ವ್ಯಕ್ತಿ ಮೇಲೆ ಹಲ್ಲೆ ನಡೆಸಿ ಆತನನ್ನು ಜೀವಂತವಾಗಿ ಹುಗಿದ ನಾಲ್ವರು : ಆದ್ರೆ ಮಣ್ಣು ಕೆದಕಿ ಬದುಕಿಸಿದ ನಾಯಿಗಳು…!

ಆಗ್ರಾ: ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ನಾಲ್ವರು ವ್ಯಕ್ತಿಗಳು ತನ್ನ ಮೇಲೆ ಹಲ್ಲೆ ನಡೆಸಿ ಜೀವಂತವಾಗಿ ಮಣ್ಣಿನಡಿ ಹೂಳಿದ ನಂತರ ಬೀದಿ ನಾಯಿಗಳು ಅಗೆದು ತನ್ನನ್ನು ಬದುಕಿಸಿವೆ ಎಂದು ಉತ್ತರ ಪ್ರದೇಶದ ಆಗ್ರಾದಲ್ಲಿ 24 ವರ್ಷದ ವ್ಯಕ್ತಿಯೊಬ್ಬರು ವಿಚಿತ್ರವಾದ ಹೇಳಿಕೆ ನೀಡಿದ್ದಾರೆ.
ಜುಲೈ 18 ರಂದು, ಆಗ್ರಾದ ಅರ್ಟೋನಿ ಪ್ರದೇಶದಲ್ಲಿ ಅಂಕಿತ, ಗೌರವ, ಕರಣ್‌ ಮತ್ತು ಆಕಾಶ ಎಂಬ ನಾಲ್ವರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ರೂಪ ಕಿಶೋರ ಯಾನೆ ಹ್ಯಾಪಿ ಎಂದು ಗುರುತಿಸಲಾದ ಸಂತ್ರಸ್ತ ಆರೋಪಿಸಿದ್ದಾರೆ.
ರೂಪ ಕಿಶೋರ್‌ ಎಫ್‌ಐಆರ್ ಪ್ರಕಾರ, ನಾಲ್ವರು ಆತನ ಮೇಲೆ ಹಲ್ಲೆ ನಡೆಸಿ ಕತ್ತು ಹಿಸುಕಿದ್ದಾರೆ. ನಂತರ ಹಲ್ಲೆಯಿಂದ ಆತ ಮೃತಪಟ್ಟಿದ್ದಾನೆ ಎಂದು ಭಾವಿಸಿ ನಾಲ್ವರು ಆತನನ್ನು ತಮ್ಮ ಜಮೀನಿನಲ್ಲಿ ಹೂಳಿದ್ದಾರೆ. ಜೀವಂತವಾಗಿ ಹೂಳಿದರೂ ರೂಪಕಿಶೋರ ಬದುಕುಳಿಯುವಲ್ಲಿ ಯಶಸ್ವಿಯಾದರು.

ಯಾಕೆಂದರೆ ಹೂತಿದ್ದ ಸ್ಥಳದಲ್ಲಿ ಬೀದಿ ನಾಯಿಗಳ ದಂಡು ಅಗೆಯಲು ಪ್ರಾರಂಭಿಸಿತು. ತನ್ನನ್ನು ಹೂತುಹಾಕಿದ್ದ ಜಾಗದಲ್ಲಿ ಮಾಂಸದ ವಾಸನೆ ಹಿಡಿದ ಬೀದಿ ನಾಯಿಗಳು, ಕಾಲಿನಿಂದ ಮಣ್ಣನ್ನು ಕೆದಕಿ ತೆಗೆದಿದ್ದವು. ದೇಹ ಹೊರಗೆ ಕಾಣಿಸಿದ ನಂತರ ನಾಯಿಗಳು ಮಾಂಸವನ್ನು ಕಚ್ಚಲು ಪ್ರಾರಂಭಿಸಿದಾಗ ತನಗೆ ಪ್ರಜ್ಞೆ ಪ್ರಜ್ಞೆ ಬಂದಿತ್ತು ಎಂದು 24 ವರ್ಷದ ರೂಪ ಕಿಶೋರ ಹೇಳಿದ್ದಾರೆ. ಎಚ್ಚರವಾದ ನಂತರ ಸಮೀಪದ ಹಳ್ಳಿಯತ್ತ ನಡೆದುಕೊಂಡು ಹೋದೆ. ಅಲ್ಲಿನ ಗ್ರಾಮಸ್ಥರು ನನ್ನನ್ನು ಗುರುತಿಸಿ ಆಸ್ಪತ್ರೆಗೆ ದಾಖಲಿಸಿದರು. ಪ್ರಸ್ತುತ ಆಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದೇನೆ ಎಂದು ರೂಪ ಕಿಶೋರ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ..| ಬಾಲಕರ ಹುಚ್ಚಾಟ : ರೀಲ್‌ ಸ್ಟಂಟ್‌ ಮಾಡಲು ವೇಗವಾಗಿ ಚಲಿಸುತ್ತಿದ್ದ ರೈಲಿನ ಕೆಳಗೆ ಮಲಗಿದ ಬಾಲಕ : ಮೂವರು ಅಪ್ರಾಪ್ತರ ಬಂಧನ

ಯುವಕ ಅಲ್ಲಿಂದ ಹೊರನಡೆದು ಕೆಲವು ಸ್ಥಳೀಯರನ್ನು ಸಂಪರ್ಕಿಸಿದರು ಮತ್ತು ನಂತರ ಅವರು ಚಿಕಿತ್ಸೆಗಾಗಿ ಇವರನ್ನು ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದರು.
ನಾಲ್ವರು ಹಲ್ಲೆಕೋರರು ತಮ್ಮ ಮಗನನ್ನು ತಮ್ಮ ಮನೆಯಿಂದ ಬಲವಂತವಾಗಿ ಕರೆದೊಯ್ದಿದ್ದಾರೆ ಎಂದು ರೂಪ ಕಿಶೋರ ಅವರ ತಾಯಿ ಆರೋಪಿಸಿದ್ದಾರೆ. ಪ್ರಕರಣದ ಸಂಪೂರ್ಣ ತನಿಖೆ ನಡೆಯುತ್ತಿದ್ದು, ಪ್ರಸ್ತುತ ಬಂಧನದಿಂದ ತಪ್ಪಿಸಿಕೊಂಡು ತಿರುಗುತ್ತಿರುವ ನಾಲ್ವರು ಆರೋಪಿಗಳನ್ನು ಹಿಡಿಯಲು ಪ್ರಯತ್ನಗಳು ನಡೆಯುತ್ತಿವೆ. ಅಲ್ಲದೆ ರೂಪ ಕಿಶೋರ ನೀಡಿದ ದೂರಿನ ಸತ್ಯಾಸತ್ಯತೆಯ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

5 / 5. 4

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement