾನಿಸ್ತಾನವಿದ್ದು, 26 ಸ್ಥಳಗಳಿಗೆ ಮುಕ್ತ ಪ್ರವೇಶವನ್ನು ಹೊಂದಿದೆ.
2024 ರ ಟಾಪ್ -10 ಅತ್ಯಂತ ಶಕ್ತಿಶಾಲಿ ಪಾಸ್‌ಪೋರ್ಟ್‌ಗಳ ಪಟ್ಟಿ..
ಸಿಂಗಾಪುರ (195 ದೇಶಗಳು)
ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಸ್ಪೇನ್ (192)
ಆಸ್ಟ್ರಿಯಾ, ಫಿನ್ಲ್ಯಾಂಡ್, ಐರ್ಲೆಂಡ್, ಲಕ್ಸೆಂಬರ್ಗ್, ನೆದರ್ಲ್ಯಾಂಡ್ಸ್, ದಕ್ಷಿಣ ಕೊರಿಯಾ, ಸ್ವೀಡನ್ (191)
ಬೆಲ್ಜಿಯಂ, ಡೆನ್ಮಾರ್ಕ್, ನ್ಯೂಜಿಲ್ಯಾಂಡ್, ನಾರ್ವೆ, ಸ್ವಿಟ್ಜರ್ಲೆಂಡ್, ಯುನೈಟೆಡ್ ಕಿಂಗ್‌ಡಮ್ (190)
ಆಸ್ಟ್ರೇಲಿಯಾ, ಪೋರ್ಚುಗಲ್ (189)
ಗ್ರೀಸ್, ಪೋಲೆಂಡ್ (188)
ಕೆನಡಾ, ಜೆಕಿಯಾ, ಹಂಗೇರಿ, ಮಾಲ್ಟಾ (187)
ಅಮೆರಿಕ (186)
ಎಸ್ಟೋನಿಯಾ, ಲಿಥುವೇನಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್ (185)
ಐಸ್ಲ್ಯಾಂಡ್, ಲಾಟ್ವಿಯಾ, ಸ್ಲೋವಾಕಿಯಾ, ಸ್ಲೊವೇನಿಯಾ (184)
ಹೆನ್ಲಿ & ಪಾರ್ಟ್ನರ್ಸ್ ಅಧ್ಯಕ್ಷರಾದ ಕ್ರಿಶ್ಚಿಯನ್ ಕೈಲಿನ್ ಅವರು , “ವೀಸಾ-ಮುಕ್ತ ಗಮ್ಯಸ್ಥಾನಗಳನ್ನು ಪ್ರವೇಶಿಸಲು ಸಾಧ್ಯವಾಗುವ ಜಾಗತಿಕ ಸರಾಸರಿ ಸಂಖ್ಯೆಯು 2006 ರಲ್ಲಿ 58 ರಿಂದ 2024 ರಲ್ಲಿ 111 ಕ್ಕೆ ಏರಿದ್ದು, ಬಹುತೇಕ ದ್ವಿಗುಣಗೊಂಡಿದೆ. ಆದಾಗ್ಯೂ, ಸೂಚ್ಯಂಕದ ಮೇಲ್ಭಾಗ ಮತ್ತು ಕೆಳಭಾಗದಲ್ಲಿರುವವರ ನಡುವಿನ ಜಾಗತಿಕ ಚಲನಶೀಲತೆಯ ಅಂತರವು ಈಗ ಹಿಂದೆಂದಿಗಿಂತಲೂ ವಿಸ್ತಾರವಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಗ
ನಿಮ್ಮ ಕಾಮೆಂಟ್ ಬರೆಯಿರಿ