ಮಾಗೋಡು ಜಲಪಾತದ ರಸ್ತೆಯಲ್ಲಿ ಭೂ ಕುಸಿತ

ಯಲ್ಲಾಪುರ : ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಹೆಸರಾಂತ ಮಾಗೋಡಿನ ಜಲಪಾತಕ್ಕೆ ಹೋಗುವ ರಸ್ತೆಯಲ್ಲಿ ಭೂ ಕುಸಿತ ಉಂಟಾಗಿ ಜಲಪಾತಕ್ಕೆ ಹೋಗುವ ರಸ್ತೆ ಸಂಪರ್ಕ ಕಡಿತಗೊಂಡಿದೆ.
ಯಲ್ಲಾಪುರ ತಾಲೂಕಿನ ಮೊಟ್ಟೆ ಗೆದ್ದೆ ಸಮೀಪದ ಕಿರಿಯ ಪ್ರಾಥಮಿಕ ಶಾಲೆಯ ಪಕ್ಕದಲ್ಲಿನ ರಸ್ತೆಯಲ್ಲಿ ಭೂಕುಸಿತ ಉಂಟಾಗಿದ್ದು ಮಾಗೋಡ್ ಫಾಲ್ಸ್ ಗೆ ಹೋಗುವ ರಸ್ತೆ ಕಡಿತಗೊಂಡಿದೆ. ಹೀಗಾಗಿ ಮಾಗೋಡ ಜಲಪಾತ ವೀಕ್ಷಣೆಗೆ ಸಂಚಾರವನ್ನು ನಿಷೇಧಿಸಲಾಗಿದೆ. ಧಾರಾಕಾರ ಮಳೆಯಿಂದಾಗಿ ಶನಿವಾರ ಬೆಳಿಗ್ಗೆ ಭೂಕುಸಿತ ಉಂಟಾಗಿದ್ದು ಯಾವುದೇ ವಾಹನಗಳು ಚಲಿಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ.

ಈಗಾಗಲೇ ಮಾಗೋಡು ಫಾಲ್ಸ್ ನೋಡಲು ಹೋಗಿರುವ ಜನರನ್ನು ಸುರಕ್ಷಿತವಾಗಿ ಅಲ್ಲಿಂದ ವಾಪಸ್ ಕರೆತರಲಾಗಿದೆ. ಯಾವುದೇ ವಾಹನಗಳನ್ನು ಅಲ್ಲಿಗೆ ಹೋಗದಂತೆ ತಡೆದು ಸ್ಥಳೀಯರು ಕಾರ್ಯನಿರ್ವಹಿಸುತ್ತಿದ್ದಾರೆ. ಭೂಕುಸಿತದ ಸಂದರ್ಭದಲ್ಲಿ ಯಾವುದೇ ಜೀವ ಹಾನಿಯಾಗಿಲ್ಲ. ರಸ್ತೆಗೆ ಅಳವಡಿಸಿದ ಸಿಮೆಂಟ್ ರಿಂಗ್ ಗಳು ಕೊಚ್ಚಿಕೊಂಡು ಹೋಗಿವೆ. ಹೀಗಾಗಿ ಇನ್ನಷ್ಟು ಕುಸಿಯುವ ಭೀತಿ ಕಂಡುಬಂದಿದೆ.
ಸ್ಥಳಕ್ಕೆ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ವಿಶಾಲ ಕಟಾವರ, ನಂದೊಳ್ಳಿ ಗ್ರಾಮ ಪಂಚಾಯತ ಪಿಡಿೊ ರಾಜೇಶ ಶೇಟ್, ಕಂದಾಯ ಇಲಾಖೆ,ಅರಣ್ಯ ಇಲಾಖೆಯವರು ಭೇಟಿ ನೀಡಿ‌ ಪರಿಶೀಲಿಸಿದ್ದು, ಸ್ಥಳದಲ್ಲಿ ಎಚ್ಚರಿಕೆಯ ನಾಮಫಲಕ ಹಾಕಿದ್ದಾರೆ. ಸಾರ್ವಜನಿಕರಿಗೆ ಹಾಗೂ ಪ್ರವಾಸಿಗರಿಗೆ ಸಂಚಾರ ನಿಷೇಧ ಮಾಡಿದ್ದಾರೆ.

ಪ್ರಮುಖ ಸುದ್ದಿ :-   ಜೈಲಿನಲ್ಲಿ ಸುಹಾಸ ಶೆಟ್ಟಿ ಕೊಲೆಯ ಪ್ರಮುಖ ಆರೋಪಿ ಮೇಲೆ ಸಹಕೈದಿಗಳಿಂದ ಹಲ್ಲೆ ಯತ್ನ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement