ವೀಡಿಯೊ..| ನಡೆಯಲು ಸಾಧ್ಯವಾಗದ ಸ್ಥಿತಿಯಲ್ಲಿ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ; ಶಾಕ್‌ ಆದ ಕ್ರಿಕೆಟ್‌ ಪ್ರೇಮಿಗಳು

ಭಾರತದ ಮಾಜಿ ಕ್ರಿಕೆಟಿಗ ಮತ್ತು ಸಚಿನ್ ತೆಂಡೂಲ್ಕರ್ ಅವರ ಆಪ್ತ ಸ್ನೇಹಿತ ವಿನೋದ್ ಕಾಂಬ್ಳಿ ಅವರು ನಡೆದುಕೊಂಡು ಹೋಗಲಾರದ ಸ್ಥಿತಿಯಲ್ಲಿದ್ದಾರೆಯೇ…? ಅವರು ನಡೆದುಕೊಂಡು ಹೋಗಲು ಸಾಧ್ಯವಾಗದೆ ಪಕ್ಕದಲ್ಲಿದ್ದವರ ಸಹಾಯ ಕೇಳಿದ ವೀಡಿಯೊವೊಂದು ವೈರಲ್‌ ಆಗಿದೆ.
ಭಾರತದ ಕ್ರಿಕೆಟ್‌ನಲ್ಲಿ ಅತ್ಯಂತ ಪ್ರತಿಭಾನ್ವಿತ ಎಡಗೈ ಆಟಗಾರರಲ್ಲಿ ಒಬ್ಬರಾಗಿದ್ದ ವಿನೋದ ಕಾಂಬ್ಳಿ ಅವರಿಗೆ ರಸ್ತೆಯಲ್ಲಿ ನಿಲ್ಲಲು ಸಾಧ್ಯವಾಗದೆ ಬೈಕ್‌ನ ಆಸರೆ ಪಡೆಯುತ್ತಿರುವುದು ವೀಡಿಯೊದಲ್ಲಿ ಕಂಡುಬಂದಿದೆ. ಅವರಿಗೆ ಒಂದು ಹೆಜ್ಜೆಯೂ ಚಲಿಸಲು ಸಾಧ್ಯವಾಗಲಿಲ್ಲ. ಅಲ್ಲದೆ ನಡೆಯಲಾಗದೆ ಬೈಕ್‌ನ ಸಹಾಯದಿಂದ ನಿಂತು ಕೊಳ್ಳಲು ಪ್ರಯತ್ನಿಸಿದ್ದಾರೆ. ಆದರೆ ಅವರಿಗೆ ಹೆಜ್ಜೆ ಇಡಲು ಸಾಧ್ಯವಾಗದೇ ಇರುವುದು ಕಂಡುಬಂದಿದೆ.

ಇದನ್ನು ಗಮನಿಸಿದ ಕೆಲವರು, ಅವರ ಎರಡೂ ಕೈಗಳನ್ನು ಹಿಡಿದು ನಡೆಯಲು ಸಹಾಯ ಮಾಡಿದರು. ಪಕ್ಕದಲ್ಲಿ ನಿಂತಿದ್ದ ಇಬ್ಬರು ಅವರ ಕೈ ಹಿಡಿದುಕೊಂಡು ಕಾಂಬ್ಳಿ ಅವರನ್ನು ರಸ್ತೆಯಿಂದ ಮೇಲೆತ್ತಿದ್ದಾರೆ. ಪಕ್ಕದಲ್ಲಿ ನಿಂತಿದ್ದ ಇಬ್ಬರು ಅವರ ಕೈ ಹಿಡಿದುಕೊಂಡು ಕಾಂಬ್ಳಿ ಅವರನ್ನು ರಸ್ತೆಯಿಂದ ಮೇಲೆತ್ತಿದ್ದಾರೆ.ವಿನೋದ ಕಾಂಬ್ಳಿ ಕೆಲ ದಿನಗಳಿಂದ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ ಎಂಬ ವರದಿಗಳಿದ್ದವು. ಮುಂಬೈನಲ್ಲಿ ವಾಹನ ಚಲಾಯಿಸುತ್ತಿದ್ದಾಗ ಹೃದಯಾಘಾತಕ್ಕೆ ಒಳಗಾದ ಅವರುಆಂಜಿಯೋಪ್ಲ್ಯಾಸ್ಟಿ ಕೂಡ ಮಾಡಿಸಿಕೊಂಡಿದ್ದರು. ಕಾಂಬ್ಳಿ ಅವರು ಅದ್ಭುತ ಎಡಗೈ ಬ್ಯಾಟರ್‌ ಹಾಗೂ ಸಚಿನ್‌ ತೆಂಡೂಲ್ಕರ್‌ ಅವರ ಬಾಲ್ಯ ಸ್ನೇಹಿತ. ಇವರಿಬ್ಬರು ಮುಂಬೈ ಪರ ದೇಶೀಯ ಕ್ರಿಕೆಟ್ ಮತ್ತು ನಂತರ ಭಾರತದ ತಂಡದಲ್ಲಿ ಒಟ್ಟಿಗೆ ಆಡಿದ್ದರು.

ಪ್ರಮುಖ ಸುದ್ದಿ :-   ಬೆಂಗಳೂರು ಬಳಿ ಯುವತಿಗೆ ಕಿರುಕುಳ ನೀಡಿ, ಹಲ್ಲೆಗೈದ ಗ್ಯಾಂಗ್ ; ಕೃತ್ಯ ಸಿಸಿಟಿವಿಯಲ್ಲಿ ಸೆರೆ

ಇಬ್ಬರೂ ಸ್ಟಾರ್ ಕ್ರಿಕೆಟಿಗರಿಗೆ ದಿವಂಗತ ರಮಾಕಾಂತ್ ಅಚ್ರೇಕರ್‌ ಅವರು ಮಾರ್ಗದರ್ಶನ ನೀಡಿದ್ದರು. ಸಚಿನ್ 1989 ರಲ್ಲಿ ಭಾರತದ ತಂಡಕ್ಕೆ ಪಾದಾರ್ಪಣೆ ಮಾಡಿದರೆ, ಕಾಂಬ್ಳಿ 1991 ರಲ್ಲಿ ಭಾರತ ತಂಡಕ್ಕೆ ಎಂಟ್ರಿ ಕೊಟ್ಟರು. ಕಾಂಬ್ಳಿ ಅವರು ತೆಂಡೂಲ್ಕರ್ ಅವರಂತೆಯೇ ಎತ್ತರವನ್ನು ಸಾಧಿಸದಿದ್ದರೂ, ಕಾಂಬ್ಳಿ ರಾಷ್ಟ್ರಕ್ಕಾಗಿ 100ಕ್ಕೂ ಹೆಚ್ಚು ಏಕದಿನ ಹಾಗೂ 17 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ ಎಂಬುದು ಇಲ್ಲಿ ಉಲ್ಲೇಖಾರ್ಹ. ಅವರು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 262 ರ ಅತ್ಯುತ್ತಮ ವೈಯಕ್ತಿಕ ಸ್ಕೋರ್‌ನೊಂದಿಗೆ ಸುಮಾರು 10,000 ರನ್‌ಗಳನ್ನು ಗಳಿಸಿದರು. ಕಾಂಬ್ಲಿ 1991 ಮತ್ತು 2000 ರ ನಡುವೆ 104 ODI ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದರು, 14 ಅರ್ಧಶತಕಗಳು ಮತ್ತು ಎರಡು ಶತಕಗಳೊಂದಿಗೆ 2477 ರನ್‌ಗಳನ್ನು ಗಳಿಸಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ..| ಛತ್ತೀಸ್‌ಗಡದಲ್ಲಿ 3 ತಿಂಗಳ ಪಡಿತರ ಒಂದೇ ಬಾರಿಗೆ ವಿತರಣೆ ; ಗೇಟ್‌ ಮುರಿದು ಒಳ ನುಗ್ಗಿದ ಜನ ಸಮೂಹ...!

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement