ಪ್ಯಾರಿಸ್‌ ಒಲಿಂಪಿಕ್‌ ; ಭಾರತದ ಒಲಿಂಪಿಕ್‌ ಹಾಕಿ ಆಟಗಾರ ಅಮಿತ್‌ ರೋಹಿದಾಸ್‌‍ಗೆ ಒಂದು ಪಂದ್ಯ ನಿಷೇಧ

ಪ್ಯಾರಿಸ್‌ : ಒಲಿಂಪಿಕ್‌ನಲ್ಲಿ ಪುರುಷರ ಹಾಕಿಯ ಕ್ವಾರ್ಟರ್‌ಫೈನಲ್‌ನಲ್ಲಿ ಗ್ರೇಟ್‌ ಬ್ರಿಟನ್‌ ವಿರುದ್ಧ ನಡೆದ ಪಂದ್ಯದ ವೇಳೆ ರೆಡ್‌ ಕಾರ್ಡ್‌ನಿಂದ ಅಮಾನತುಗೊಂಡಿದ್ದ ಭಾರತ ತಂಡದ ಪ್ರಮುಖ ರಕ್ಷಣಾ ಆಟಗಾರ ಅಮಿತ್‌ ರೋಹಿದಾಸ್‌‍ ಅವರು ಜರ್ಮನಿ ವಿರುದ್ಧ ಇಂದು (ಸೋಮವಾರ) ನಡೆಯಲಿರುವ ಸೆಮಿಫೈನಲ್‌ನಿಂದ ಹೊರಗುಳಿದಿದ್ದಾರೆ.
ಇದರಿಂದಾಗಿ ಭಾರತವು ಪ್ರಮುಖ ತಂಡದಲ್ಲಿ ಕೇವಲ 15 ಆಟಗಾರ ಮಾತ್ರ ಹೊಂದಿರುತ್ತದೆ, ಇದು 8 ಬಾರಿ ಒಲಿಂಪಿಕ್‌ ಚಾಂಪಿಯನ್‌ಗಳಿಗೆ ದೊಡ್ಡ ಹಿನ್ನಡೆಯಾಗಿದೆ.
ಭಾನುವಾರ ನಡೆದ ಭಾರತ ಮತ್ತು ಗ್ರೇಟ್‌ ಬ್ರಿಟನ್‌ ಪಂದ್ಯದ ವೇಳೆ ಸಂಭವಿಸಿದ ಎಫ್‌ಐಎಚ್‌ ನೀತಿ ಸಂಹಿತೆಯ ಉಲ್ಲಂಘನೆಗಾಗಿ ಅಮಿತ್‌ ರೋಹಿದಾಸ್‌‍ ಅವರನ್ನು ಒಂದು ಪಂದ್ಯಕ್ಕೆ ಅಮಾನತುಗೊಳಿಸಲಾಗಿದೆ ಎಂದು ಎಫ್‌ಐಎಚ್‌ ಅಧಿಕೃತ ಹೇಳಿಕೆ ತಿಳಿಸಿದೆ.
ಅಮಿತ್‌ ರೋಹಿದಾಸ್‌‍ ಪಂದ್ಯದ ವೇಳೆ ತಮ್ಮ ಹಾಕಿ ಸ್ಟಿಕ್‌ ಅನ್ನು ಉದ್ದೇಶಪೂರ್ವಕವಾಗಿ ಪ್ರತಿಸ್ಪರ್ಧಿ ಆಟಗಾರನಿಗೆ ಬಡಿಯುವಂತೆ ಮಾಡಿದ್ದಾರೆ ಎಂದು ಪಂದ್ಯದ ರೆಫರಿ ತೀರ್ಪಿನ ನಂತರ ಅವರಿಗೆ ರೆಡ್‌ ಕಾರ್ಡ್‌ ತೋರಿಸಿ ಅಂತಿಮ ಸುಮಾರು 40 ನಿಮಿಷಗಳ ಕಾಲದಿಂದ ಪಂದ್ಯದಿಂದ ಹೊರಗೆ ಕಳುಹಿಸಲಾಗಿತ್ತು.
ಈಗ ಅವರನ್ನು ಸೆಮಿಫೈನಲ್‌ ಪಂದ್ಯಕ್ಕೆ ಅಮಾನತುಗೊಳಿಸಲಾಗಿದ್ದು, ಭಾರತದ ತಂಡದಲ್ಲಿ 15 ಆಟಗಾರರು ಇರಲಿದ್ದಾರೆ.

ಪ್ರಮುಖ ಸುದ್ದಿ :-   ರಾಜ್ಯಸಭಾ ಚುನಾವಣೆ: 11 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement