ಬೆಳೆಗಳ ಇಳುವರಿ-ಪೌಷ್ಠಿಕಾಂಶ ಹೆಚ್ಚಿಸುವ ಹವಾಮಾನ-ನಿರೋಧಕ 109 ಪ್ರಭೇದದ ಬೀಜಗಳನ್ನು ಬಿಡುಗಡೆ ಮಾಡಿದ ಪ್ರಧಾನಿ ಮೋದಿ

ನವದೆಹಲಿ  ಕೃಷಿ ಉತ್ಪಾದಕತೆ ಮತ್ತು ರೈತರ ಆದಾಯವನ್ನು ಹೆಚ್ಚಿಸುವ ಪ್ರಯತ್ನದಲ್ಲಿ ಅಧಿಕ ಇಳುವರಿ ನೀಡುವ, ಹವಾಮಾನ-ನಿರೋಧಕ ಮತ್ತು ಜೈವಿಕ ಬಲವರ್ಧಿತ ಬೀಜ ತಳಿಗಳ ಕೃಷಿ ಮತ್ತು ತೋಟಗಾರಿಕಾ ಬೆಳೆಗಳ 109 ಪ್ರಭೇದಗಳ ಬೀಜಗಳನ್ನು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಬಿಡುಗಡೆ ಮಾಡಿದ್ದಾರೆ.
ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್ (ICAR) ಅಭಿವೃದ್ಧಿಪಡಿಸಿದ ಈ ಪ್ರಭೇದಗಳು 34 ಕ್ಷೇತ್ರ ಬೆಳೆಗಳು ಮತ್ತು 27 ತೋಟಗಾರಿಕಾ ಬೆಳೆಗಳನ್ನು ಒಳಗೊಂಡಂತೆ 61 ಬೆಳೆಗಳನ್ನು ವ್ಯಾಪಿಸಿವೆ.
ಕಾರ್ಯಕ್ರಮವೊಂದರಲ್ಲಿ, ಪ್ರಧಾನಿ ಮೋದಿ ಅವರು ದೆಹಲಿಯ ಪುಸಾ ಕ್ಯಾಂಪಸ್‌ನಲ್ಲಿ ಮೂರು ಪ್ರಾಯೋಗಿಕ ಕೃಷಿ ಪ್ಲಾಟ್‌ಗಳಲ್ಲಿ ಬೀಜಗಳನ್ನು ಅನಾವರಣಗೊಳಿಸಿದರು, ಅಲ್ಲಿ ಅವರು ರೈತರು ಮತ್ತು ವಿಜ್ಞಾನಿಗಳೊಂದಿಗೆ ಸಂವಾದ ನಡೆಸಿದರು. ಕ್ಷೇತ್ರ ಬೆಳೆ ಪ್ರಭೇದಗಳಲ್ಲಿ ಧಾನ್ಯಗಳು, ರಾಗಿ, ಮೇವಿನ ಬೆಳೆಗಳು, ಎಣ್ಣೆಕಾಳುಗಳು, ದ್ವಿದಳ ಧಾನ್ಯಗಳು, ಕಬ್ಬು, ಹತ್ತಿ ಮತ್ತು ನಾರಿನ ಬೆಳೆಗಳು ಸೇರಿವೆ.

ತೋಟಗಾರಿಕೆಗಾಗಿ ಹೊಸ ಬಗೆಯ ಹಣ್ಣುಗಳು, ತರಕಾರಿಗಳು, ತೋಟದ ಬೆಳೆಗಳು, ಗೆಡ್ಡೆಗಳು, ಮಸಾಲೆಗಳು, ಹೂವುಗಳು ಮತ್ತು ಔಷಧೀಯ ಸಸ್ಯಗಳನ್ನು ಪ್ರಧಾನಿ ಬಿಡುಗಡೆ ಮಾಡಿದರು.
ರೈತರ ಆದಾಯವನ್ನು ಹೆಚ್ಚಿಸಲು ಸುಸ್ಥಿರ ಕೃಷಿ ಪದ್ಧತಿಗಳು ಮತ್ತು ಹವಾಮಾನ-ನಿರೋಧಕ ವಿಧಾನಗಳ ಬಳಕೆಗೆ ಪ್ರಧಾನಿ ಮೋದಿ ಪ್ರತಿಪಾದಿಸಿದ್ದಾರೆ. ಎಂಬುದನ್ನು ಗಮನಿಸಬೇಕು. ಭಾರತದಲ್ಲಿನ ಅಪೌಷ್ಟಿಕತೆ ಕೊರತೆ ನೀಗಿಸಲು ಮಧ್ಯಾಹ್ನದ ಬಿಸಿಯೂಟ ಯೋಜನೆ ಮತ್ತು ಅಂಗನವಾಡಿ ಸೇವೆಗಳಂತಹ ಸರ್ಕಾರಿ ಯೋಜನೆಗಳಿಗೆ ಅವುಗಳನ್ನು ಲಿಂಕ್ ಮಾಡುವ ಮೂಲಕ ಜೈವಿಕ ಬಲವರ್ಧಿತ ಬೆಳೆ ಪ್ರಭೇದಗಳ ಪ್ರಚಾರಕ್ಕೂ ಅವರು ಒತ್ತು ನೀಡಿದರು.

ಇದಕ್ಕೂ ಮುನ್ನ ಮಾತನಾಡಿದ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ ಅವರು, 109 ತಳಿಗಳ ಬೀಜಗಳಲ್ಲಿ 23 ತಳಿಗಳ ಧಾನ್ಯಗಳು, ಒಂಬತ್ತು ತಳಿಗಳ ಅಕ್ಕಿ, ಎರಡು ತಳಿಗಳ ಗೋಧಿ, ಒಂದು ತಳಿಗಳ ಬಾರ್ಲಿ, ಆರು ತಳಿಗಳ ಜೋಳ, ಒಂದು ತಳಿಯ ಬೇಳೆ, ಒಂದು ತಳಿಯ ರಾಗಿ, ಒಂದು ತಳಿಯ ಚೀನಿ, ಒಂದು ತಳಿಯ ಸಾಂಬಾ, ಎರಡು ತಳಿಗಳ ಅರ್ಹರ್, ಎರಡು ತಳಿಗಳ ಅವರೆ, ಮೂರು ತಳಿಗಳ ಉದ್ದಿನಬೇಳೆ, ಎರಡು ತಳಿಗಳ ಹಸಿಬೇಳೆ, ಏಳು ತಳಿಗಳ ಎಣ್ಣೆಕಾಳುಗಳು ಹಾಗೂ ಏಳು ತಳಿಗಳ ಮೇವು ಮತ್ತು ಕಬ್ಬು, ಐದು ತಳಿಗಳ ಹತ್ತಿ , ಒಂದು ತಳಿಯ ಸೆಣಬು ಮತ್ತು 40 ತಳಿಗಳ ತೋಟಗಾರಿಕೆ ಬೆಳೆಗಳು ಸೇರಿವೆ ಎಂದು ಹೇಳಿದರು.
ಅಂತಾರಾಷ್ಟ್ರೀಯ ಪರಿಸ್ಥಿತಿಗಳಿಂದ ರಸಗೊಬ್ಬರಗಳನ್ನು ಸಾಗಿಸುವ ಹಡಗುಗಳು ದೀರ್ಘ ಮತ್ತು ಸಮಯ ತೆಗೆದುಕೊಳ್ಳುವ ಮಾರ್ಗವನ್ನು ತೆಗೆದುಕೊಳ್ಳಬೇಕಾಗಿರುವುದರಿಂದ ಈ ವರ್ಷ 2,625 ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜ್ ನೀಡಲಾಗಿದೆ. ರೈತನ ಮೇಲೆ ಹೊರೆ ಬೀಳದಂತೆ ವಿಶೇಷ ಪ್ಯಾಕೇಜ್ ಘೋಷಿಸಲಾಗಿದೆ ಎಂದು ಅವರು ಹೇಳಿದರು.

ಪ್ರಮುಖ ಸುದ್ದಿ :-   ಬೆಂಗಳೂರು ಬಳಿ ಯುವತಿಗೆ ಕಿರುಕುಳ ನೀಡಿ, ಹಲ್ಲೆಗೈದ ಗ್ಯಾಂಗ್ ; ಕೃತ್ಯ ಸಿಸಿಟಿವಿಯಲ್ಲಿ ಸೆರೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement