ನವದೆಹಲಿ : ಅಯೋಧ್ಯೆಯ ಶ್ರೀರಾಮ ಲಲ್ಲಾ ಒಳಗೊಂಡ ಅಂಚೆ ಚೀಟಿಯನ್ನು ಲಾವೊ ಪೀಪಲ್ಸ್ ಡೆಮಾಕ್ರಟಿಕ್ ರಿಪಬ್ಲಿಕ್ (ಲಾವೊ ಪಿಡಿಆರ್) ಬಿಡುಗಡೆ ಮಾಡಿದ್ದು, ಹಿಂದೂ ದೇವರನ್ನು ಒಳಗೊಂಡ ಅಂಚೆಚೀಟಿ ಬಿಡುಗಡೆ ಮಾಡಿದ ವಿಶ್ವದ ಮೊದಲ ದೇಶವಾಗಿದೆ.
ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಡಾ ಎಸ್ ಜೈಶಂಕರ ಅವರು ಲಾವೋಸ್ ದೇಶಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಭಾರತ ಮತ್ತು ಲಾವೊ ಪಿಡಿಆರ್ ನಡುವಿನ ಆಳವಾದ ಬೇರೂರಿರುವ ನಾಗರಿಕ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಎತ್ತಿ ತೋರಿಸುವ ಈ ಅಂಚೆಚೀಟಿಯನ್ನು ಬಿಡುಗಡೆ ಮಾಡಲಾಯಿತು.
ಲಾವೋಸ್‌ನ ರಾಜಧಾನಿ ವಿಯೆಂಟಿಯಾನ್‌ನಲ್ಲಿ ನಡೆದ ಸಮಾರಂಭದಲ್ಲಿ ಅಯೋಧ್ಯೆ ಭಗವಾನ್ ರಾಮಲಲ್ಲಾನ ವಿಶೇಷ ಸ್ಮರಣಾರ್ಥ ಅಂಚೆ ಚೀಟಿಯನ್ನು ಜೈಶಂಕರ ಮತ್ತು ಲಾವೊ ಪಿಡಿಆರ್‌ನ ಉಪ ಪ್ರಧಾನಿ ಮತ್ತು ವಿದೇಶಾಂಗ ಸಚಿವ ಸಲೆಮ್‌ಕ್ಸೆ ಕೊಮ್ಮಸಿತ್ ಜಂಟಿಯಾಗಿ ಬಿಡುಗಡೆ ಮಾಡಿದರು. ಲಾವೋಸ್‌ನಲ್ಲಿರುವ ಭಾರತದ ರಾಯಭಾರಿ ಪ್ರಶಾಂತ ಅಗರವಾಲ್ ಕೂಡ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಆಸಿಯಾನ್ ಸಭೆಗಳಿಗಾಗಿ ಡಾ. ಜೈಶಂಕರ ಆಗ್ನೇಯ ಲಾವೋಸ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ವಿಶೇಷ ಅಂಚೆ ಚೀಟಿ ಬಿಡುಗಡೆ ಮಾಡಲಾಗಿದೆ.
ಸ್ಟಾಂಪ್ ಸೆಟ್ ಎರಡು ವಿಶಿಷ್ಟ ಅಂಚೆಚೀಟಿಗಳನ್ನು ಒಳಗೊಂಡಿದೆ…
ಒಂದು ಲಾವೋಸ್‌ನ ಪ್ರಾಚೀನ ರಾಜಧಾನಿ ಮತ್ತು ಗಮನಾರ್ಹ ಬೌದ್ಧ ತಾಣವಾದ ಲುವಾಂಗ್ ಪ್ರಬಾಂಗ್‌ನ ಭಗವಾನ್ ಬುದ್ಧನನ್ನು ಚಿತ್ರಿಸುತ್ತದೆ ಮತ್ತು ಇನ್ನೊಂದು ಅಯೋಧ್ಯೆಯ ಶ್ರೀ ರಾಮಲಲ್ಲಾವನ್ನು ಚಿತ್ರಿಸುತ್ತದೆ. ಬೌದ್ಧಧರ್ಮವು ಐತಿಹಾಸಿಕವಾಗಿ ಭಾರತ ಮತ್ತು ಲಾವೊ PDR ನಡುವೆ ಆಳವಾದ ಸಂಪರ್ಕವನ್ನು ರೂಪಿಸಿದೆ, ಭಾರತವು ಬೌದ್ಧಧರ್ಮದ ಜನ್ಮಸ್ಥಳವಾಗಿದೆ ಮತ್ತು ನಂಬಿಕೆಗೆ ಸಂಬಂಧಿಸಿದ ಹಲವಾರು ಪ್ರಮುಖ ಸ್ಥಳಗಳಿಗೆ ನೆಲೆಯಾಗಿದೆ ಹಾಗೂ ವಿಶೇಷವಾಗಿ ಆಗ್ನೇಯ ಏಷ್ಯಾದಲ್ಲಿ ವ್ಯಾಪಕವಾದ ಅನುಯಾಯಿಗಳನ್ನು ಹೊಂದಿದೆ.
ಅಯೋಧ್ಯೆಯ ರಾಮಮಂದಿರದಲ್ಲಿ ಪ್ರತಿಷ್ಠಾಪಿಸಲಾಗಿರುವ ಭಗವಾನ್ ರಾಮನ ವಿಗ್ರಹವು ಐದು ವರ್ಷದ ಮಗುವಿನ (ರಾಮಲಲ್ಲಾ) ರೂಪದಲ್ಲಿದೆ ಮತ್ತು ಕಪ್ಪು ಬಣ್ಣದ ಕಲ್ಲಿನಿಂದ ಕತ್ತಲ್ಪಟ್ಟಿದೆ ಮತ್ತು 51 ಇಂಚು ಎತ್ತರವಿದೆ. ಇದನ್ನು ಕರ್ನಾಟಕದ ಮೈಸೂರಿನ ಶಿಲ್ಪಿ ಅರುಣ ಯೋಗಿರಾಜ ಅವರು ಕೆತ್ತಿದ್ದಾರೆ.
ಅಯೋಧ್ಯಾದಲ್ಲಿ ಶ್ರೀರಾಮ ಲಲ್ಲಾನ ವಿಗ್ರಹವನ್ನು ಜನವರಿ 22, 2024 ರಂದು ದೇವಾಲಯದ ಗರ್ಭಗುಡಿಯಲ್ಲಿ ವಿಧ್ಯುಕ್ತವಾಗಿ ಸ್ಥಾಪಿಸಲಾಯಿತು. ರಾಮಾಯಣವು ಲಾವೋಸ್ ಸಂಸ್ಕೃತಿಯಲ್ಲಿಯೂ ರಾಮಾಯಣ ವಿಶೇಷ ಸ್ಥಾನವನ್ನು ಹೊಂದಿದೆ. ಲಾವೋಸ್‌ನಲ್ಲಿ ರಾಮಾಯಣವನ್ನು ರಾಮಕಿಯನ್ ಅಥವಾ ಫ್ರಾ ಲಕ್ ಫ್ರಾ ರಾಮ್‌ನ ಕಥೆ ಎಂದು ಕರೆಯಲಾಗುತ್ತದೆ. ಇದನ್ನು ಹೆಚ್ಚಾಗಿ ಶುಭ ಸಮಾರಂಭಗಳಲ್ಲಿ ನಡೆಸಲಾಗುತ್ತದೆ.
ನಿಮ್ಮ ಕಾಮೆಂಟ್ ಬರೆಯಿರಿ